Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರತಿನಿತ್ಯ ‘ಸಿಹಿ ಗೆಣಸು’ ಸೇವಿಸಿದರೆ ಏನಾಗುತ್ತೆ ಗೊತ್ತೇ? ಆರೋಗ್ಯದ ಗುಟ್ಟು ಬಿಚ್ಚಿಟ್ಟ ತಜ್ಞರು!

19/03/2026 2:29 PM

ಯುವಜನತೆಯಲ್ಲಿ ಹೆಚ್ಚಾಗುತ್ತಿದೆ ‘ಸಂಧಿವಾತ’: ‘ಕಠಿಣ ಫಿಟ್ನೆಸ್ ಚಾಲೆಂಜ್‌’ಗಳೇ ಮುಳುವು?

19/03/2026 2:24 PM

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

19/03/2026 2:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರಿಗೆ ಗುಡ್ ನ್ಯೂಸ್ : ವೇತನ ಶ್ರೇಣಿ ಪರಿಷ್ಕರಣೆ, ಬಾಕಿ ಹಣ ಪಾವತಿಗೆ ಸರ್ಕಾರ ಆದೇಶ
KARNATAKA

ರಾಜ್ಯದ ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರಿಗೆ ಗುಡ್ ನ್ಯೂಸ್ : ವೇತನ ಶ್ರೇಣಿ ಪರಿಷ್ಕರಣೆ, ಬಾಕಿ ಹಣ ಪಾವತಿಗೆ ಸರ್ಕಾರ ಆದೇಶ

By kannadanewsnow0925/02/2026 5:16 AM

ಧಾರವಾಡ: ರಾಜ್ಯದ ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವೇತನ ಶ್ರೇಣಿ ಪರಿಷ್ಕರಣೆ, ಬಾಕಿ ಹಣ ಪಾವತಿಗೂ ಆದೇಶ ಮಾಡಿ ಸಿಹಿಸುದ್ದಿಯನ್ನು ನೀಡಿದೆ.

ಈ ಕುರಿತಂತೆ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅವರ ಆಯುಕ್ತರು ಆದೇಶ ಮಾಡಿದ್ದು, ಗ್ರಾಮೀಣ ಕೃಪಾಂಕ ರಹಿತ ಶಿಕ್ಷಕರಿಗೆ ಸೇವಾ ಹಿರಿತನ, ಪರಿಷ್ಕೃತ ವೇತನ ನಿಗದಿ ಹಾಗೂ ಬಾಕಿ ಪಾತಿಗಳನ್ನು ಪಾವತಿಸುವ ಸಂಬಂಧ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಗೌರವಾನ್ವಿತ ಭಾರತ ಸರ್ವೋಚ್ಚ ನ್ಯಾಯಾಲಯಗಳು ನೀಡಿರುವ ತೀರ್ಪ/ಆದೇಶಗಳ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಆದೇಶವನ್ನು ಅನುಷ್ಠಾನ ಮಾಡಿದಲ್ಲಿ ರಾಜ್ಯಾದ್ಯಂತ ಗ್ರಾಮೀಣ ಕೃಪಾಂಕ ರಹಿತವಾಗಿ 2003-04 ರಲ್ಲಿ ನೇಮಕಗೊಂಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು ಅತ್ಯಧಿಕ ಆರ್ಥಿಕ ವೆಚ್ಚ ಉಂಟಾಗುವುದೆಂಬುದನ್ನು ಮನಗಂಡು ಆರ್ಥಿಕ ಇಲಾಖೆಯ ಸಹಮತಿಯಂತೆ ಅರ್ಕಾರದ ಆದೇಶ ಸಂಖ್ಯೆ: ಇಪಿ 78 PMW 2025 ದಿನಾಂಕ: 11-07-2025ರ ಆದೇಶವನ್ನು ಹೊರಡಿಸಲಾಗಿದೆ ಎಂದ ತಿಳಿಸಲಾಗಿದೆ.

