ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಛತ್ ಪೂಜೆ ಹಬ್ಬದ ಸಮಯದಲ್ಲಿ ಹೆಚ್ಚುವರಿ ರಶ್ ಅನ್ನು ನಿವಾರಿಸಲು, ನೈಋತ್ಯ ರೈಲ್ವೆಯು ಕೆ ಎಸ್ ಆರ್ ಬೆಂಗಳೂರು-ದಾನಾಪುರ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಗಳ ನಡುವೆ ಏಕಮುಖ ವಿಶೇಷ ರೈಲು ಸಂಚರಿಸಲಿದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ. 06259/06260 ಕೆ ಎಸ್ ಆರ್ ಬೆಂಗಳೂರು-ದಾನಾಪುರ-ಎಸ್ ಎಂ ವಿ ಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್)
ರೈಲು ಸಂಖ್ಯೆ 06259 ನವೆಂಬರ್ 4, 2024 ರಂದು (ಸೋಮವಾರ) 12:00 PM ಕೆ ಎಸ್ ಆರ್ ಬೆಂಗಳೂರಿನಿಂದ ಹೊರಡುತ್ತದೆ ಮತ್ತು ನವೆಂಬರ್ 6, 2024 ರಂದು 9:00 AM ಕ್ಕೆ ದಾನಪುರವನ್ನು ತಲುಪುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06260 ದಾನಪುರದಿಂದ ನವೆಂಬರ್ 8, 2024 ರಂದು ರಾತ್ರಿ 8:50 ಕ್ಕೆ ಹೊರಟು ನವೆಂಬರ್ 10, 2024 ರಂದು ಸಂಜೆ 5:40 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ತಲುಪುಲಿದೆ.
ರೈಲು ಎರಡೂ ದಿಕ್ಕುಗಳಲ್ಲಿ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲುತ್ತದೆ: ಯಲಹಂಕ, ಧರ್ಮಾವರಂ, ಧೋನೆ, , ಕಚೆಗುಡಾ, ಕಾಜಿಪೇಟ್, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಪ್ರಯಾಗ್ರಾಜ್ ಛೋಕಿ, ಪಿಟಿ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ಜಂಕ್ಷನ್.
ವಿಶೇಷ ರೈಲು 22 ಬೋಗಿಗಳನ್ನು ಒಳಗೊಂಡಿರುತ್ತದೆ.
ಪ್ರತಿ ನಿಲ್ದಾಣದಲ್ಲಿ ವಿವರವಾದ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್ www.enquiry.indianrail.gov.in ಅನ್ನು ಪರಿಶೀಲಿಸಲು ವಿನಂತಿಸಲಾಗಿದೆ, NTES ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ ಮಾಡಿ.