ಬೆಂಗಳೂರು: ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ನಿಗಮ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಚಾಲಕರನ್ನು ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದೆ.
BIG NEWS : ತಡರಾತ್ರಿ ಜಾಗತಿಕವಾಗಿ `Whats App’ ಸ್ಥಗಿತ : ಬಳಕೆದಾರರ ಪರದಾಟ
ಹೌದು ಕೆಎಸ್ಸಾರ್ಟಿಸಿ ಬಸ್ ಅಪಘಾತಕ್ಕೆ ಚಾಲಕರ ಮೇಲಿನ ಕಾರ್ಯದೊತ್ತಡವೂ ಕಾರಣ ಎಂದು ಮನಗಂಡಿರುವ ನಿಗಮದ ಆಡಳಿತ ಮಂಡಳಿ, ಅದಕ್ಕಾಗಿ ಚಾಲಕರನ್ನು ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದೆ.
ಬರ ಪರಿಹಾರಕ್ಕಾಗಿ ದಕ್ಷಿಣ ರಾಜ್ಯಗಳ ಕಾನೂನು ಸಮರ : ಕರ್ನಾಟಕ ನಂತರ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ
ಕೆಎಸ್ಸಾರ್ಟಿಸಿ ಬಸ್ಗಳಿಂದ ಉಂಟಾಗಿರುವ ಅಪಘಾತ ಪ್ರಕರಣ ವಿಶ್ಲೇಷಣಾ ಸಭೆಯಲ್ಲಿ ಚಾಲಕರ ಮೇಲಾಗುತ್ತಿರುವ ಕಾರ್ಯದೊತ್ತಡದ ಕುರಿತು ಚರ್ಚಿಸಲಾಗಿದೆ. ಈ ವೇಳೆ ಚಾಲಕರಿಗೆ ವಿಶ್ರಾಂತಿ ಇಲ್ಲದೆ ಮೇಲಿಂದಮೇಲೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಚಾಲಕರಿಗೆ ಸುಸ್ತಾಗುತ್ತಿದ್ದು, ಅದು ಅಪಘಾತಗಳಿಗೆ ಕಾರಣವಾಗುತ್ತಿದೆ.ಹೀಗಾಗಿ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಲ್ಲಿ ಇರುವಂತೆ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.