ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಮತ್ತು ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್ ಮತ್ತು ಡಿಎಆರ್) ಹುದ್ದೆಗಳಿಗೆ ( Karnataka Police Constable Recruitment ) ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಎರಡು ವರ್ಷಗಳಿಗೆ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ.
ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಳಿಯನ್ನು ಹೊರಡಿಸಿದ್ದು, ಪೊಲೀಸ್ ಕಾನ್ಸ್ ಟೇಬಲ್ ( Police Constable ) (ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್ ಮತ್ತು ಡಿಎಆರ್) ಹುದ್ದೆಗಳಿಗೆ ನಿಗಧಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ 2022-23ನೇ ಸಾಲಿನಲ್ಲಿ ನೇಮಕಾತಿಗೆ ಕರೆದಿರುವ ಪೊಲೀಸ್ ಕಾನ್ಸ್ ಟೇಬಲ್ ( ಸಿಎಆರ್ ಮತ್ತು ಡಿಎಆರ್) 420+3064 ಸೇರಿ ಒಟ್ಟು 3484 ಹುದ್ದೆಗಳಿಗೆ ಮತ್ತು ಪೊಲೀಸ್ ಕಾನ್ಸ್ ಟೇಬಲ್ ( ಸಿವಿಲ್ ) 1137+454 ಸೇರಿದಂತೆ 1591 ಹುದ್ದೆಗಳಿಗೆ ಮಾತ್ರ ಗರಿಷ್ಠ ವಯೋಮಿತಿಯನ್ನು ಎರಡುವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆ ಮತ್ತು ಪೊಲೀಸ್ ಕಾನ್ಸ್ ಟೇಬಲ್ ( ಸಿಎಆರ್ ಮತ್ತು ಡಿಎಆರ್ ) ಹುದ್ದೆಗಳಿಗೆ ಗರಿಷ್ಠ ವಯೋಮಿತಿಯ ಕುರಿತಂತೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಇಗೆ ಅಗತ್ಯ ತಿದ್ದುಪಡಿ ಮಾಡವು ಷರತ್ತಿಗೆ ಒಳಪಟ್ಟು ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