Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತೀಯ ಸೇನೆಯ ಎನ್ಕೌಂಟರ್ ನಲ್ಲಿ ಮೋಸ್ಟ್ ವಾಂಟೇಡ್ ಉಗ್ರ `ಶಾಹಿದ್ ಕುಟ್ಟೆ’ ಸೇರಿ 6 ಉಗ್ರ ಹತ್ಯೆ : ಭಾರತೀಯ ಸೇನೆ ಮಾಹಿತಿ

16/05/2025 12:11 PM

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM

ಅಮೇರಿಕಾ ಜೊತೆ ಶೂನ್ಯ ಸುಂಕದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಿಸಿದ ಪಾಕಿಸ್ತಾನ

16/05/2025 12:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಗ್ರಾಮೀಣ ಮಹಿಳೆ’ಯರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟಕ್ಕೂ ‘ಸ್ವಾವಲಂಭನೆ’ ಕಾರ್ಯಕ್ರಮ ವಿಸ್ತರಣೆ
KARNATAKA

‘ಗ್ರಾಮೀಣ ಮಹಿಳೆ’ಯರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟಕ್ಕೂ ‘ಸ್ವಾವಲಂಭನೆ’ ಕಾರ್ಯಕ್ರಮ ವಿಸ್ತರಣೆ

By kannadanewsnow0929/08/2024 3:18 PM

ಬೆಂಗಳೂರು : ಕೋಲಾರದ ಸಾಮಾನ್ಯ ಬಡ ಕುಟುಂಬದ ಗೃಹಿಣಿ ಜಯಸುಧಾ ಜೀವನ ನಡೆಸಲು ಕಷ್ಟವಾಗುತಿತ್ತು. ಆಕೆಗೆ ಮೂರು ಬೆಳೆದು ನಿಂತ ಮಕ್ಕಳಿದ್ದರು. ನಿತ್ಯದ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಜಯಸುಧಾ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಹೀಗಿರಲಾಗಿ ಭರವಸೆಯನ್ನೇ ಕಳೆದುಕೊಂಡಿದ್ದ ಜಯಸುಧಾ ಅವರಿಗೆ ಹೇಗೋ ಸರ್ಕಾರದ “ಸ್ವಾವಲಂಭನೆ” ಯೋಜನೆಯ ಪರಿಚಯವಾಗುತ್ತದೆ. ಈ ಯೋಜನೆಯಡಿಯಲ್ಲಿ ಸ್ವಸಹಾಯ ಗುಂಪುಗಳಲ್ಲಿನ ಮಹಿಳೆಯರ ಉದಮಶೀಲತೆಯ ಉತ್ಸಾಹವನ್ನು ಪೋಷಿಸುವ ಅವಕಾಶಗಳಿಗೆ ಆಕೆ ತೆರೆದುಕೊಂಡರು. ಕರ್ನಾಟಕ ರಾಷ್ಟೀಯ ಜೀವನೋಪಾಯ ಇಲಾಖೆಯ ಈ ಯೋಜನೆಯು ಜಯಸುಧಾ ಅವರ ಬದುಕನ್ನೇ ಬದಲಿಸಿಬಿಟ್ಟಿದೆ.

ಆಕೆ ಅಡುಗೆ ಹಾಗೂ ಆರೋಗ್ಯ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ತೊಡಗಿದರು. ಇದೀಗ ಜಯಸುಧಾ ವಾರ್ಷಿಕ ಎರಡು ಲಕ್ಷ ರೂಪಾಯಿಗಳಷ್ಟು ವಹಿವಾಟು ನಡೆಸುತ್ತಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ “ ಉದ್ಯಮಶೀಲ ಮಹಿಳೆಯರ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಜಯಸುಧಾ ಅವರಂತೆ ಸುಮಾರು 150 ಮಹಿಳೆಯರು ತಮ್ಮ ಯಶೋಗಾಥೆಯುನ್ನು ಹೇಳಿಕೊಂಡರು.

ಸಮಾವೇಶವನ್ನು ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವೈಧ್ಯಕ್ಷೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ಮಹಿಳಾ ಸ್ವಸಹಾಯ ಗುಂಪಿನ ಉದ್ಯಮಶೀಲ ಮಹಿಳೆಯರನ್ನು ಹಾಡಿಹೊಗಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಡಾ.ಪಾಟೀಲರು ಸರ್ಕಾರದ ’ಸ್ವಾವಲಂಭನೆ” ಯೋಜನೆಯು ಗ್ರಾಮೀಣ ಮಹಿಳೆಯರನ್ನು ಉದ್ಯಮಶೀಲರನ್ನಾಗಿಸುವಲ್ಲಿ ಮತ್ತು ಸಶಕ್ತರನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. “ಸ್ವಾವಲಂಭನೆ” ಯೋಜನೆಯು ಐ ಐ ಎಂ ಬೆಂಗಳೂರಿನ ಸಹಯೋಗದಲ್ಲಿ 2023 ರ ಅಕ್ಟೋಬರ್ 11 ರಂದು ಉದ್ಘಾಟನೆಗೊಂಡಿತ್ತು.