ಮುಂದುವರೆದು, ಸರ್ಕಾರದ ಮೇಲಿನಾದೇಶದಲ್ಲಿನ ಸೌಲಭ್ಯವನ್ನು ರಾಜ್ಯಾದ್ಯಂತ ಗ್ರಾಮೀಣ ಕೃಪಾಕರಹಿತವಾಗಿ 2003-04ರಲ್ಲಿ ನೇಮಕಗೊಂಡಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ವಯವಾಗುವಂತೆ ಸಂಬಂಧಿತ ನೌಕರರು ಮೂಲತ: ಸೇವೆಗೆ ಸೇರಿದ ದಿನಾಂಕದಿಂದ ಇಲ್ಲಿಯವರೆಗೂ ಬಾಕಿಯನ್ನು ಪಾವತಿಸುವಲ್ಲಿ ಲೆಕ್ಕಾಚಾರವನ್ನು ಸಮುಚಿತ ಮಾರ್ಗದ ಮೂಲಕ ಅಂದರೆ ಸಂಬಂಧಪಟ್ಟ ಆಯುಕ್ತರು/ಅಪರ ಆಯುಕ್ತರ ಮೂಲಕ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ದೃಢೀಕರಿಸಿಕೊಂಡು ಪಾವತಿಸಲು ಕ್ರಮವಹಿಸುವಂತೆ ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸೂಕ್ತ ಮತ್ತು ಸ್ಪಷ್ಟ ನಿರ್ದೇಶನ ನೀಡುವಂತೆ ತಿಳಿಸಿರುತ್ತಾರೆ.

ಈ ಸಂಬಂಧ ಗ್ರಾಮೀಣ ಕೃಪಾಂಕ ರಹಿತವಾಗಿ 2003-04ರಲ್ಲಿ ನೇಮಕಗೊಂಡಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನ್ವಯವಾಗುವಂತೆ, ಸಂಬಂಧಿಸಿದ ನೌಕರರು ಮೂಲತಃ ಸೇವೆಗೆ ಸೇರಿದ ದಿನಾಂಕದಿಂದ ಇಲ್ಲಿಯವರೆಗೂ ಬಾಕಿಯನ್ನು ಪಾವತಿಸುವಲ್ಲಿ ಲೆಕ್ಕಾಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ, ಖಚಿತಪಡಿಸಿಕೊಂಡು ಮತ್ತು ಸದರಿ ಲೆಕ್ಕಾಚಾರವನ್ನು ಈ ದಾಖಲೆಗಳೊಂದಿಗೆ ಲೆಕ್ಕಾಚಾರದ ತಖೆಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಆಯಾ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ರವರು ದೃಢೀಕರಿಸಿ ದ್ವಿ-ಪ್ರತಿಯಲ್ಲಿ ಹಾರ್ಡ ಕಾಪಿ & ಸಾಫ್ಟ್ ಕಾಪಿಯೊಂದಿಗೆ ಒಂದು ವಾರದೊಳಗೆ ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಹಾಗೂ ಆಯಾ ತಾಲೂಕಿನಲ್ಲಿರುವ ಗ್ರಾಮೀಣ ಕೃಪಾಂಕ ರಹಿತವಾಗಿ 2003-04ರಲ್ಲಿ ನೇಮಕಗೊಂಡಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಲೆಕ್ಕಾಚಾರದ ಮಾಹಿತಿ (ಪ್ರತಿಯೊಬ್ಬ ಶಿಕ್ಷಕರ ಲೆಕ್ಕಾಚಾರದ ವಿವರ ಹಾಗೂ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿದ PDF ನಲ್ಲಿ ಆಯಾ ತಾಲೂಕಿನ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯುವುದು) ಹಾಗೂ ಅದಕ್ಕೆ ಸಂಬಂಧಿಸಿದ ಪೂರಕವಾದ ದಾಖಲೆಗಳನ್ನು ಆಯಾ ಜಿಲ್ಲಾವಾರು ಸ್ಕ್ಯಾನ್ ಮಾಡಿದ PDF ನಲ್ಲಿ ಸಲ್ಲಿಸುವುದು.

