ಬೆಂಗಳೂರು: ಪ್ರಯಾಣಿಕರ ಬೇಡಿಕೆ ಮೇರೆಗೆ ಯಶವಂತಪುರ – ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ 8 ಸಲ ಸಂಚರಿಸಲಿದೆ.
ಯಶವಂತಪುರ – ಮುರುಡೇಶ್ವರ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 06563) ರೈಲು ಡಿಸೆಂಬರ್ 10 ರಿಂದ ಜನವರಿ 28 ರ ವರೆಗೆ ಯಶವಂತಪುರ ನಿಲ್ದಾಣದಿಂದ ಪ್ರತಿ ಶನಿವಾರ ಬೆಳಿಗ್ಗೆ 11:55 ಗಂಟೆಗೆ ಹೊರಟು, ಮರು ದಿನ ಭಾನುವಾರ ಮಧ್ಯಾಹ್ನ 12:55 ಕ್ಕೆ ಮುರುಡೇಶ್ವರ ನಿಲ್ದಾಣವನ್ನು ತಲುಪಲಿದೆ. ಈ ರೈಲು ಚಿಕ್ಕ ಬಾಣಾವರ (12:06-12:07 am), ನೆಲಮಂಗಲ (12:23-12:25 am), ಕುಣಿಗಲ್ (12:53-12:53 am), ಶ್ರವಣಬೆಳಗೊಳ (01:40-01:42 am), ಚನ್ನರಾಯಪಟ್ಟಣ (01:56-01:58 am), ಹಾಸನ (03:05-03:25 am), ಸಕಲೇಶಪುರ (04:40-04:50 am), ಸುಬ್ರಹ್ಮಣ್ಯ ರೋಡ್ (07:25-07:30 am), ಕಬಕ ಪುತ್ತೂರು (08:13-08:15 am), ಬಂಟ್ವಾಳ (08:55-08:57 am), ಸುರತ್ಕಲ್ (09:58-10:00 am), ಮುಲ್ಕಿ (10:16-10:18 am), ಉಡುಪಿ (10:40-10:42 am), ಬಾರ್ಕೂರು (10:56-10:58 am), ಕುಂದಾಪುರ (11:14-11:16 am), ಬೈಂದೂರು (11:40-11:42 am), ಭಟ್ಕಳ (12:00-12:02 pm) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಇದೆ ಮಾರ್ಗದಲ್ಲಿ ಹಿಂದಿರುಗುವ ಮುರುಡೇಶ್ವರ – ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ (ರೈಲು ಸಂಖ್ಯೆ 06564) ರೈಲು ಡಿಸೆಂಬರ್ 11 ರಿಂದ ಜನವರಿ 29 ರ ವರೆಗೆ ಮುರುಡೇಶ್ವರ ನಿಲ್ದಾಣದಿಂದ ಪ್ರತಿ ಭಾನುವಾರ ಮಧ್ಯಾಹ್ನ 01:30 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 4 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಭಟ್ಕಳ (01:42-01:44 pm), ಬೈಂದೂರು (01:56-01:58 pm), ಕುಂದಾಪುರ(02:30-02:32 pm), ಬಾರ್ಕೂರು (03:00-03:02 pm) ಉಡುಪಿ(03:15-03:17 pm), ಮುಲ್ಕಿ (03:50-03:52 pm), ಸುರತ್ಕಲ್ (04:20-04:22 pm), ಬಂಟ್ವಾಳ (05:50-05:52 pm), ಕಬಕ ಪುತ್ತೂರು (06:18-06:20 pm), ಸುಬ್ರಹ್ಮಣ್ಯ ರೋಡ್ (07:05-07:15 pm), ಸಕಲೇಶಪುರ (09:30-09:40 pm), ಹಾಸನ (10:45-11:15 pm), ಚನ್ನರಾಯಪಟ್ಟಣ (12:18-12:20 am), ಶ್ರವಣಬೆಳಗೊಳ(12:33-12:35 am), ಕುಣಿಗಲ್ (01:28-01:30 am), ನೆಲಮಂಗಲ (02:43-02:45 am), ಚಿಕ್ಕ ಬಾಣಾವರ (03:28-03:30 am) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ರೈಲಿನಲ್ಲಿ ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ ಹವಾನಿಯಂತ್ರಿತ ದರ್ಜೆ, ಏಳು ಸ್ಲೀಪರ್ ಕ್ಲಾಸ್, 4 ದ್ವಿತಿಯ ದರ್ಜೆ ಸಾಮಾನ್ಯ ಬೋಗಿಗಳು, ಒಂದು ಜನರೇಟರ್ ಕಾರಿನೊಂದಿಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಮತ್ತು ಒಂದು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳಿಂದ ಕೂಡಿದ/ಅಂಗವಿಕಲ ಸ್ನೇಹಿ ಕಂಪಾರ್ಟ್ಮೆಂಟ್ ಒಳಗೊಂಡಿರುವ 16 ಬೋಗಿಗಳು ಹೊಂದಿರುತ್ತದೆ.