ಬೆಂಗಳೂರು: ʻಪರಿಶಿಷ್ಟ ಜಾತಿಯ ಉದ್ದಿಮೆದಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದ್ದು, ʻMSMEʼ ಘಟಕ ಸ್ಥಾಪನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿಯ ಜನರ ಉದ್ದಿಮೆದಾರರಾಗುವ ಕನಸಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಕಾರ ಎಂದು ತಿಳಿಸಿದೆ. 4% ಬಡ್ಡಿ ಸಹಾಯಧನ ಕಾರ್ಯಕ್ರಮ ನಿಮ್ಮಎಂ.ಎಸ್.ಎಂ.ಇ ಕನಸಿಗಾಗಿ ಪರಿಶಿಷ್ಟಜಾತಿಯ ಉದ್ದಿಮೆದಾರರು ಎಂ.ಎಸ್.ಎಂ.ಇ ಘಟಕಗಳನ್ನು ಸ್ಥಾಪಿಸಲು ಕೆ.ಎಸ್.ಎಫ್.ಸಿ ಹಾಗೂ ರಾಷ್ಟ್ರೀಕೃತ/ಜಿಲ್ಲಾ ಸಹಕಾರಿ ಬ್ಯಾಂಕ್/ಅಪೆಕ್ಸ್ ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ 4% ಬಡ್ಡಿ ಸಹಾಯಧನ ಸೌಲಭ್ಯ ನೀಡಲಾಗುವುದು ಅಂತ ತಿಳಿಸಿದೆ.
.