ನವದೆಹಲಿ: ಇಂದಿನಿಂದ ನವರಾತ್ರಿ ಹಬ್ಬ ಪ್ರಾರಂಭವಾಗಿದೆ. ದೇಶದ್ಯಾಂತ ಅದ್ದೂರಿಯಾಗಿ, ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾರತೀಯ ರೈಲ್ವೆ ಕೂಡಾ ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಊಟನೀಡಲು ನಿರ್ಧರಿಸಿದೆ.
ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಊಟದ ಮೆನು ಇರಲಿದ್ದು, ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ.
During the auspicious festival of Navratri, IR brings to you a special menu to satiate your Vrat cravings, being served from 26.09.22 – 05.10.22.
Order the Navratri delicacies for your train journey from 'Food on Track' app, visit https://t.co/VE7XkOqwzV or call on 1323. pic.twitter.com/RpYN6n7Nug
— Ministry of Railways (@RailMinIndia) September 25, 2022
ಫುಡ್ ಆನ್ ಟ್ರ್ಯಾಕ್ ಅಪ್ಲಿಕೇಶನ್, irctc.co.in ಅಥವಾ 1323 ಗೆ ಕರೆ ಮಾಡಿ ವಿಶೇಷ ಮೆನುವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ಈ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ವಿಶೇಷ ಥಾಲಿಯ ಫೋಟೋವನ್ನೂ ಲಗತ್ತಿಸಿದೆ.