ಬೆಂಗಳೂರು: ನಗರ ಪ್ರದೇಶದ ಹಿಂದುಳಿದ ವರ್ಗದ ಜನವಸತಿ ಪ್ರದೇಶಗಳ್ಲಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ( BBMP ) ಸೆಪ್ಟೆಂಬರ್ 5ರಿಂದ ಉಚಿತ ಸಂಜೆ ಟ್ಯೂಷನ್ ( Free Tuition ) ಆರಂಭಿಸಲಾಗುತ್ತಿದೆ. ಈ ಮೂಲಕ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಂತ ವರ್ಗದ ಮಕ್ಕಳ ಶೈಕ್ಷಣಿಕ ಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

BIG NEWS: ರಾಮಮಂದಿರ ಕೆಲಸ ಶೇ.40ರಷ್ಟು ಪೂರ್ಣ: 2023ರ ಡಿಸೆಂಬರ್ ಗೆ ಭಕ್ತರಿಗೆ ಮುಕ್ತ

ಈ ಕುರಿತಂತೆ ಮಾಹಿತಿ ನೀಡಿರುವಂತ ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಡಾ.ರಾಮ್ ಪ್ರಸಾತ್ ಮನೋಹರ್ ಅವರು, ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಸೆಪ್ಪೆಂಬರ್ 5ರ ಶಿಕ್ಷಕ ದಿನಾಚರಣೆಯಂದು ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಗತಿಗಳಿಗೆ ಚಾಲನೆ ನೀಡಲಾಗುತ್ತದೆ. ಈ ಟ್ಯೂಷನ್ ವ್ಯವಸ್ಥೆಯನ್ನು ಅಗಸ್ತ್ಯ ಫೌಂಡೇಷನ್  ಸಂಸ್ಥೆಗೆ ವಹಿಸಲಾಗಿದೆ ಎಂದರು.

BIG NEWS: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ವಿಚಾರಣೆ | Hijab Row Suprem court

ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನವಸತಿ ಪ್ರದೇಶಗಳಲ್ಲಿನ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ನೀಡುವಂತ ಉಚಿತ ಟ್ಯೂಷನ್ ತರಬೇತಿ ನೀಡುವಂತ ಶಿಕ್ಷಕರಿಗೆ, ಬಿಬಿಎಂಪಿ ವತಿಯಿಂದ ಮಾಸಿಕ ರೂ.3,500 ನೀಡಲಾಗುತ್ತದೆ. ಇದರಲ್ಲಿ ರೂ.1,500 ಗೌರವಧನವಾದ್ರೇ, ರೂ.2 ಸಾವಿರ ತರಬೇತಿ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ‘ಗೌರಿ-ಗಣೇಶ ಹಬ್ಬ’ಕ್ಕೆ ಭರ್ಜರಿ ಗಿಫ್ಟ್: ‘ಸಖಿ ಭಾಗ್ಯ’ ಯೋಜನೆ ಜಾರಿ

ಅಂದಹಾಗೇ ಪ್ರಾಯೋಗಿಕವಾಗಿ ಉಚಿತ ಟ್ಯೂಷನ್ ಅನ್ನು ಸೆಪ್ಟೆಂಬರ್ 5ರಿಂದ ಆರಂಭಿಸಲಾಗುತ್ತಿದೆ. ಬಿಬಿಎಂಪಿಯ 10 ಶಾಲೆಗಳಲ್ಲಿ ಆರಂಭಿಸಲಾಗುತ್ತಿದ್ದು, ಈ ಯೋಜನೆ ಯಶಸ್ವಿಯಾದ್ರೇ, ಮುಂದಿನ ದಿನಗಳಲ್ಲಿ 200 ರಿಂದ 300 ಅಧ್ಯಯನ ಕೇಂದ್ರ ಆರಂಭಿಸೋ ಚಿಂತನೆಯನ್ನು ಬಿಬಿಎಂಪಿ ನಡೆಸಿದೆ.

Share.
Exit mobile version