ಬೆಂಗಳೂರು: ಕೆಎಎಸ್ ಹುದ್ದೆ ( KAS Jobs ) ಆಕಾಂಕ್ಷಿಗಳಿಗೆ ಸಿಹಿಸುದ್ದಿ ಎನ್ನುವಂತೆ ರಾಜ್ಯ ಸರ್ಕಾರದಿಂದ ( Karnataka Government ) 384 ಹುದ್ದೆಗಳ ನೇಮಕಾತಿಗೆ ( KAS Recruitment ) ಚಾಲನೆ ನೀಡಲಾಗಿದೆ. ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್-ಬಿ ವೃಂದದ 384 ಕೆಎಎಸ್ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅಲ್ಲದೇ ಇಲಾಖಾ ವಾರು ಹುದ್ದೆಗಳ ಸಂಖ್ಯೆಯನ್ನು ಶುಕ್ರವಾರದಂದು ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ಮಾಹಿತಿಯಂತೆ ಗ್ರೂಪ್-ಎಯಲ್ಲಿ 159 ಹುದ್ದೆಗಳು ಹಾಗೂ ಗ್ರೂಪ್-ಬಿಯಲ್ಲಿ 225 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಕೆಪಿಎಸ್ಸಿ ಕಾರ್ಯದರ್ಶಿಗೆ ಪತ್ರವನ್ನು ಬರೆದಿರುವ ಡಿಎಪಿಆರ್ ಕಾರ್ಯದರ್ಶಿಗಳು 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಿಯಮಗಳು-1993ರ ಅನುಸಾರ ಜಾರಿಯಲ್ಲಿರುವ ನಿಯಮಗಳಂತೆ ಷರತ್ತುಗಳನ್ನು ಅಳವಡಿಸಿಕೊಂಡು ನೇಕಾತಿ ಪ್ರಕ್ರಿಯೆ ನಡೆಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಕಂದಾಯ ಇಲಾಖೆಯಲ್ಲಿ 41 ತಹಶೀಲ್ದಾರ್ ಹುದ್ದೆಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳ 50 ಹುದ್ದೆ, ಆರ್ಥಿ ಇಲಾಖೆಯಲ್ಲಿ ಸಹಾಯಕ ಖಜಾನೆ ಅಧಿಕಾರಿ, ವಾಣಿಜ್ಯ ಇಲಾಖೆಯ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಯ ಒಟ್ಟು 384 ಕೆಎಎಸ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರ ಬೀಳಲಿದೆ.