ಬೆಂಗಳೂರು: ದಿನಾಂಕ 15.07.2022 ರಿಂದ ಸೋಲಾಪುರ ಹಾಗೂ ದಿನಾಂಕ 16.07.2022 ರಿಂದ ಗದಗದಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 11305/11306 ಸೋಲಾಪುರ – ಗದಗ – ಸೋಲಾಪುರ ಡೈಲಿ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಮಧ್ಯ ರೈಲ್ವೆ ವಲಯವು ಪುನರಾರಂಭಿಸಿದೆ ಎಂಬುದಾಗಿ ತಿಳಿಸಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

Rain In Karnataka: ರಾಜ್ಯಾಧ್ಯಂತ ಜುಲೈ.5ರವರೆಗೆ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಜುಲೈ 15 ರಿಂದ ಸೋಲಾಪುರ – ಗದಗ ಡೈಲಿ ಎಕ್ಸ್ ಪ್ರೆಸ್ (11305) ರೈಲು 11:50 (AM) ಗಂಟೆಗೆ ಸೋಲಾಪುರ ನಿಲ್ದಾಣದಿಂದ ನಿರ್ಗಮಿಸಿ ಟಿಕೆಕರವಾಡಿ, ಹೋಟಗಿ, ಸುಲೇರಜವಳಗಿ, ತಡವಾಳ, ಪಡನೂರ, ಲಚ್ಯಾಣ, ಇಂಡಿ ರೋಡ, ಚೋರಗಿ, ನಿಂಬಾಳ, ಕ್ಯಾತನಕೇರಿ ರೋಡ, ಮಿಂಚನಾಳ, ವಿಜಯಪುರ, ಇಬ್ರಾಹಿಂಪುರ, ಜುಮನಾಳ, ಹೊನಗನಹಳ್ಳಿ, ಮುಳವಾಡ, ಕಲಗುರ್ಕಿ ಹಾಲ್ಟ್, ಕೂಡಗಿ, ಬಸವನ ಬಾಗೇವಾಡಿ ರೋಡ, ಅಂಗಡಗೇರಿ ಹಾಲ್ಟ್, ವಂದಾಲ, ಬೇನಾಳ ಹಾಲ್ಟ್, ಆಲಮಟ್ಟಿ, ಕೂಡಲ ಸಂಗಮ ರೋಡ, ಸೀತಿಮನಿ, ಜಡ್ರಾಮಕುಂಟಿ, ಕಡ್ಲಿಮಟ್ಟಿ, ಮುಗಳಳ್ಳಿ, ಬಾಗಲಕೋಟೆ, ಗುಳೇದಗುಡ್ಡ ರೋಡ, ಬಾದಾಮಿ, ಲಖಮಾಪುರ, ಹೊಳೆ ಆಲೂರು, ಮಲ್ಲಾಪೂರ, ಬಳಗಾನೂರ, ಹೊಂಬಳ ಮಾರ್ಗವಾಗಿ ಅದೇ ದಿನ 07:55 (PM) ಗಂಟೆಗೆ ಗದಗ ನಿಲ್ದಾಣಕ್ಕೆ ಆಗಮಿಸಲಿದೆ ಎಂದಿದೆ.

BREAKING NEWS: ರಾಜ್ಯದ ‘ಪೌರಕಾರ್ಮಿಕ’ರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಮಾಸಿಕ ‘2 ಸಾವಿರ ಸಂಕಷ್ಟ ಪರಿಹಾರ ಭತ್ಯೆ’

ಜುಲೈ 16 ರಿಂದ ಗದಗ – ಸೋಲಾಪುರ ಡೈಲಿ ಎಕ್ಸ್ ಪ್ರೆಸ್ (11306) ರೈಲು ಮಧ್ಯರಾತ್ರಿ 02.45 (AM) ಗಂಟೆಗೆ ಗದಗ ನಿಲ್ದಾಣದಿಂದ ನಿರ್ಗಮಿಸಿ ಹೊಂಬಳ, ಬಳಗಾನೂರ, ಮಲ್ಲಾಪೂರ, ಹೊಳೆ ಆಲೂರು, ಲಖಮಾಪುರ, ಬಾದಾಮಿ, ಗುಳೇದಗುಡ್ಡ ರೋಡ, ಬಾಗಲಕೋಟೆ, ಮುಗಳಳ್ಳಿ, ಜಡ್ರಾಮಕುಂಟಿ, ಕೂಡಲ ಸಂಗಮ ರೋಡ, ಆಲಮಟ್ಟಿ, ಬೇನಾಳ ಹಾಲ್ಟ್, ವಂದಾಲ, ಬಸವನ ಬಾಗೇವಾಡಿ ರೋಡ, ಮುಳವಾಡ, ಹೊನಗನಹಳ್ಳಿ, ಜುಮನಾಳ, ಇಬ್ರಾಹಿಂಪುರ, ವಿಜಯಪುರ, ಮಿಂಚನಾಳ, ನಿಂಬಾಳ, ಚೋರಗಿ, ಇಂಡಿ ರೋಡ, ಲಚ್ಯಾಣ, ಪಡನೂರ, ತಡವಾಳ, ಸುಲೇರಜವಳಗಿ, ಹೋಟಗಿ, ಟಿಕೆಕರವಾಡಿ ಮಾರ್ಗವಾಗಿ ಅದೇ ದಿನ 10:15 (AM) ಗಂಟೆಗೆ ಸೋಲಾಪುರ ನಿಲ್ದಾಣವನ್ನು ತಲುಪಲಿದೆ ಎಂದು ಹೇಳಿದೆ.

BIGG NEWS : ಜುಲೈ 4 ರಂದು ಆಂಧ್ರಪ್ರದೇಶ, ಗುಜರಾತ್​ನ​​ ಗಾಂಧಿನಗರಕ್ಕೆ ಪ್ರಧಾನಿ ಮೋದಿ ಭೇಟಿ : ಹಲವು ಕಾರ್ಯಕ್ರಮಗಳಲ್ಲಿ ಭಾಗಿ | PM Modi to visit AP,Gujarat

ಈ ಎರಡು ರೈಲುಗಳು, ಹತ್ತು-ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳು ಸೇರಿ ಒಟ್ಟು ಹನ್ನೆರಡು ಬೋಗಿಗಳ ಸಂಯೋಜನೆ ಹೊಂದಿರುತ್ತದೆ. ಈ ಎರಡು ರೈಲುಗಳ ವೇಳಾಪಟ್ಟಿಯ ವಿವರಗಳಿಗಾಗಿ, ದಯವಿಟ್ಟು ಭಾರತೀಯ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಿ ಎಂದು ತಿಳಿಸಿದೆ.

ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿದೆ.

Share.
Exit mobile version