Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತೀಯ ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಉರಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ, ಪಾಕ್ ಉಗ್ರನ ಹತ್ಯೆ!

15/03/2026 12:36 PM

ಇರಾನ್-ಇಸ್ರೇಲ್ ಸಂಘರ್ಷದ ಬಿಸಿ: ದುಬೈ, ಅಬುಧಾಬಿ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ!

15/03/2026 12:33 PM

ALERT : ಅಪ್ಪಿ ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ !

15/03/2026 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅತಿಥಿ ಉಪನ್ಯಾಸಕರು, ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
KARNATAKA

JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅತಿಥಿ ಉಪನ್ಯಾಸಕರು, ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By kannadanewsnow0907/05/2025 3:56 PM

ಬೆಂಗಳೂರು: 2025-26ನೇ ಸಾಲಿನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಉಪನ್ಯಾಸಕರು, ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರು, ಶಿಕ್ಷಕರ ನೇಮಕಕ್ಕೆ ಆದೇಶಿಸಿದೆ.

2025-2026 ನೇ ಶೈಕ್ಷಣಿಕ ಸಾಲಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ/ಬಡ್ತಿ/ವರ್ಗಾವಣೆ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಮತ್ತು ಮೌಲಾನಾ ಆಜಾದ್ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರು ಹಾಗೂ ಡಾ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಅವಶ್ಯಕವಿರುತ್ತದೆ.

ಸದರಿ ಅಂಶಗಳ ಹಿನ್ನೆಲೆಯಲ್ಲಿ ಖಾಲಿ ಇರುವ ಉಪನ್ಯಾಸಕರು/ಶಿಕ್ಷಕರನ್ನು ಹುದ್ದೆಗಳಿಗೆ ಎದುರಾಗಿ ಈ ಕೆಳಕಂಡ ಷರತ್ತು ಮತ್ತು ಮಾರ್ಗಸೂಚಿಗಳಂತೆ ಅತಿಥಿ ಶಿಕ್ಷಕರನ್ನು ಜಿಲ್ಲಾ ಅಧಿಕಾರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇವರ ಹಂತದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.
ಮಾರ್ಗಸೂಚಿಗಳು:-

1) ರಾಜ್ಯಾದ್ಯಂತ ಜಿಲ್ಲಾ ಹಂತದಲ್ಲಿ ಈ ಕೆಳಕಂಡ ವೇಳಾಪಟ್ಟಿಯಂತೆ ಅರ್ಜಿಗಳನ್ನು ಆಹ್ವಾನಿಸುವುದು.

ಅರ್ಜಿ ಸಲ್ಲಿಕೆಯು ದಿನಾಂಕ 08-05-2025ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಕಂ 19-05-2025 ಆಗಿರುತ್ತದೆ. ಅರ್ಜಿಯನ್ನು https://dom.karnataka.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಇಲ್ಲವೇ ಸಂಬಂಧಪಟ್ಟ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಭೇಟಿ ನೀಡಿಯೂ ಪಡೆಯಬಹುದಾಗಿದೆ.

ಭರ್ತಿ ಮಾಡಿದಂತ ಅರ್ಜಿಗಳನ್ನು ದಿನಾಂಕ 19-05-2025ರ ಒಳಗಾಗಿ ಜಿಲ್ಲಾ ಕಚೇರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ತಿಳಿಸಿದೆ.

2) ಜಿಲ್ಲಾ ಅಧಿಕಾರಿಗಳು ಕೂಡಲೇ ಜಿಲ್ಲೆಯಲ್ಲಿ ಮೇಲ್ಕಂಡ ವೇಳಾಪಟ್ಟಿಯಂತೆ ಖಾಲಿ ಇರುವ ಅತಿಥಿ ಉಪನ್ಯಾಸಕರು/ಶಿಕ್ಷಕರ ಹುದ್ದೆಗಳ ಮಾಹಿತಿ, ಮತ್ತು ವಿದ್ಯಾರ್ಹತೆಗಳ ವಿವರದೊಂದಿಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
3) ಖಾಲಿ ಇರುವ ಮಂಜೂರಾದ ಹುದ್ದೆಗಳಿಗೆ ಮಾತ್ರ ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ನೇಮಕಾತಿ ಮಾಡಲು ಕ್ರಮ ವಹಿಸುವುದು.
4) ಅತಿಥಿ ಉಪನ್ಯಾಸಕರು/ಶಿಕ್ಷಕರ ಆಯ್ಕೆ ವಿಧಾನ.
ಸದರಿ ಅತಿಥಿ ಉಪನ್ಯಾಸಕರು/ಶಿಕ್ಷಕರ ಆಯ್ಕೆ ವಿಧಾನದ ಬಗ್ಗೆ ಪ್ರತ್ಯೇಕವಾಗಿ ಮಾರ್ಗಸೂಚಿಯನ್ನು ಶೀಘ್ರದಲ್ಲಿ ನೀಡಲಾಗುವುದು.
5) ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ಪ್ರಮುಖವಾಗಿ ಆದ್ಯತೆ ಮೇರೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಖಾಲಿ ಹುದ್ದೆಗಳಿಗೆ ಹಾಗೂ ಶಿಕ್ಷಕರ ರಹಿತ ಶಾಲೆಗಳಿಗೆ/ಹೆಚ್ಚು ವಿದ್ಯಾರ್ಥಿಗಳಿರುವ ಮೊದಲ ಆದ್ಯತೆ ನೀಡುವುದು.
6) ರಾಜ್ಯದಲ್ಲಿರುವ ಡಾ ಎ.ಪಿ.ಜೆ ಅಬ್ದುಲ್‌ ಕಲಾಂ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಮೌಲಾನಾ ಆಜಾದ್‌ ಮಾದರಿ ಶಾಲೆಗಳಲ್ಲಿ ಶೇಕಡ 100% ರಷ್ಟು ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ಆದ್ಯತೆ ಮೇರೆಗೆ ನೇಮಕಾತಿ ಮಾಡುವುದು. 7) ನೇಮಕಗೊಂಡ ಅತಿಥಿ ಉಪನ್ಯಾಸಕರು/ಶಿಕ್ಷಕರು ಕನಿಷ್ಟ ರೂ.100/- ಛಾಪಾ ಕಾಗದದಲ್ಲಿ ಸರ್ಕಾರದ ಆದೇಶಾನುಸಾರ ಕರ್ತವ್ಯ ನಿರ್ವಹಿಸುವ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವುದು.
8) ಅತಿಥಿ ಉಪನ್ಯಾಸಕರು/ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು. 9) ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗೆ ವರ್ಗಾವಣೆ/ನೇಮಕಾತಿ ಮುಖಾಂತರ ಖಾಯಂ ಉಪನ್ಯಾಸಕರು/ಶಿಕ್ಷಕರು ಸ್ಥಳ ನಿಯುಕ್ತಿಗೊಂಡಲ್ಲಿ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವುದು.
10)ಅತಿಥಿ ಉಪನ್ಯಾಸಕರು/ಶಿಕ್ಷಕರನ್ನು ಪ್ರಸ್ತುತ ಸರ್ಕಾರದ ಆದೇಶದಂತೆ ನಿಗದಿಪಡಿಸಿರುವ ಗೌರವ ಸಂಭಾವನೆಯನ್ನು ಪಾವತಿಸುವುದು.
11) ಇಲಾಖೆಯ ಪ್ರಸ್ತುತ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಮತ್ತು ಕಾರ್ಯಕಾರಿ ಆದೇಶಗಳಲ್ಲಿ ವಿಷಯವಾರು ನಮೂದಿಸಿರುವ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು (ಸಿ&ಆರ್ ಮತ್ತು ಕಾರ್ಯಕಾರಿ ಆದೇಶ ಪತಿಗಳನ್ನು ಲಗತ್ತಿಸಿದೆ).
ಮೇಲ್ಕಂಡ ವಿಷಯದಲ್ಲಿ ಯಾವುದೇ ಲೋಪದೋಷಗಳಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು.

