ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿಸಿ, ಓಸಿ ಪಡೆಯದೇ ಕಟ್ಟಿರುವಂತ ಮನೆಯ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ 1200 ಅಡಿಯಲ್ಲಿ ಕಟ್ಟಿರುವ ಮನೆಗೆ ವಿದ್ಯುತ್, ನೀರು ಸರಬರಾಜು ಸಂಪರ್ಕ ನೀಡಲು ನಿರ್ಧರಿಸಿದೆ.
ಹೌದು. ಸಿಸಿ, ಓಸಿ ಪಡೆಯದೇ ಮನೆಯನ್ನು ಕಟ್ಟಿರುವಂತ ಮಾಲೀಕರಿಗೆ ನೀರು, ವಿದ್ಯುತ್ ಸಂಪರ್ಕ ನೀಡಲು ನಿರ್ಧರಿಸಲಾಗಿದೆ. 1200 ಅಡಿಯಲ್ಲಿ ಕಟ್ಟಿರುವ ಮನೆಗಳಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ ಎಂದಿದೆ.
30X40 ಸೈಟ್ ನಲ್ಲಿ ಕಟ್ಟಿರುವ ಮನೆಗಳಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರ್ಕಾರ ನಿರ್ಧಾರವನ್ನು ಕೈಗೊಳ್ಳಲಿದೆ.
1200 ಅಡಿಗಿಂತ ಮೇಲ್ಪಟ್ಟ ಕಟ್ಟಡಗಳಿಗೆ ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಕಾನೂನು ಅಡೆತಡೆಗಳ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.
ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ
‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್