ಬೆಂಗಳೂರು: ಇಂದಿನ ದಿನದಲ್ಲಿ ನಮ್ಮ ಮೆಟ್ರೋದಲ್ಲಿ ಓಡಾಡುವ ಸಂಖ್ಯೆ ಹೆಚ್ಚಾಗಿದೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಿಕೊಳ್ಳುವ ಸಲುವಾಗಿ ಮೆಟ್ರೋದಲ್ಲೇ ಜನರು ಓಡಾಡುತ್ತಾರೆ.
BIGG NEWS : ರಾಜ್ಯದ ಶಾಲೆಗಳಲ್ಲಿ ‘ಮೊಬೈಲ್ ಲೆಸ್ ಡೇ’ ನಿಯಮ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ
ಆದರೆ ಸದ್ಯ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಒಬ್ಬೊಬ್ಬರು ಒಂದೊಂದು ಟಿಕೆಟ್ ಪಡೆದು ಪ್ರಯಾಣಿಸಬೇಕು. ನೀವು ಕುಟುಂಬ ಸಹಿತ ಪ್ರಯಾಣ ಮಾಡುತ್ತಿದ್ದರೂ ಪ್ರತ್ಯೇಕ ಟಿಕೆಟ್ ಮಾಡಿ ಪ್ರಯಾಣಿಸಬೇಕು. ಇದರಿಂದಾಗಿ ಟಿಕೆಟ್ ಕೌಂಟರ್ನಲ್ಲಿ ಹೆಚ್ಚು ಹೊತ್ತು ಕಾಯಬೇಕಾಗುವ ಸ್ಥಿತಿ ಇದೆ. ಆದರೆ ಇನ್ನು ಮುಂದೆ ಇಂತಹ ಪರಿಸ್ಥಿತಿ ಇರುವುದಿಲ್ಲ. ಏಕೆಂದರೆ, ಬೆಂಗಳೂರು ನಮ್ಮ ಮೆಟ್ರೋ ನಿಗಮ , ಒಂದೇ ಟಿಕೆಟ್ನಲ್ಲಿ ಒಂದಕ್ಕಿಂತ ಹೆಚ್ಚು ಹಾಗೂ ಗರಿಷ್ಠ ಆರು ಮಂದಿ ಪ್ರಯಾಣಿಸುವ ಅವಕಾಶವನ್ನು ಶೀಘ್ರದಲ್ಲೇ ಕಲ್ಪಿಸುತ್ತಿದೆ. ಇದು ಗುಂಪಾಗಿ ಪ್ರಯಾಣಿಸುವ, ವಿಶೇಷವಾಗಿ ಕುಟುಂಬವಾಗಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
BIGG NEWS : ರಾಜ್ಯದ ಶಾಲೆಗಳಲ್ಲಿ ‘ಮೊಬೈಲ್ ಲೆಸ್ ಡೇ’ ನಿಯಮ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ
ಒಂದು ಟಿಕೆಟ್ ಮೂಲಕ ಗುಂಪು ಪ್ರಯಾಣದ ಅವಕಾಶವು ಜನವರಿ 15ರ ಒಳಗಾಗಿ ಆರಂಭಿಸಲಾಗುವುದು. ಈ ಕ್ರಮವು ಅನೇಕರ ಸಮಯವನ್ನು ಉಳಿಸಲಿದೆ. ಪ್ರಸ್ತುತ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ನವೆಂಬರ್ 1 ರಂದು ಪ್ರಾರಂಭಿಸಲಾದ ಕ್ಯೂಆರ್ ಟಿಕೆಟ್ ವ್ಯವಸ್ಥೆಯು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.