BREAKING: ಪಾಕ್ ಉಗ್ರರ ಶಿಬಿರಗಳ ಮೇಲಿನ ದಾಳಿಯ ವೀಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ: ಇಲ್ಲಿದೆ ವೀಡಿಯೋ | Operation Sindoor

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತುಟ್ಟಿಭತ್ಯೆ ಶೇ.10.75ರಿಂದ 12.25ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ | DA Hike Dearness Allowance

Share. Facebook Twitter LinkedIn WhatsApp Email

Related Posts

ಏನೂ ತಿನ್ನದಿದ್ದರೂ ಶುಗರ್ ಮಟ್ಟ ಏರುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !

15/03/2026 12:22 PM2 Mins Read

BREAKING : ಇಂದು ಬಾಗಲಕೋಟೆ, ದಾವಣಗೆರೆ ಉಪಚುನಾವಣೆಗು ದಿನಾಂಕ ಘೋಷಣೆ ಸಾಧ್ಯತೆ!

15/03/2026 12:09 PM1 Min Read

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

15/03/2026 11:59 AM2 Mins Read
Recent News

ಭಾರತೀಯ ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಉರಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ, ಪಾಕ್ ಉಗ್ರನ ಹತ್ಯೆ!

15/03/2026 12:36 PM

ಇರಾನ್-ಇಸ್ರೇಲ್ ಸಂಘರ್ಷದ ಬಿಸಿ: ದುಬೈ, ಅಬುಧಾಬಿ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ!

15/03/2026 12:33 PM

ALERT : ಅಪ್ಪಿ ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಬೇಡಿ !

15/03/2026 12:31 PM

ಏನೂ ತಿನ್ನದಿದ್ದರೂ ಶುಗರ್ ಮಟ್ಟ ಏರುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !

15/03/2026 12:22 PM
State News
KARNATAKA

ಏನೂ ತಿನ್ನದಿದ್ದರೂ ಶುಗರ್ ಮಟ್ಟ ಏರುತ್ತಿದೆಯೇ? ಈ 4 ತಪ್ಪುಗಳೇ ಅದಕ್ಕೆ ಕಾರಣ !

By kannadanewsnow5715/03/2026 12:22 PM KARNATAKA 2 Mins Read

ಮಧುಮೇಹ ಅಥವಾ ಶುಗರ್ ಎಂದರೆ ಕೇವಲ ಸಿಹಿ ತಿಂದರೆ ಮಾತ್ರ ಹೆಚ್ಚಾಗುತ್ತದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ, ಕೆಲವೊಮ್ಮೆ ನಾವು…

BREAKING : ಇಂದು ಬಾಗಲಕೋಟೆ, ದಾವಣಗೆರೆ ಉಪಚುನಾವಣೆಗು ದಿನಾಂಕ ಘೋಷಣೆ ಸಾಧ್ಯತೆ!

15/03/2026 12:09 PM

ಕೆಲಸ ಸಿಕ್ಕಿಲ್ಲ ಎಂದು ಚಿಂತಿಸಬೇಡಿ : 1 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು4 ಲಕ್ಷ ರೂ.ವರೆಗೆ ಆದಾಯ ಗಳಿಸಿ

15/03/2026 11:59 AM

ಮೈಶುಗರ್ ಭ್ರಷ್ಟಾಚಾರ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ : ಶಾಸಕ ಗಣಿಗ ರವಿಕುಮಾರ್ ಹೇಳಿಕೆ

15/03/2026 11:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.