ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ರೈಲ್ಒನ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದ ಟಿಕೆಟ್ ಬುಕ್ಕಿಂಗ್ 3% ಡಿಜಿಟಲ್ ಪಾವತಿ ರಿಯಾಯಿತಿ ಘೋಷಣೆ ಮಾಡಲಾಗಿದೆ.
ಪ್ರಯಾಣಿಕರಿಗೆ ಇನ್ನಷ್ಟು ಸುಲಭ ಮತ್ತು ಸುಗಮ ಸೇವೆಗಳನ್ನು ಒದಗಿಸುವ ಉದ್ದೇಶದಿಂದ, ಭಾರತೀಯ ರೈಲ್ವೆ ತನ್ನ ಹೊಸ ಅಧಿಕೃತ ಮೊಬೈಲ್ ಅಪ್ಲಿಕೇಶನ್ ರೈಲ್ಒನ್ ಅನ್ನು ಪ್ರಾರಂಭಿಸಿದೆ. ಈ ಅಪ್ಲಿಕೇಶನ್ನಲ್ಲಿ ಎಲ್ಲಾ ಪ್ರಮುಖ ರೈಲ್ವೆ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಾಗಿದೆ.
ರೈಲ್ಒನ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಕಾಯ್ದಿರಿಸಿದ ಹಾಗೂ ಕಾಯ್ದಿರಿಸದ ಟಿಕೆಟ್ಗಳ ಬುಕ್ಕಿಂಗ್, ಲೈವ್ ರೈಲು ಸಂಚಾರ ಸ್ಥಿತಿ ವೀಕ್ಷಣೆ, ಪಿಎನ್ಆರ್ ಮಾಹಿತಿ ಪರಿಶೀಲನೆ, ಪ್ರಯಾಣ ಯೋಜನೆ, ರೈಲ್ ಮದದ್ ಮೂಲಕ ದೂರು ದಾಖಲಿಸುವುದು ಹಾಗೂ ಪ್ರಯಾಣದ ವೇಳೆ ಆಹಾರ ಆರ್ಡರ್ ಮಾಡುವಂತಹ ಸೌಲಭ್ಯಗಳನ್ನು ಪಡೆಯಬಹುದು. ಎಂ-ಪಿನ್ ಮತ್ತು ಬಯೋಮೆಟ್ರಿಕ್ ಆಧಾರಿತ ಸುರಕ್ಷಿತ ಲಾಗಿನ್ ವ್ಯವಸ್ಥೆ, ಆರ್-ವಾಲೆಟ್ ಪಾವತಿ ವ್ಯವಸ್ಥೆ ಮತ್ತು ರೈಲ್ಕನೆಕ್ಟ್ ಹಾಗೂ ಯುಟಿಎಸ್ ಖಾತೆಗಳೊಂದಿಗೆ ಸಮನ್ವಯತೆ ಈ ಅಪ್ಲಿಕೇಶನ್ ಅನ್ನು ಹೆಚ್ಚು ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿಯಾಗಿಸುತ್ತದೆ.
ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸುವ ಭಾಗವಾಗಿ, ರೈಲ್ಒನ್ ಅಪ್ಲಿಕೇಶನ್ ಮೂಲಕ ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿಕೊಂಡು ಕಾಯ್ದಿರಿಸದ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ 3 ಶೇಕಡಾ ರಿಯಾಯಿತಿ ನೀಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ರಿಯಾಯಿತಿ ರೈಲ್ಒನ್ ಅಪ್ಲಿಕೇಶನ್ನಲ್ಲಿ ಡಿಜಿಟಲ್ ಪಾವತಿಯ ಮೂಲಕ ಮಾಡಲಾದ ಕಾಯ್ದಿರಿಸದ ಟಿಕೆಟ್ ಬುಕ್ಕಿಂಗ್ಗಳಿಗೆ ಮಾತ್ರ ಅನ್ವಯವಾಗುತ್ತದೆ.
ಈ ವಿಶೇಷ ರಿಯಾಯಿತಿ ಯೋಜನೆ 14.01.2026 ರಿಂದ 14.07.2026 ರವರೆಗೆ ಜಾರಿಯಲ್ಲಿರುತ್ತದೆ. ಎಲ್ಲಾ ಪ್ರಯಾಣಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಭಾರತೀಯ ರೈಲ್ವೆ ಮನವಿ ಮಾಡುತ್ತದೆ.
‘ವೀಕೆಂಡ್ ವಿತ್ ರಮೇಶ್’ ಪಾಠವಾಗಿ ಇಡಿ, ‘ಶಿಕ್ಷಣ ವ್ಯವಸ್ಥೆ’ ಬದಲಾಯಿಸಿ: ‘ಡೆತ್ ನೋಟ್’ ಬರೆದಿಟ್ಟು ಯುವಕ ಆತ್ಮಹತ್ಯೆ








