ಬೆಂಗಳೂರು: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು-ಕೊಚುವೇಲಿ ನಿಲ್ದಾಣಗಳ ನಡುವೆ ಎರಡು ಟ್ರಿಪ್, ಎಸ್ಎಂವಿಟಿ ಬೆಂಗಳೂರು-ಕಣ್ಣೂರು ನಿಲ್ದಾಣಗಳ ನಡುವೆ ಎರಡು ಟ್ರಿಪ್ ಮತ್ತು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಅಹಮದಾಬಾದ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುತ್ತಿದೆ. ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿವೆ:
1.ಎಸ್ಎಂವಿಟಿ ಬೆಂಗಳೂರು-ಕಣ್ಣೂರು ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06557/06558) ರೈಲುಗಳ ಸಂಚಾರ:
ಮಾರ್ಚ್ 19 ಮತ್ತು 26, 2024 ರಂದು ರೈಲು ಸಂಖ್ಯೆ 06557 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11:55 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 2:00 ಗಂಟೆಗೆ ಕಣ್ಣೂರು ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 20 ಮತ್ತು 27ರಂದು ರೈಲು ಸಂಖ್ಯೆ 06558 ಕಣ್ಣೂರಿನಿಂದ ರಾತ್ರಿ 8 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 1 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ, ಕೃಷ್ಣರಾಜಪುರಂ, ಬಂಗಾರಪೇಟೆ ಜಂ, ಸೇಲಂ ಜಂ, ಈರೋಡ್ ಜಂ, ಕೊಯಮತ್ತೂರು ಜಂ, ಪಾಲಕ್ಕಾಡ್ ಜಂ, ಶೋರನೂರ್ ಜಂ, ತಿರೂರ್, ಕೋಝಿಕ್ಕೋಡ್, ವಡಕರ ಮತ್ತು ಥಲಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
2.ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06555/06556) ರೈಲುಗಳ ಸಂಚಾರ:
ಮಾರ್ಚ್ 23 ಮತ್ತು 30, 2024 ರಂದು ರೈಲು ಸಂಖ್ಯೆ 06555 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11:55 ಗಂಟೆಗೆ ಹೊರಟು, ಮರುದಿನ ಸಂಜೆ 7:10 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 24 ಮತ್ತು 31, 2024 ರಂದು ರೈಲು ಸಂಖ್ಯೆ 06556 ಕೊಚುವೇಲಿ ನಿಲ್ದಾಣದಿಂದ ರಾತ್ರಿ 10:00 ಗಂಟೆಗೆ ಹೊರಟು, ಮರುದಿನ ಸಂಜೆ 4:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ, ವೈಟ್ ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಸೇಲಂ ಜಂ, ಈರೋಡ್ ಜಂ, ತಿರುಪ್ಪೂರು, ಕೊಯಮತ್ತೂರು ಜಂ, ಪಾಲಕ್ಕಾಡ್ ಜಂ, ಒಟ್ಟಪ್ಪಲಂ, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗಣ್ಣೂರ್, ಕಾಯಂಕುಲಂ ಮತ್ತು ಕೊಲ್ಲಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಈ ಮೇಲಿನ ವಿಶೇಷ ರೈಲುಗಳಲ್ಲಿ (06557/58 ಮತ್ತು 06555/56) ಎಸಿ -ಟು ಟೈಯರ್ (1), ಎಸಿ -ತ್ರಿ ಟೈಯರ್ (6), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (3) ಮತ್ತು ಎಸ್ಎಲ್ಆರ್ ಡಿ (2) ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.
3. ಎಸ್ಎಸ್ಎಸ್ ಹುಬ್ಬಳ್ಳಿ-ಅಹಮದಾಬಾದ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07311/07312) ರೈಲುಗಳ ಸಂಚಾರ:
ಮಾರ್ಚ್ 24, 2024 ರಂದು ರೈಲು ಸಂಖ್ಯೆ 07311 ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 7:30 ಗಂಟೆಗೆ ಹೊರಟು, ಮರುದಿನ ಸಂಜೆ 7:20 ಗಂಟೆಗೆ ಅಹಮದಾಬಾದ್ ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 25, 2024 ರಂದು ರೈಲು ಸಂಖ್ಯೆ 07312 ಅಹಮದಾಬಾದ್ ನಿಲ್ದಾಣದಿಂದ ರಾತ್ರಿ 9:25 ಗಂಟೆಗೆ ಹೊರಟು, ಮರುದಿನ ಸಂಜೆ 7:45 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕಿನಲ್ಲಿ, ಧಾರವಾಡ, ಲೋಂಡಾ ಜಂ, ಬೆಳಗಾವಿ, ಘಟಪ್ರಭಾ, ಮಿರಜ್ ಜಂ, ಸಾಂಗ್ಲಿ, ಸತಾರಾ, ಪುಣೆ ಜಂ, ಲೋನಾವಲ, ಕಲ್ಯಾಣ್ ಜಂ, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಈ ರೈಲಿನಲ್ಲಿ ಎಸಿ-ಟು ಟೈಯರ್ (1), ಎಸಿ-ತ್ರಿ ಟೈಯರ್ (2), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (5) ಮತ್ತು ಎಸ್ಎಲ್ಆರ್ ಡಿ (2) ಸೇರಿದಂತೆ ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತದೆ.
ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವಗಳಿಗೆ ಅನುಕೂಲವಾಗುವಂತೆ ಈ ವಿಶೇಷ ರೈಲು ಸೇವೆಗಳನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆ ವೆಬ್ ಸೈಟ್ (https://enquiry.indianrail.gov.in) ಗೆ ಭೇಟಿ ನೀಡಿ ಅಥವಾ 139 ನಂಬರ್ ಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
BREAKING : ಭೂಪಾಲ್ ನ ‘ಟೆಂಟ್ ಹೌಸ್’ ಗೋದಾಮಿನಲ್ಲಿ ‘ಸಿಲಿಂಡರ್’ ಸ್ಫೋಟದಿಂದ ಭಾರಿ ಅಗ್ನಿ ಅವಘಡ
‘ನಮ್ಮ ಮೆಟ್ರೋ’ 3ನೇ ಹಂತದ ವಿಸ್ತರಣೆಗೆ ಡಬಲ್ ಡೆಕ್ಕರ್ ಮಾದರಿ ನಿರ್ಮಿಸಲು BMRCL ಚಿಂತನೆ