Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ಮಹಾನಗರ ಪಾಲಿಕೆಯ ನೌಕರರಿಗೆ’ ಶುಭಸುದ್ದಿ : ‘7ನೇ ವೇತನ’ ಆಯೋಗ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ
KARNATAKA

ರಾಜ್ಯದ ‘ಮಹಾನಗರ ಪಾಲಿಕೆಯ ನೌಕರರಿಗೆ’ ಶುಭಸುದ್ದಿ : ‘7ನೇ ವೇತನ’ ಆಯೋಗ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ

By kannadanewsnow57

ಬೆಂಗಳೂರು : ಕರ್ನಾಟಕ ರಾಜ್ಯದ 10 ಮಹಾನಗರ ಪಾಲಿಕೆಗಳ ಖಾಯಂ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನನ್ವಯ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯವನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ದಿನಾಂಕ: 09.07.2018ರ ಆದೇಶದಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯನ್ನು ಪರಿಷ್ಕರಿಸಿದ ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 06 ಎಸ್‌ಆರ್‌ಪಿ 2018, ದಿನಾಂಕ: 01.03.2018 ಮತ್ತು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 06 ಎಸ್‌ಆರ್‌ಪಿ 2018, ದಿನಾಂಕ: 19.04.2018 ರಲ್ಲಿನ ನಿರ್ದೇಶನದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ / ನೌಕರರಿಗೆ 2018ರ ಪರಿಷ್ಕೃತ ವೇತನ ಶ್ರೇಣಿ ಸೌಲಭ್ಯವನ್ನು ದಿನಾಂಕ: 01.07.2017 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ. ಆದರೆ, ವೇತನ ಪರಿಷ್ಕರಣೆಯ ಆರ್ಥಿಕ ಸೌಲಭ್ಯವು ದಿನಾಂಕ: 01.04.2018 ರಿಂದ ಜಾರಿಗೆ ಬರುವಂತೆ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ದಿನಾಂಕ: 22.07.2024ರ ಆದೇಶದಲ್ಲಿ, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿ, ಅದರಂತೆ ರಾಜ್ಯ ಸರ್ಕಾರಿ ನೌಕರರ ಮುಖ್ಯವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಹಾಗೂ ಪಿಂಚಣಿಯನ್ನು ದಿನಾಂಕ: 01.07.2022 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಆದೇಶ ಹೊರಡಿಸಲಾಗಿರುತ್ತದೆ. ಈ ಆದೇಶದ ಕಂಡಿಕೆ (8) ರಲ್ಲಿ ಅನ್ವಯಿಸುವ ಬದಲಾವಣೆಗಳೊಂದಿಗೆ ಈ ಮೇಲಿನ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಭೋದಕೇತರ ಸಿಬ್ಬಂದಿಗಳಿಗೂ ಸಹಾ ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ದಿನಾಂಕ: 17.08.2024ರ ಅಧಿಸೂಚನೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2024ನ್ನು ರಚಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (4) ರಲ್ಲಿ ಓದಲಾದ ದಿನಾಂಕ: 23.08.2024ರ ಆದೇಶದಲ್ಲಿನ ಕಂಡಿಕೆ 11.1 ರಲ್ಲಿ ಪರಿಷ್ಕೃತ ವೇತನ ಶ್ರೇಣಿಗಳ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಭೋದಕೇತರ ಸಿಬ್ಬಂದಿಗಳಿಗೂ ಸಹಾ ವಿಸ್ತರಿಸಲಾಗಿರುತ್ತದೆ. ಈ ಕುರಿತಂತೆ ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಪ್ರತ್ಯೇಕವಾಗಿ ಹೊರಡಿಸುತ್ತವೆ ಎಂದು ತಿಳಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (5) ರಲ್ಲಿ ಓದಲಾದ ದಿನಾಂಕ: 02.09.2024ರ ಪತ್ರದಲ್ಲಿ ಜಂಟಿ ನಿರ್ದೇಶಕರು (ಹಣಕಾಸು), ಪೌರಾಡಳಿತ ನಿರ್ದೇಶನಾಲಯ ರವರು, ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಆಇ 21 ಎಸ್‌ಆರ್‌ಪಿ 2024, ದಿನಾಂಕ: 22.07.2024 ರ ಆದೇಶದಲ್ಲಿ, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನನ್ವಯ ಪರಿಷ್ಕೃತ ವೇತನ ಶ್ರೇಣಿಗಳನ್ನು ಅಂಗೀಕರಿಸಿ, ಕಂಡಿಕೆ (8) ರಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳಿಗೆ ಈ ಸೌಲಭ್ಯವನ್ನು ಯಥಾವತ್ತಾಗಿ ವಿಸ್ತರಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ .

 

Good news for 'Municipal Corporation employees': State govt orders implementation of 7th Pay Commission ರಾಜ್ಯದ ‘ಮಹಾನಗರ ಪಾಲಿಕೆಯ ನೌಕರರಿಗೆ' ಶುಭಸುದ್ದಿ : ‘7ನೇ ವೇತನ’ ಆಯೋಗ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ
Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

2 Mins Read

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

1 Min Read

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

1 Min Read
Recent News

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

ನೈಸರ್ಗಿಕ ಪೋಷಕಾಂಶಗಳ ಗಣಿ: ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗುವ 7 ಲಾಭಗಳು

State News
KARNATAKA

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ಭೀಕರ ದಂಧೆಯೊಂದು ಬಯಲಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ನಕಲಿ…

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.