ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ಮಿಶ್ರಿತ ಹಾಲು ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.22ರಂದು ಚಾಲನೆ ನೀಡಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿನೀಡಿದ ಅವರು, ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗುತ್ತಿದೆ. ಇನ್ನುಂದೆ ವಾರದಲ್ಲಿ ಮೂರು ದಿನ ಹಾಲಿಗೆ ನಿರ್ದಿಷ್ಟ ಪ್ರಮಾಣದ ರಾಗಿ ಮಾಲ್ಟ್ ಮಿಶ್ರಣ ಮಾಡಿ ಕೊಡಲಾಗುತ್ತದೆ. ಉಳಿದ ಎರಡು ದಿನಗಳಲ್ಲಿ ಹಾಲನ್ನು ಮಾತ್ರ ನೀಡಲಾಗುವುದು ಎಂದರು.
ಮೊದಲ ಬಾರಿ ಎಸ್ಸೆಸ್ಸೆಲ್ಸಿ, ಪಿಯುಗೆ 3 ಪರೀಕ್ಷೆ
ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯನಿರ್ಣಯ ಮಂಡಳಿ ಯಿಂದ ಪ್ರಸಕ್ತ ಸಾಲಿನಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಎರಡರಲ್ಲೂ ವರ್ಷದಲ್ಲಿ ಒಂದೆರಡು ತಿಂಗಳ ಅಂತರದಲ್ಲೇ 3 ಬಾರಿ ಪರೀಕ್ಷೆ ನಡೆಸಲಾ ಗುತ್ತದೆ. ಈ ಮೂರರಲ್ಲಿ ಯಾವುದರಲ್ಲಿ ಅತಿ ಹೆಚ್ಚು ಅಂಕಗಳು ಬರುತ್ತವೋ ಅದನ್ನು ವಿದ್ಯಾರ್ಥಿ ತನ್ನ ಫಲಿತಾಂಶವಾಗಿ ಉಳಿಸಿಕೊಳ್ಳಬಹುದು.
12 ರಾಜ್ಯಗಳಿಂದ ‘ರಾಜ್ಯಸಭೆಗೆ’ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ | ಸಂಪೂರ್ಣ ಪಟ್ಟಿ ಇಲ್ಲಿದೆ
ಹಾಗಂತ ವಿದ್ಯಾರ್ಥಿಗಳು ಮೂರೂ ಪರೀಕ್ಷೆ ಬರೆಯಬೇಕೆಂಬುದು ಕಡ್ಡಾಯವಲ್ಲ. ಯಾವುದಾದರೂ 1, ಇಲ್ಲವೇ 1 ಪರೀಕ್ಷೆಯನ್ನು ಬೇಕಾದರೂ ಬರೆಯಬಹುದು ಅಥವಾ ಮೂರನ್ನೂ ಬರೆಯಬಹುದು. ಅದು ವಿದ್ಯಾರ್ಥಿಗಳ ಇಚ್ಛೆ, ಆದರೆ, ಯಾವುದೇ ಪರೀಕ್ಷೆ ಬರೆಯಲುಪರೀಕ್ಷೆ-1ಕ್ಕೆನೋಂದಣಿಮಾಡಿಕೊಂಡಿರುವುದು ಕಡ್ಡಾಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.