ಬೆಂಗಳೂರು : ಹೊಸ ವರ್ಷ ಕೌಂಟ್ಡೌನ್ ಹಿನ್ನೆಲೆ ಸಂಭ್ರಮಾಚರಣೆಗಾಗಿ ಕೆಎಸ್ಆರ್ಟಿಸಿ ಸಿಹಿಸುದ್ದಿ ನೀಡಿದೆ. ಮಂಗಳೂರು ಕೆಎಸ್ಆರ್ಟಿಸಿ ವಿಭಾಗದಿಂದ ಕೇರಳ, ಮಡಿಕೇರಿ ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಡಿಸೆಂಬರ್ 31ರವರೆಗೆ ಇರಲಿದೆ ಎಂದು ತಿಳಿದುಬಂದಿದೆ
BIGG NEWS: ಮಂಗಳೂರು ಪ್ರಯಾಣಿಕರೇ ಗಮನಿಸಿ : ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯ
ಮಂಗಳೂರು ಬಸ್ ನಿಲ್ದಾಣದಿಂದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬೆಳಗ್ಗೆ 8 ರಿಂದ 10ರವರೆಗೆ, ಕುಂಬ್ಳೆ ಶ್ರೀ ಅನಂತಪದ್ಮನಾಭ ದೇವಸ್ಥಾನ ಬೆಳಗ್ಗೆ 10.15 ರಿಂದ 11ರವರೆಗೆ, ಮಧೂರು ಶ್ರೀ ಮದನಂತೇಶ್ವರ, ಗಣಪತಿ ದೇವಸ್ಥಾನ 11.15 ರಿಂದ 12 ರವರೆಗೆ, ಮಲ್ಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ 12.30ರಿಂದ 1.30ರ ವರೆಗೆ, ನಂತರ ಕಾಂಞಗಾಡ್ ನಿತ್ಯಾನಂದ ಆಶ್ರಮ ಮಧ್ಯಾಹ್ನ 3 ರಿಂದ 4ರ ವರೆಗೆ, ಬೇಕಲ್ ಫೋರ್ಟ್ ಬೀಚ್ 4:15ರಿಂದ ಸಂಜೆ 6ರ ವರೆಗೆ ಪ್ರವಾಸ ಮಾಡಬಹುದಾಗಿದೆ. ಮತ್ತೆ ಕೆಎಸ್ಆರ್ಟಿಸಿ ಬಸ್ ರಾತ್ರಿ 8 ಗಂಟೆಗೆ ಮಂಗಳೂರು ಬಸ್ ನಿಲ್ದಾಣ ತಲುಪಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ
BIGG NEWS: ಮಂಗಳೂರು ಪ್ರಯಾಣಿಕರೇ ಗಮನಿಸಿ : ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯ
ಪ್ರವಾಸ ತೆರಳುವ ವಯಸ್ಕರಿಗೆ 750 ರೂ. ಇರುತ್ತದೆ. ಇದರಲ್ಲಿ ಕೇರಳದ ಬಾರ್ಡರ್ ಟ್ಯಾಕ್ಸ್ 310 ರೂಪಾಯಿ , ಟೋಲ್ ದರ 10 ರೂ. ಕೂಡ ಇರಲಿದೆ. ಹಾಗೆಯೇ ಮಕ್ಕಳಿಗೆ 700 ರೂಪಾಯಿ ಇರುತ್ತದೆ. ಅದರಲ್ಲೂ 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಈ ದರವನ್ನು ನಿಗದಿಪಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
BIGG NEWS: ಮಂಗಳೂರು ಪ್ರಯಾಣಿಕರೇ ಗಮನಿಸಿ : ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯ
ಮಂಗಳೂರಿನಿಂದ ಬೆಳಗ್ಗೆ 7 ಕ್ಕೆ ಹೊರಟು ಪುತ್ತೂರು, ಸುಳ್ಯ ಮಾರ್ಗವಾಗಿ ಬೆಳಗ್ಗೆ 11ಕ್ಕೆ ಮಡಿಕೇರಿ ರಾಜಾಸೀಟ್ ತಲುಪುತ್ತದೆ. ಮಧ್ಯಾಹ್ನ 2:30 ರಿಂದ 3:15ರ ವರೆಗೆ ಅಬ್ಬಿಫಾಲ್ಸ್, ಸಂಜೆ 4:30 ರಿಂದ 4:45ರ ವರೆಗೆ ನಿಸರ್ಗಧಾಮ, ಸಂಜೆ 5:15 ರಿಂದ 5:30ರ ವರೆಗೆ ಗೋಲ್ಡನ್ ಟೆಂಪಲ್, ಹಾರಂಗಿ ಡ್ಯಾಮ್, ನಂತರ ಸಂಜೆ 6:15ಕ್ಕೆ ಹಾರಂಗಿ ಡ್ಯಾಮ್ನಿಂದ ಹೊರಟು ರಾತ್ರಿ 10:30ಕ್ಕೆ ಮಂಗಳೂರು ತಲುಪಲಿದೆ.
ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವನ್ನು ನೋಡುವುದಾದರೆ, ವಯಸ್ಕರಿಗೆ 500 ರೂಪಾಯಿ ಹಾಗೂ ಮಕ್ಕಳಿಗೆ 450 ರೂಪಾಯಿ ನಿಗದಿಪಡಿಸಲಾಗಿದ್ದು,
BIGG NEWS: ಮಂಗಳೂರು ಪ್ರಯಾಣಿಕರೇ ಗಮನಿಸಿ : ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯ
ಇದು 6 ವರ್ಷದಿಂದ 12 ವರ್ಷದ ಮಕ್ಕಳಿಗೆ ಮಾತ್ರ ಅನ್ವಯವಾಗಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ www.ksrtc.in ಅಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು KSRTC ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದು ಹೊಸ ವರ್ಷಾಚರಣೆಗೆ ಪ್ರವಾಸ ಕೈಗೊಳ್ಳಬೇಕೆಂದು ಕೊಂಡವರಿಗೆ ಕೆಎಸ್ಆರ್ಟಿಸಿಯ ಈ ಅವಕಾಶವನ್ನು ಪಡೆಯಬಹುದು
BIGG NEWS: ಮಂಗಳೂರು ಪ್ರಯಾಣಿಕರೇ ಗಮನಿಸಿ : ಡಿ. 26 ರಿಂದ 28 ರವರೆಗೆ ಸರ್ಕಾರಿ ಬಸ್ಸುಗಳ ಸಂಚಾರ ವ್ಯತ್ಯಯ