ಬೆಂಗಳೂರು: ಕೆಲ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಸೆರೆವಾಸ ಮುಗಿಸಿ ಬಂದ ಕೈದಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮಾಜಿ ಕೈದಿಗಳಿಗೆ ನೌಕರಿ ಕೊಡಿಸಲು ಸಿದ್ಧತೆ ನಡೆಸಲಾಗಿದೆ.
BIGG NEWS: ದೆಹಲಿ ಮದ್ಯ ನೀತಿ ಪ್ರಕರಣ: ಹಲವು ನಗರದ 40 ಸ್ಥಳಗಳ ಮೇಲೆ ED ದಾಳಿ
ಸಜೆ ಸಮಯದಲ್ಲಿ ಜೈಲಿನಲ್ಲಿರುವಾಗ ಸೌಜನ್ಯದಿಂದ ವರ್ತನೆ ಮಾಡಿರುವ ಹಾಗೂ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಹೊರ ಬರುವ ಕೈದಿಗಳಿಗೆ ಉದ್ಯೋಗಾವಕಾಶವನ್ನ ಕಲ್ಪಿಸಿಕೊಡಲು ತಯಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಹಿರಿಯ ಅಧಿಕಾರಿಗಳು ಪೆಟ್ರೋಲಿಯಂ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಸಂಸ್ಥೆ ಸೇರಿದಂತೆ ಎರಡು ಮೂರು ಸಂಸ್ಥೆಗಳ ಜೊತೆ ಮಾತುಕತೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
BIGG NEWS: ದೆಹಲಿ ಮದ್ಯ ನೀತಿ ಪ್ರಕರಣ: ಹಲವು ನಗರದ 40 ಸ್ಥಳಗಳ ಮೇಲೆ ED ದಾಳಿ
ಪೆಟ್ರೋಲ್ ಬಂಕ್ ಗಳಲ್ಲಿ ಉದ್ಯೋಗಾವಕಾಶಗಳ ಕೊಡಿಸುವ ವ್ಯವಸ್ಥೆಗೆ ತಯಾರಿ ಮಾಡಲಾಗುತ್ತಿದೆ. ಕೈದಿಗಳು ಅನ್ನೋ ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದರು ಕೂಡ ಸಮಾಜದಲ್ಲಿ ಅವರಿಗೆ ಗುರುತಿಸಿ ಕೆಲಸ ಕೊಡುವುದಿಲ್ಲ. ಈ ಕಾರಣಕ್ಕೆ ಸನ್ನಡತೆ ಆಧಾರದ ಮೇಲೆ ಹೊರ ಬಂದವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾಯಕ್ಕೆ ಜೈಲು ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.