ಈ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗಾಗಿ ನಮ್ಮ ಸಾಂಘಿಕ ಪ್ರಯತ್ನದ ಫಲ, ಇದು ಸ್ವಸಹಾಯ ಸಂಘಗಳ ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯ ಉತ್ಸಾಹ ಚಿಮ್ಮಿಸುವ ಹಾಗೂ ಸುಸ್ಥಿರ ಬದುಕು ಕಟ್ಟಿಕೊಳ್ಳುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಇದರ ಗುರಿ 150 ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರಿಗೆ ನೆರವು ಕೊಡುವುದಾಗಿತ್ತು ಆದರೆ ನಮ್ಮ ಗುರಿಯನ್ನೂ ದಾಟಿದ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದು ಸಚಿವ ಡಾ. ಪಾಟೀಲರು ಅಭಿಮಾನದಿಂದ ನುಡಿದರು.

ಇದೀಗ 40,000 ಮಹಿಳೆಯರು ಸರ್ಕಾರದ ನೆರವಿಗೆ ಅರ್ಜಿ ಸಲ್ಲಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಸ್ವಾವಲಂಭನೆ ಯೋಜನೆಯನ್ನು ಆರಂಭಿಸಲಿದೆ. ಅದರ ಫಲವಾಗಿ ಗ್ರಾಮೀಣ ಭಾಗದ ಹೆಚ್ಚಿನ ಮಹಿಳೆಯರಿಗೆ ಯೋಜನೆಯ ಅನುಕೂಲ ಸಿಗಲಿದೆ ಎಂದು ಹೇಳಿದರು.

“ಸ್ವಾವಲಂಭನೆ” ಯೋಜನೆಯ ಅಡಿಯಲ್ಲಿ ಅನುಧಾನ ಹಾಗೂ ಸಾಲದ ರೂಪದಲ್ಲಿ ಮಹಿಳೆಯರ ಉದ್ಯಮಗಳಿಗೆ ನೆರವು ನೀಡುತ್ತಾ ಬಂದಿದ್ದು ಇದರಿಂದ ಅವರು ಮಹತ್ವದ ಯಶಸ್ಸು ಕಂಡಿದ್ದಾರೆ. ಮಹಿಳಾ ಉದ್ಯಮಶೀಲರಿಗೆ ಲೆಕ್ಕ ಪತ್ರಗಳನ್ನು ನಿರ್ವಹಿಸುವುದು, ಹಣಕಾಸಿನ ನಿರ್ವಹಣೆ, ವ್ಯಾಪಾರದ ರೂಪುರೇಷೆಗಳು, ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರಾಟ ಮತ್ತು ಸಾಮಾಜಿಕ ಜಾಲತಾಣಗಳನ್ನು ಅವುಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವುದರ ಮೂಲಕ ಹೆಚ್ಚಿನ ಜನರಿಗೆ ತಲುಪಿಸುವ ಚಾಕಚತ್ಯತೆಯನ್ನು ತಿಳಿಸಿಕೊಡುವ ಮಾರ್ಗದರ್ಶನ ಸಭೆಗಳು ಮಹತ್ವದ ಮತ್ತು ಬಹುಮುಖ್ಯ ಪಾತ್ರ ನಿರ್ವಹಿಸಿವೆ ಎಂದರು.

