ದಕ್ಷಿಣ ಕನ್ನಡ: ಇಲ್ಲಿದ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ವಿವಿಧ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ, ಉದ್ಯೋಗವನ್ನು ಹುಡುಕುತ್ತಿರೋರಿಗೆ, ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ನಮ್ಮ ಸಂಸ್ಥೆಯಿಂದ ವಿವಿಧ ಉದ್ಯೋಗ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದಿದೆ.
ಕೇಂದ್ರ ಸರ್ಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟಿರುವಂತ ರುಡ್ ಸೆಟ್ ಸಂಸ್ಥೆಯಿಂದ ದೇಶದ ವಿವಿಧ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ, ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ ಕಲ್ಪಿಸುತ್ತಿದೆ ಎಂದಿದೆ.
ರುಡ್ ಸೆಟ್ ಸಂಸ್ಥೆಯಿಂದ ಈ ಕೆಳಗಿನ ಉಚಿತ ತರಬೇತಿಗೆ ಅರ್ಜಿ ಆಹ್ವಾನ
- ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ವರ್ಕಿಂಗ್ – ದಿನಾಂಕ 03-11-2025ರಿಂದ 17-12-2025ರವರೆಗೆ 45 ದಿನಗಳ ಉಚಿತ ತರಬೇತಿ.
- ಜೇನುಕೃಷಿ – ದಿನಾಂಕ 06-11-2025ರಿಂದ 25-11-2025ರವರೆಗೆ 20 ದಿನಗಳು.
- ತರಕಾರಿ ನರ್ಸರಿ ನಿರ್ವಹಣೆ ಮತ್ತು ಬೆಳೆಸುವ ತರಬೇತಿ- ದಿನಾಂಕ 10-11-2025ರಿಂದ 21-11-2025ರವರೆಗೆ 12 ದಿನಗಳ ತರಬೇತಿ
- ಕೃಷಿ ಉದ್ಯಮಿ- ಕೋಳಿ ಸಾಕಾಣಿಕೆ – ದಿನಾಂಕ 17-11-2025ರಿಂದ 29-11-2025ರವರೆಗೆ 13 ದಿನಗಳು ಉಚಿತ ತರಬೇತಿ
- ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ – ದಿನಾಂಕ 01-12-2025ರಿಂದ 31-12-2025ರವರೆಗೆ 30 ದಿನಗಳು ಉಚಿತ ತರಬೇತಿ.
- ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ – ದಿನಾಂಕ 30-11-2025ರಿಂದ 13-01-2026ರವರೆಗೆ 35 ದಿನಗಳು.
- ದ್ವಿಚಕ್ರ ವಾಹನ ದುರಸ್ತಿ ತರಬೇತಿ – ದಿನಾಂಕ 12-12-2025ರಿಂದ 10-01-2026ರವರೆಗೆ 30 ದಿನಗಳು.
ಈ ಮೇಲ್ಕಂಡ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ತರಬೇತಿಯನ್ನು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಅಭ್ಯರ್ಥಿಯು 18ರಿಂದ 45 ವರ್ಷಗಳ ವಯೋಮಿತಿಯಲ್ಲಿ ಇರಬೇಕು. ಕನ್ನಡ ಓದಲು, ಬರೆಯೋದಕ್ಕೆ ಬರಬೇಕು ಎಂದಿದೆ.
ಆಸಕ್ತ ಯುವಕ, ಯುವತಿಯರು ರುಡ್ ಸೆಟ್ ಸಂಸ್ಥೆಯ ವೆಬ್ ಸೈಟ್ www.rudsetujire.com ಇಲ್ಲಿಗೆ ಭೇಟಿ ನೀಡಿ ಅರ್ಜಿಯನ್ನು ಆನ್ ಲೈನ್ ಮೂಲಕವೂ ಸಲ್ಲಿಸಬಹುದಾಗಿದೆ. ಅಂಚೆ ಮೂಲಕ ಅರ್ಜಿ ಸಲ್ಲಿಸುವುದಾದರೇ ಸ್ವವಿವರ ಸಹಿತ ಅಗತ್ಯ ದಾಖಲೆಗಳನ್ನು ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ-574240 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಹೇಳಿದೆ.
ಇನ್ನೂ ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ 08256-236404, 9902594791, 9591044014, 6364561982 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ
BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ








