ಬೆಂಗಳೂರು: ನಮ್ಮ ಮೆಟ್ರೋ ( Namma Metro ) ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಈವರೆಗೆ ಐದು ನಿಮಿಷಕ್ಕೆ ಒಂದು ಸಂಚರಿಸುತ್ತಿದ್ದಂತ ನಮ್ಮ ಮೆಟ್ರೋ ರೈಲುಗಳು, ಮೆಜೆಸ್ಟಿಕ್ ಹಾಗೂ ವೈಟ್ ಫೀಲ್ಡ್ ನಡುವೆ ಇನ್ಮುಂದೆ 3 ನಿಮಿಷಕ್ಕೆ ಒಂದರಂತೆ ಸಂಚರಿಸಲಿದ್ದಾವೆ.
ಈ ಕುರಿತಂತೆ ಬಿಎಂಆರ್ ಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 25.02.2024 ರಿಂದ ಬೆಳಗಿನ ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ -ಮೆಜೆಸ್ಟಿಕ್ ಮತ್ತು ಗರುಡಾಚಾರ್ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ರೈಲು ಸೇವೆಗಳನ್ನು ಒದಗಿಸಲಾಗುತ್ತದೆ ಎಂದಿದೆ.
ಇದು ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಪಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಲಿದೆ. ಈ ಮಾರ್ಗದಲ್ಲಿ ಬೆಳಿಗೆ 8.45 ರಿಂದ 10.20 ಗಂಟೆಯವರೆಗೆ, ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಸೇವೆಗಳು ವಾರದ ಎಲ್ಲಾ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜಾದಿನಗಳನ್ನು ಹೊರತುಪಡಿಸಿ) ಲಭ್ಯವಿರುತ್ತವೆ ಎಂದು ತಿಳಿಸಿದೆ.
ಇದಲ್ಲದೆ, ಭಾರತೀಯ ರೈಲ್ವೆ / ಇಂಟರ್‌ಸಿಟಿ ಬಸ್‌ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪಯಾಣಿಕರ ಅನುಕೂಲಕ್ಕಾಗಿ, ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ-ಮಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 5.00 ಗಂಟೆಗೆ ಪ್ರಾರಂಭವಾಗಲಿದೆ. ಸಾರ್ವಜನಿಕರು ಮೇಲಿನ ಬದಲಾವಣೆಗಳನ್ನು ಗಮನಿಸಿ ಈ ಸೌಲಭ್ಯವನ್ನು ಉಪಯೋಗಿಸುವಂತೆ ಕೋರಿದೆ.
ಬೆಂಗಳೂರು : ಕಾರು ವಿಚಾರವಾಗಿ ಸಹೋದರರ ನಡುವೆ ಗಲಾಟೆ : ಪೆಟ್ರೋಲ್ ಹಾಕಿ ತಮ್ಮನ ಕೊಲೆಗೈದ ಅಣ್ಣ