ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಮೈಸೂರು-ಮೈಲಾಡುತುರೈ ಎಕ್ಸ್ ಪ್ರೆಸ್ ರೈಲು ಕಡಲೂರು ಪೋರ್ಟ್ ವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ಅವರು ಮಾಹಿತಿ ನೀಡಿದ್ದು, ಮಯಿಲಾಡುತುರೈ-ಮೈಸೂರು ನಿಲ್ದಾಣಗಳ ನಡುವೆ ಪ್ರತಿದಿನ ಚಲಿಸುವ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಕಡಲೂರು ಪೋರ್ಟ್ವರೆಗೆ ವಿಸ್ತರಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ವಿಸ್ತೃತ ರೈಲು ಸೇವೆಯು ಎರಡೂ ಕಡೆಯಿಂದ ಜುಲೈ 19, 2024 ರಿಂದ ಪ್ರಾರಂಭವಾಗಲಿದೆ ಎಂದಿದ್ದಾರೆ.
ವಿಸ್ತರಣೆಗೊಂಡ ಭಾಗದ ರೈಲಿನ ನಿಲುಗಡೆ ಮತ್ತು ಸಮಯವನ್ನು ಈ ಕೆಳಗಿನಂತಿವೆ:-
1. ರೈಲು ಸಂಖ್ಯೆ 16232 ಮೈಸೂರು-ಕಡಲೂರು ಪೋರ್ಟ್ ಡೈಲಿ ಎಕ್ಸ್ ಪ್ರೆಸ್:
• ಮಯಿಲಾಡುತುರೈಗೆ 06:45 ಗಂಟೆಗೆ ಆಗಮಿಸಿ, 07:00 ಗಂಟೆಗೆ ನಿರ್ಗಮಿಸಲಿದೆ.
• ಸಿರ್ಕಾಝಿಗೆ 07:23 ಗಂಟೆಗೆ ಆಗಮಿಸಿ, 07:24 ಗಂಟೆಗೆ ನಿರ್ಗಮಿಸಲಿದೆ.
• ಚಿದಂಬರಂಗೆ 07:41 ಗಂಟೆಗೆ ಆಗಮಿಸಿ, 07:42 ಗಂಟೆಗೆ ನಿರ್ಗಮಿಸಲಿದೆ.
• ಕಡಲೂರು ಪೋರ್ಟ್ ಗೆ 08:35 ಗಂಟೆಗೆ ಆಗಮಿಸಲಿದೆ.
2. ರೈಲು ಸಂಖ್ಯೆ 16231 ಕಡಲೂರು ಪೋರ್ಟ್-ಮೈಸೂರು ಡೈಲಿ ಎಕ್ಸ್ ಪ್ರೆಸ್ :
• ಕಡಲೂರು ಪೋರ್ಟ್ ನಿಲ್ದಾಣದಿಂದ 15:40 ಗಂಟೆಗೆ ನಿರ್ಗಮಿಸಲಿದೆ.
• ಚಿದಂಬರಂಗೆ 16:07 ಗಂಟೆಗೆ ಆಗಮಿಸಿ, 16:08 ಗಂಟೆಗೆ ನಿರ್ಗಮಿಸಲಿದೆ.
• ಸಿರ್ಕಾಝಿಗೆ 16:23 ಗಂಟೆಗೆ ಆಗಮಿಸಿ,16:24 ಗಂಟೆಗೆ ನಿರ್ಗಮಿಸಲಿದೆ.
• ಮಯಿಲಾಡುತುರೈಗೆ 17:30 ಗಂಟೆಗೆ ಆಗಮಿಸಿ,17:55 ಗಂಟೆಗೆ ನಿರ್ಗಮಿಸಲಿದೆ.
ಮೈಸೂರು-ಮೈಲಾಡುತುರೈ ನಿಲ್ದಾಣಗಳ ನಡುವಿನ ನಿಲುಗಡೆ ಮತ್ತು ವೇಳಾಪಟ್ಟಿಯಲ್ಲಿ ಬದಲಾಣೆ ಇರುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
BREAKING : ‘ಶ್ರೀಲಂಕಾ ಪ್ರವಾಸ’ಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ ; ಪೂರ್ಣ ವಿವರ ಇಲ್ಲಿದೆ |IND vs SL