ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆ ಯಶವಂತಪುರದವರೆಗೆ ವಿಸ್ತರಣೆ ಮಾಡಲಾಗಿದೆ.
ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಎಸ್ಎಸ್ ಪಿಏನ್) ನಿಲ್ದಾಣಗಳ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 22831/22832) ರೈಲುಗಳ ಸೇವೆಯನ್ನು ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲುಗಳು ಈಗ (ಸಂಖ್ಯೆ 22831/22832) ಹೌರಾ-ಯಶವಂತಪುರ ನಿಲ್ದಾಣಗಳ ನಡುವೆ ಈಗಿರುವ ಬೋಗಿಗಳ ಸಂಯೋಜನೆ, ಆವರ್ತನ ಮತ್ತು ಸೇವೆಯ ದಿನಗಳೊಂದಿಗೆ ಕಾರ್ಯನಿರ್ವಹಿಸಲಿದೆ. ವಿವರಗಳು ಈ ಕೆಳಗಿನಂತಿವೆ:
- ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳ ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರೈಲು ಸಂಖ್ಯೆ 22831, ಈಗ ಹೌರಾ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 25, 2024 ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲಿದೆ. ಈ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಎಸ್ಎಸ್ ಪಿಏನ್) ನಲ್ಲಿ ಕೊನೆಗೊಳ್ಳುವ ಬದಲು ಯಶವಂತಪುರದವರೆಗೆ ತನ್ನ ಪ್ರಯಾಣವನ್ನು ವಿಸ್ತರಿಸುತ್ತದೆ.
- ಈ ಹಿಂದೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಿಂದ ಹೌರಾಗೆ ಚಲಿಸುತ್ತಿದ್ದ ರೈಲು ಸಂಖ್ಯೆ 22832, ಈಗ ಯಶವಂತಪುರದಿಂದ ಹೌರಾಕ್ಕೆ ಸೆಪ್ಟೆಂಬರ್ 27, 2024 ರಿಂದ ಪ್ರಾರಂಭವಾಗಲಿದೆ.
ವಿಸ್ತರಣೆಗೊಂಡ ಭಾಗದ ರೈಲುಗಳ ನಿಲುಗಡೆ ಮತ್ತು ವೇಳಾಪಟ್ಟಿಯು ಈ ಕೆಳಗಿನಂತಿವೆ:-
ರೈಲು ಸಂಖ್ಯೆ 22831 ಹೌರಾ-ಯಶವಂತಪುರ
ಸಾಪ್ತಾಹಿಕ S/F ಎಕ್ಸ್‌ಪ್ರೆಸ್ (w.e.f 25.09.24) |
ನಿಲ್ದಾಣ | ರೈಲು ಸಂಖ್ಯೆ 22832 ಯಶವಂತಪುರ-ಹೌರಾ
ಸಾಪ್ತಾಹಿಕ S/F ಎಕ್ಸ್‌ಪ್ರೆಸ್ (w.e.f 27.09.24) |
||
ಅಸ್ತಿತ್ವದಲ್ಲಿರುವ ಸಮಯ
(ಆ/ನಿ) |
ಪರಿಷ್ಕೃತ ಸಮಯ
(ಆ/ನಿ) |
ಅಸ್ತಿತ್ವದಲ್ಲಿರುವ ಸಮಯ
(ಆ/ನಿ) |
ಪರಿಷ್ಕೃತ ಸಮಯ
(ಆ/ನಿ) |
|
14:50 (ಬುಧ) | ಬದಲಾವಣೆ ಇಲ್ಲ | ಹೌರಾ | 13:25 (ಶನಿ) | ಬದಲಾವಣೆ ಇಲ್ಲ |
ಹೌರಾ-ಧರ್ಮಾವರಂ-ಹೌರಾ ನಿಲ್ದಾಣಗಳ ನಡುವಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ | ||||
21:40 (ಗುರು) | 21:30/21:32 | ಎಸ್ಎಸ್ ಪಿಏನ್ | 07:55 (ಶುಕ್ರ) | 07:53/07:55 |
— | 21:58/22:00 | ಹಿಂದೂಪುರ | — | 06:18/06:20 |
— | 23:08/23:10 | ಯಲಹಂಕ | — | 05:18/05:20 |
— | 00:15 (ಶುಕ್ರ) | ಯಶವಂತಪುರ | — | 05:00 (ಶುಕ್ರ) |
- ಎಸ್ಎಸ್ ಪಿಏನ್: ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣ
- ನಾಗಸಮುದ್ರಂ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ರದ್ದು
ಅಗತ್ಯ ಮೂಲಸೌಕರ್ಯ ಕಾಮಗಾರಿಯ ಸಲುವಾಗಿ ನಾಗಸಮುದ್ರಂ ನಿಲ್ದಾಣದಲ್ಲಿ ರೈಲು ಸಂಖ್ಯೆ 07693/07694 ಗುಂತಕಲ್-ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲುಗಳ ನಿಲುಗಡೆಯನ್ನು ನವೆಂಬರ್ 5, 2024 ರವರೆಗೆ ತೆಗೆದುಹಾಕಲಾಗುತ್ತದೆ.
ಮಂಕಿಪಾಕ್ಸ್ ಬಗ್ಗೆ ಆಂತಕ ಬೇಡ, ಇರಲಿ ಈ ಎಚ್ಚರಿಕೆ: ಹೀಗಿವೆ ರೋಗದ ಲಕ್ಷಣಗಳು
ಡಿಸಿಎಂ ಡಿಕೆಶಿ ವಾರ್ನಿಂಗ್ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್: ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು