ಬೆಂಗಳೂರು : 2024-25 ನೇ ಸಾಲಿನ ಆಯವ್ಯಯ ಕಂಡಿಕೆ-163 ರಲ್ಲಿ ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ, 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1) ರ ಆದೇಶದಲ್ಲಿ 2024-25 ನೇ ಸಾಲಿನ ಆಯವ್ಯಯದ ಕಂಡಿಕೆ-163 ರಲ್ಲಿ ಘೋಷಿಸಿರುವಂತೆ ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ 20 ಹೊಸ ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ಪ್ರಾರಂಭಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (2)ರ ಏಕ ಕಡತದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಯಲ್ಲಿ ರಾಜ್ಯದ 31 ಜಿಲ್ಲೆ 231 ತಾಲ್ಲೂಕಿನ 770 ಹೋಬಳಿಗಳ ಪೈಕಿ ಪರಿಶಿಷ್ಟ ಜಾತಿಯ-503, ಪರಿಶಿಷ್ಟ ವರ್ಗ-144 ಹಾಗೂ ಹಿಂದುಳಿದ ವರ್ಗ-174 ವಸತಿ ಶಾಲೆಗಳು ಒಟ್ಟು 821 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರದ ಆದೇಶ ಸಂಖ್ಯೆ:ಸಕಇ 108 ಎಂಡಿಎಸ್ 2024, ದಿನಾಂಕ:24.06.2024ರಲ್ಲಿ ಮಂಜೂರು ಮಾಡಿ ಆದೇಶಿಸಲಾಗಿರುತ್ತದೆ. ಸದರಿ ಆದೇಶದಲ್ಲಿನ 20 ಶಾಲೆಗಳನ್ನು ವಿಧಾನಸಭಾ ಕ್ಷೇತ್ರವಾರು ಪ್ರತಿ ಹೋಬಳಿಯಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಲು ಒಟ್ಟಾರೆ ಹೋಬಳಿಗಳ ಸಂಖ್ಯೆಯಷ್ಟು ವಸತಿ ಶಾಲೆಗಳನ್ನು ಪರಿಗಣಿಸಲಾಗಿದ್ದು, ಅದರಂತೆ ವಿಧಾನಸಭಾ ಕ್ಷೇತ್ರವಾರು ಒಟ್ಟಾರೆ ಹೋಬಳಿ ಸಂಖ್ಯೆಯಲ್ಲಿ ಹೋಬಳಿಗಳ ಸಂಖ್ಯೆಗಿಂತ ಕಡಿಮೆ ವಸತಿ ಶಾಲೆಗಳು ಇರುವ ವಿಧಾನಸಭಾ ಕ್ಷೇತ್ರಗಳಲ್ಲಿನ ಹೋಬಳಿಗಳಲ್ಲಿ ಹೊಸದಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. ಅದರಂತೆ, ವಿಧಾನ ಸಭಾ ಕ್ಷೇತ್ರದ ಹೋಬಳಿಗಳ ಸಂಖ್ಯೆಗಳಿಗನುಗುಣವಾಗಿ ಒಟ್ಟು ಶಾಲೆಗಳನ್ನು ಪರಿಗಣಿಸಿದಾಗ 21 ಹೋಬಳಿಗಳಲ್ಲಿ ವಸತಿ ಶಾಲೆಗಳು ಇರುವುದಿಲ್ಲ. ಆದುದರಿಂದ, 21 ಹೋಬಳಿಗಳಲ್ಲಿನ 20 ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ಆಯ್ಕೆ ಮಾಡಬೇಕಾಗಿರುತ್ತದೆ.
ಈಗಾಗಲೇ ಆದೇಶವನ್ನು ಹೊರಡಿಸಲಾಗಿರುವ ಪಟ್ಟಿಯಲ್ಲಿನ ವಸತಿ ಶಾಲೆಗಳು ವಿಧಾನ ಸಭಾ ಕ್ಷೇತ್ರವಾರು ಒಟ್ಟಾರ ಹೋಬಳಿಗಳಲ್ಲಿನ ಸಂಖ್ಯೆಯನ್ನು ಶಾಲೆಗಳು ಈಗಾಗಲೇ ಸದರಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಇರುವುದರಿಂದ ಮತ್ತು ಸದರಿ ವಿಧಾನ ಸಭಾ ಕ್ಷೇತ್ರಗಳಿಗೆ ವಸತಿ ಶಾಲೆಗಳು ಹೆಚ್ಚುವರಿಯಾಗುವುದರಿಂದ ಪ್ರಸ್ತುತ ಆಯ್ಕೆ ಮಾಡಲಾಗಿರುವ ಹೋಬಳಿಗಳಲ್ಲಿ ಹೊಸದಾಗಿ ಶಾಲೆಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. ಅದರಂತೆ, 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 20 ಹೋಬಳಿಗಳಲ್ಲಿ ಹೊಸ ಶಾಲೆಗಳನ್ನು ಪ್ರಾರಂಭಿಸಲು ಪರಿಷ್ಕೃತ ಪಟ್ಟಿಯನ್ನು ಸಲ್ಲಿಸಿ, ಪರಿಷ್ಕೃತ ಪ್ರಸ್ತಾವನೆಗೆ ಆದೇಶ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಕಇ 108 ಎಂಡಿಎಸ್ 2024, ಬೆಂಗಳೂರು, 2:27.09.2024
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಕಇ 108 ಎಂಡಿಎಸ್ 2024, ದಿನಾಂಕ:24.06.2024 ರ ಆದೇಶವನ್ನು ಹಿಂಪಡೆದು, 2024-25 ನೇ ಸಾಲಿನ ಆಯವ್ಯಯದ ಕಂಡಿಕೆ-163 ರಲ್ಲಿ ಘೋಷಿಸಿರುವಂತೆ ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಿಗೆ ಅನುಬಂಧದಲ್ಲಿರುವ 20 ಹೊಸ ವಸತಿ ಶಾಲೆಗಳನ್ನು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ಪ್ರಾರಂಭಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಿದೆ.
ಷರತ್ತುಗಳು:
1. ಸದರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸೃಜನೆ/ಆವರ್ತಕ/ಅನಾವರ್ತಕ ವೆಚ್ಚದ ಸಂಪೂರ್ಣ ಸಂಬಂಧ ಹುದ್ದೆಗಳ ಮಾಹಿತಿಯೊಂದಿಗೆ ಸಹಮತಿಯನ್ನು ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
2. ಸದರಿ ಕಾರ್ಯಕ್ರಮಗಳನ್ನು ಮಾರ್ಗಸೂಚಿಯನ್ವಯ, ಪಾರದರ್ಶಕತೆಯಿಂದ ನಿಯಮಾನುಸಾರ ಅನುಷ್ಠಾನಗೊಳಿಸುವುದು.
ಈ ಆದೇಶವನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿಎಸ್ 14 ಐಎಂಎಂ 2024, ದಿನಾಂಕ:06.05.2024 ರಲ್ಲಿ ನೀಡಿರುವ ಸಹಮತಿ ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 322 ವೆಚ್ಚ-3/2024, ದಿನಾಂಕ:17.05.2024 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.