ಬೆಂಗಳೂರು: ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಈಗ ಸುಲಭ. ನಿಮ್ಮ ಸ್ಮಾರ್ಟ್ ಪೋನ್ ನಲ್ಲೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.
ಸ್ಮಾರ್ಟ್ ಪೋನ್ ಯುಗದಲ್ಲಿ ಸ್ಮಾರ್ಟ್ ಆಗೇ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸುವಂತ ವಿಧಾನವನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಪರಿಚಯಿಸಿದೆ. ರಾಜ್ಯದ ಗ್ರಾಮೀಣ ಜನರು ಗ್ರಾಮ ಪಂಚಾಯ್ತಿ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳದೇ ಕುಳಿತಲ್ಲೇ ಮೊಬೈಲ್ ನಲ್ಲಿ ಆಸ್ತಿ ತೆರಿಗೆ ಪಾವತಿಸೋದಕ್ಕೆ ಅವಕಾಶ ನೀಡಿದೆ. ಅದು ಹೇಗೆ ಅಂತ ಈ ಕೆಳಗಿನ ವೀಡಿಯೋ ನೋಡಿ.
ನೋಡಿದ್ರಲ್ಲ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಮೂಲಕ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆಯನ್ನು ಸ್ಮಾರ್ಟ್ ಪೋನ್ ಇದ್ರೆ ಸಾಕು, ಕುಳಿತಲ್ಲೇ ಪೇ ಮಾಡಬಹುದು. ನಿಮಗೆ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಸ್ಮಾರ್ಟ್ ಪೋನ್ ನಲ್ಲಿ ಪಾವತಿ ಬಗ್ಗೆ ಅನುಮಾನಗಳಿದ್ದರೇ, ಸಮಸ್ಯೆ ಆಗುತ್ತಿದ್ದರೇ ಏಕೀಕೃತ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಿ ಪಡೆಯುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಮನವಿ ಮಾಡಿದೆ.
ನಿಮ್ಮ ಸ್ಮಾರ್ಟ್ ಫೋನ್ ನಲ್ಲೇ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು ಪಾವತಿಸಿ..
ಹೆಚ್ಚಿನ ಮಾಹಿತಿಗಾಗಿ ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಸಾರ್ವಜನಿಕರು ಕರೆ ಮಾಡಿ.#rdpr #ruraldevelopment #egovernance #propertytaxes #BSK@rdprgok @readingkafka pic.twitter.com/7N8p3qKjvt
— Commissioner Panchayat Raj (@CommrPR) August 26, 2024