ಪೂರಕ ದಾಖಲೆಗಳು:

1. ಗ್ರಾಮೀಣ ಕೃಪಾಂಕರಹಿತವಾಗಿ 2003-04ರಲ್ಲಿ ನೇಮಕಗೊಂಡಿರುವ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಸೇವೆಗೆ ಸೇರಿದ ದಿನಾಂಕದಿಂದ ಇಲ್ಲಿಯವರೆಗೂ ಪಾವತಿಸಬೇಕಾಗಿರುವ ಬಾಕಿ ವೇತನದ ಲೆಕ್ಕಾಚಾರದ ತಖೆಯ ವಿವರ (ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಆಯಾ ಉಪನಿರ್ದೇಶಕರು(ಆಡಳಿತ) ಶಾಲಾ ಶಿಕ್ಷಣ ಇಲಾಖೆ ರವರು ಧೃಡೀಕರಿಸಿ ಸಲ್ಲಿಸುವುದು)

2. 2003-04ನೇ ಸಾಲಿನಿಂದ ಪ್ರಸ್ತುತದವರೆಗೆ ಮೂಲ ಸೇವಾ ಪುಸ್ತಕದ ದೃಢೀಕೃತ ಪ್ರತಿಗಳು.

3. ಪ್ರತಿ ಶಿಕ್ಷಕರ ಮಾಹಿತಿಯು PDF ನಲ್ಲಿ ತಾಲೂಕುವಾರು ಸಂಬಂಧಿಸಿದ ಉಪನಿರ್ದೇಶಕರಿಗೆ ಸಲ್ಲಿಸುವುದು ಸಂಬಂಧಿಸಿದ ಉಪನಿರ್ಧೇಶಕರು ಜಿಲ್ಲಾವಾರು ಕ್ರೋಢಿಕರಣ ಮಾಹಿತಿಯು PDF ನಲ್ಲಿ ಹಾರ್ಡ್ ಕಾಪಿ & ಸಾಫ್ಟ್ ಕಾಪಿ ದ್ವಿ-ಪ್ರತಿಯಲ್ಲಿ ಸಲ್ಲಿಸುವುದು.

Share. Facebook Twitter LinkedIn WhatsApp Email

Related Posts

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

19/03/2026 2:19 PM1 Min Read

BREAKING : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

19/03/2026 2:09 PM1 Min Read

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್

19/03/2026 1:33 PM1 Min Read
Recent News

ಪ್ರತಿನಿತ್ಯ ‘ಸಿಹಿ ಗೆಣಸು’ ಸೇವಿಸಿದರೆ ಏನಾಗುತ್ತೆ ಗೊತ್ತೇ? ಆರೋಗ್ಯದ ಗುಟ್ಟು ಬಿಚ್ಚಿಟ್ಟ ತಜ್ಞರು!

19/03/2026 2:29 PM

ಯುವಜನತೆಯಲ್ಲಿ ಹೆಚ್ಚಾಗುತ್ತಿದೆ ‘ಸಂಧಿವಾತ’: ‘ಕಠಿಣ ಫಿಟ್ನೆಸ್ ಚಾಲೆಂಜ್‌’ಗಳೇ ಮುಳುವು?

19/03/2026 2:24 PM

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

19/03/2026 2:19 PM

BREAKING : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

19/03/2026 2:09 PM
State News
KARNATAKA

‘ರೌಡಿಶೀಟರ್‌’ಗಳೊಂದಿಗೆ ಬಿಲ್ಡಪ್ ರೀಲ್ಸ್: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ವಿರುದ್ಧ ‘FIR’ ದಾಖಲು

By kannadanewsnow0919/03/2026 2:19 PM KARNATAKA 1 Min Read

ಬೆಂಗಳೂರು: ಶ್ವಾನ ಪ್ರೇಮಿ ಹಾಗೂ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ (ಡಾಗ್ ಸತೀಶ್) ಅವರಿಗೆ ಹೊಸ…

BREAKING : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

19/03/2026 2:09 PM

ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ, ಬೆಂಗಳೂರು ಹೋಟೆಲ್ ಅಸೋಸಿಯೇಷನ್

19/03/2026 1:33 PM

ಹುಬ್ಬಳ್ಳಿಯಲ್ಲಿ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದ ನಾಲ್ವರು ಕಾರ್ಮಿಕರ ಪೈಕಿ ಓರ್ವ ಸಾವು!

19/03/2026 1:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.