ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಸಂಬಂಧ ಇಇಡಿಎಸ್ ತಂತ್ರಾಂಶದಲ್ಲಿ ಇಂದೀಕರಣ ಮಾಡಲು ಹಾಗೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಮೇ.31ರವರೆಗೆ ದಿನಾಂಕ ವಿಸ್ತರಣೆ ಮಾಡಿ ಆದೇಶಿಸಿದ್ದಾರೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾಪನ ಪತ್ರ ಹೊರಡಿಸಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ 2023-24 ಸಂಬಂಧ ಉಲ್ಲೇಖ 1ರ ಅಧಿಸೂಚನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಲಯ ಬದಲಾವಣೆ ಸಹಿತ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಳನ್ನು ಹಮ್ಮಿಕೊಳ್ಳಲು ವೇಳಾಪಟ್ಟಿ ಹೊರಡಿಸಲಾಗಿದ್ದು, ವರ್ಗಾವಣಾ ಕಾಯ್ದೆ ಮತ್ತು ನಿಯಮಗಳನ್ನು ಎಲ್ಲಾ ಹಂತದ ವರ್ಗಾವಣಾ ಪ್ರಾಧಿಕಾರಿಗಳು ಕಡ್ಡಾಯವಾಗಿ ಓದಿಕೊಂಡು ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಹಾಗೂ ಶಿಕ್ಷಕರ ವರ್ಗಾವಣೆ ಕಾಯ್ದೆ /ನಿಯಮಗಳು-2020 ಮತ್ತು ತಿದ್ದುಪಡಿ ಕಾಯ್ದೆ/ ನಿಯಮಗಳು-2022ರ ಪ್ರಕಾರ ಅಗತ್ಯ ಕ್ರಮವಹಿಸಲು ಉಲ್ಲೇಖ-2ರಂತೆ ಕ್ಷೇತ್ರಶಿಕ್ಷಣಾಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿರುತ್ತದೆ ಎಂದಿದೆ.
ಉಲ್ಲೇಖ-3 ರಂತ ದಿನಾಂಕ: 20.05 2024 ರಂದು ನಡೆಸಿದ ವಿಡಿಯೋ ಕಾನ್ಸರನ್ಯ ನಲ್ಲಿ ತಿಳಿಸಿರುವಂತೆ ಈ ಕೆಳಕಂಡ ಅಂಶಗಳ ಬಗ್ಗೆ ಅಗತ್ಯ ಕ್ರಮವಹಿಸಲು ತಿಳಿಸಿದ್ದಾರೆ.
ಇ.ಇ.ಡಿ.ಎಸ್, ತಂತ್ರಾಂಶದಲ್ಲಿ ಯಾವುದೇ ಇಂದೀಕರಣ ಮಾಡಲು ದಿನಾಂಕ: 23.05.2024 ವರಗೆ ಡಿ.ಡಿ.ಒ, ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಅವಕಾಶ ಕಲ್ಪಿಸಿದ್ದು, ಅದರನ್ವಯ ಸೂಕ್ತ ಕ್ರಮವಹಿಸುವುದು.
ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಲು ದಿನಾಂಕ: 31.05.2024 ವರೆಗೆ ಅವಕಾಶ ಕಲ್ಪಿಸಿದ್ದು, ತಾಲ್ಲೂಕಿನ ಎಲ್ಲಾ ಶಿಕ್ಷಕರಿಗೆ ಮತ್ತು ಸಂಘಗಳ ಗಮನಕ್ಕೆ ಪ್ರಚಾರ ಮಾಡಲು ಕ್ರಮವಹಿಸುವುದು.
ಶಿಕ್ಷಕರ ವರ್ಗಾವಣಾ ಅರ್ಜಿಯಲ್ಲಿ ಮಾಹಿತಿ ತಪ್ಪಾಗಿದ್ದಲ್ಲಿ ಸಂಭಂಧಿಸಿದ ಶಿಕ್ಷಕರು, ಲಿಖಿತ ಮನವಿ ಸಲ್ಲಿಸಿದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಡಿಲೀಟ್ ಮಾಡಲು ಅವಕಾಶ ಕಲ್ಪಿಸಿದ್ದು ಸೂಕ್ತ ಕ್ರಮವಹಿಸುವುದು. ಈಗಾಗಲೇ ವಲಯ ವರ್ಗಾವಣೆಗೆ ಬಿಟ್ಟಿರುವ ಪಟ್ಟಿ ಅಂತಿಮವಲ್ಲ, ಶಿಕ್ಷಕರು, ಡಿ.ಡಿ.ಒ, ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸ್ವೀಕರಿಸಿರುವ ಆಕ್ಷೇಪಣೆಗಳನ್ವಯ ಪರಿಶೀಲಿಸಿ ಅಪ್‌ಡೇಟ್ ಮಾಡಿ ಪಟ್ಟಿಯನ್ನು ಬಿಡಲಾಗುವುದೆಂದು ತಿಳಿಸಿರುತ್ತಾರೆ. ವಲಯ ವರ್ಗಾವಣೆ ಪಟ್ಟಿಗೆ ಸೇರಿರುವ ಶಿಕ್ಷಕರಲ್ಲಿ 10 ವರ್ಷ ಪೂರ್ಣಗೊಂಡಿರುವ ಶಿಕ್ಷಕರನ್ನು ಪಟ್ಟಿಯಲ್ಲಿ ಸೇರಿಸಲಾಗುವುದೆಂದು ಹಾಗೂ ವಿನಾಯ್ತಿ ಕೋರುವ ಮಹಿಳಾ ಶಿಕ್ಷಕರಿಗೆ ಕಡ್ಡಾಯವಾಗಿ 50 ವರ್ಷ ಮತ್ತು ಪುರುಷ ಶಿಕ್ಷಕರಿಗೆ ಕಡ್ಡಾಯವಾಗಿ 55 ವರ್ಷ ಪೂರ್ಣಗೊಂಡಿರಬೇಕೆಂದು ತಿಳಿಸಿರುತ್ತಾರೆ.
ವರ್ಗಾವಣೆ ಕ್ರಮಗಳಲ್ಲಿ ಯಾವುದೇ ವ್ಯತ್ಯಯಗಳಾದಲ್ಲಿ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿಯೇ ಹೊಣೆಗಾರರೆಂದು ತಿಳಿಸುತ್ತಾ ಯಾವುದೇ ಅಡಚಣೆ, ಲೋಪವಾಗದಂತ ನಿಯಮಾನುಸಾರ ಕ್ರಮವಹಿಸಲು ಮತ್ತೂಮ್ಮೆ ಸೂಚಿಸಿದ್ದಾರೆ.