ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಮದ್ಯದ ದರವನ್ನು ಹೆಚ್ಚಳ ಮಾಡಲಾಗಿತ್ತು. ಹೀಗಾಗಿ ಎಣ್ಣೆ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಲಾಗಿತ್ತು. ಆದರೇ ಇದೀಗ ಇಂದಿನಿಂದಲೇ ಕರ್ನಾಟಕದಲ್ಲಿ ಶೇ.15ರಿಂದ 25ರಷ್ಟು ಮದ್ಯದ ದರ ಇಳಿಕೆ ಮಾಡಲಾಗಿದೆ.
ಅಬಕಾರಿ ತಿದ್ದುಪಡಿ ನಿಯಮಗಳು 2024ಕಕ್ಕೆ ಜೂನ್ ನಲ್ಲಿ ತಿದ್ದುಪಡಿ ನೀಡಲಾಗಿತ್ತು. ಇಂದಿನಿಂದಲೇ ದುಬಾರಿ ಮದ್ಯದ ದರದಲ್ಲಿ ಇಳಿಕೆ ಮಾಡಲಾಗಿದೆ. ರಾಜ್ಯ ಅಬಕಾರಿ ಇಲಾಖೆಯ ಉನ್ನತ ಮೂಲಗಳ ಮಾಹಿತಿಯಂತೆ ಹೊರ ರಾಜ್ಯಗಳಿಗಿಂತ ಭಾರತೀಯ ನಿರ್ಮಿತ ಮದ್ಯದ ಮೇಲಿನ ಅಬಕಾರಿ ಸುಂಕದ ಸ್ಲ್ಯಾಬ್ ಗಳ ಸಂಖ್ಯೆಯನ್ನು 18 ರಿಂದ 16ಕ್ಕೆ ಇಳಿಸುವ ಸಾಧ್ಯತೆ ಇದೆ. ಈ ಮೂಲಕ ಕರ್ನಾಟಕದಲ್ಲಿ ಮದ್ಯದ ದರ ಇಳಿಕೆಯಾಗಲಿದೆ.
ರಾಜ್ಯದಲ್ಲಿ ಈವರೆಗೆ 18 ಫ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಫ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ 449 ರೂ. ಮೊದಲ ಫ್ಲ್ಯಾಬ್‌ನಲ್ಲಿದ್ದರೆ, 15,001 ರೂ.ನಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಫ್ಲ್ಯಾಬ್‌ನಲ್ಲಿಡಲಾಗಿತ್ತು.
ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂ. ಹೊಂದಿರುವ ಮದ್ಯ ಮೊದಲ ಫ್ಲ್ಯಾಬ್‌ನಲ್ಲಿದ್ದರೆ, 20,001 ರೂ. ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಫ್ಲ್ಯಾಬ್‌ಗೆ ಸೇರಿಸಲಾಗಿದೆ.