ಕರ್ನಾಟಕ ಸರ್ಕಾರದ ಜೀವನೋಪಾಯ ಮಿಷನ್ ನ ನಿರ್ದೇಶಕರಾದ ಶ್ರೀವಿಧ್ಯಾ, ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ಒಡೆಯರ್, ಗ್ರಾಮೀಣ ಜೀವನೋಪಾಯ ಕೇಂದ್ರದ ನಿರ್ದೇಶಕರಾದ ಎಸ್.ಎಂ. ರಾಜೇಶ್ವರಿ, ತ್ರಿಪುರಾ ಜೀವನೋಪಾಯ ಮಿಷನ್ ನ ಸಿ.ಇ.ಒ ಅಜಿತ್ ಶುಕ್ಲಾ ದಾಸ್, ಹರಿಯಾಣ ಜೀವನೋಪಾಯ ಮಿಷನ್ ನ ಸಿ.ಇ.ಒ ಡಾ. ಅರವಿಂದ್ ಕೌರ್, ಕೊಲ್ಕತ್ತಾ ಐಐಎಂ ನ ಸಿ.ಇ.ಒ ಗೌರವ್ ಕಪೂರ್, ಪಶ್ಚಿಮ ಬಂಗಾಳದ ಜೀವನೋಪಾಯ ಮಿಷನ್ ನ ಸಿ.ಇ.ಒ ಸುದೀಪ್ ಸರ್ಕಾರ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತೃತೀಯ ಲಿಂಗಿಗಳ ಗುರುತಿನ ಚೀಟಿ ಪ್ಯಾನ್ ಗೆ ಮಾನ್ಯ ದಾಖಲೆ: ಸುಪ್ರೀಂಗೆ ಕೇಂದ್ರ ಸ್ಪಷ್ಟನೆ | Transgender Identity Certificates

`TRAI’ ನಿಂದ ಹೊಸ ನಿಯಮ ಜಾರಿ : ಈ ತಪ್ಪು ಮಾಡಿದ್ರೆ ಬಂದ್ ಆಗಲಿದೆ ನಿಮ್ಮ `SIM ಕಾರ್ಡ್’ | TRAI New Rules

Good News: ಆಸ್ತಿ ಮಾರಾಟ, ಖರೀದಿದಾರರಿಗೆ ಗುಡ್ ನ್ಯೂಸ್: ಸೆ.2ರಿಂದ ರಾಜ್ಯಾಧ್ಯಂತ ‘ಎನಿವೇರ್ ನೋಂದಣಿ ವ್ಯವಸ್ಥೆ’ ಜಾರಿ

Share. Facebook Twitter LinkedIn WhatsApp Email

Related Posts

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM1 Min Read

BREAKING : `ಇಸ್ಕಾನ್’ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದ್ದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

16/05/2025 11:39 AM1 Min Read

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

16/05/2025 11:34 AM1 Min Read
Recent News

BREAKING : ಭಾರತೀಯ ಸೇನೆಯ ಎನ್ಕೌಂಟರ್ ನಲ್ಲಿ ಮೋಸ್ಟ್ ವಾಂಟೇಡ್ ಉಗ್ರ `ಶಾಹಿದ್ ಕುಟ್ಟೆ’ ಸೇರಿ 6 ಉಗ್ರ ಹತ್ಯೆ : ಭಾರತೀಯ ಸೇನೆ ಮಾಹಿತಿ

16/05/2025 12:11 PM

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM

ಅಮೇರಿಕಾ ಜೊತೆ ಶೂನ್ಯ ಸುಂಕದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಘೋಷಿಸಿದ ಪಾಕಿಸ್ತಾನ

16/05/2025 12:00 PM

BIG NEWS : ಈ ದೇಶಕ್ಕೆ ಮತ್ತೆ ಎಂಟ್ರಿಕೊಟ್ಟ `ಕೊರೊನಾ’ : 31 ಮಂದಿ ಸಾವಿನ ಬೆನ್ನಲ್ಲೇ ಹೈ ಅಲರ್ಟ್ ಘೋಷಣೆ |New Covid-19

16/05/2025 11:50 AM
State News
KARNATAKA

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

By kannadanewsnow5716/05/2025 12:04 PM KARNATAKA 1 Min Read

ಹುಬ್ಬಳ್ಳಿ : ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್ ‘ ಯಶಸ್ವಿಯಾದ ಹಿನ್ನೆಲೆಯಲ್ಲಿ ತಿರಂಗ ಯಾತ್ರೆಗೆ ಕೇಂದ್ರ ಸಚಿವ ಇಂದು…

BREAKING : `ಇಸ್ಕಾನ್’ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದ್ದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

16/05/2025 11:39 AM

ಸಾರ್ವಜನಿಕರೇ ಗಮನಿಸಿ : ಹೀಗಿವೆ `ಕರ್ನಾಟಕದ ಸೈಬರ್ ಪೊಲೀಸ್ ಠಾಣೆ’ಗಳ ದೂರವಾಣಿ ಸಂಖ್ಯೆ.!

16/05/2025 11:34 AM

Cyclone Shakti Alert : `ಶಕ್ತಿ ಚಂಡಮಾರುತ’ದ ಎಫೆಕ್ಟ್ : ಮೇ.23ರಿಂದ ಕರ್ನಾಟಕ ಈ ರಾಜ್ಯಗಳಲ್ಲಿ ಭಾರೀ `ಮಳೆ’ ಮುನ್ಸೂಚನೆ.!

16/05/2025 11:05 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.