ಬೆಂಗಳೂರು: ಐಟಿ, ಬಿಟಿ ಕಾರಿಡಾರ್ನತ್ತ ಮೆಟ್ರೋ ಸಂಚಾರ ಸಂಚಾರಕ್ಕೆ ಮುಖಮಾಡುತ್ತಿದೆ. ಈ ಬೆನ್ನಲ್ಲೇ ಬಿಎಂಟಿಸಿಗೆ ಹೊಸ ಟೆಂಕ್ಷನ್ ಶುರುವಾಗಿದೆ. ವೈಟ್ಫೀಲ್ಡ್ ಮೆಟ್ರೋ ಸಂಚಾರ ಶುರುವಾದ ನಂತರ ಹೆಚ್ಚಿನ ಜನರು ವೋಲ್ವೋ ಬಸ್ಗಳನ್ನು ಬಿಟ್ಟು ಮೆಟ್ರೋಗಳ ಕಡೆಗೆ ಮುಖ ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗುವ ಸಾಧ್ಯತೆಯಿದೆ ಹಾಗಾಗಿ ವೋಲ್ವೋ ಬಸ್ ಸಂಚಾರಕ್ಕೆ ಎಫೆಕ್ಟ್ ತಟ್ಟುವಂತಾಗಿದೆ
ಬೆಂಗಳೂರಿನ ರಸ್ತೆಗಳಲ್ಲಿ ರಾಜನಂತೆ ಮೆರೆದಾಡಿದ ವೋಲ್ವೋ ಬಸ್ಗಳು ಈಗ ಮೂಲೆ ಸೇರಿವೆ. ಅಳಿದುಳಿದ ಬಸ್ಗಳೂ ಐಟಿ, ಬಿಟಿ ಮಂದಿಯನ್ನು ನಂಬಿ ರಸ್ತೆಗಿಳಿಯುತ್ತಿವೆ. ಆದರೆ ಇದೀಗ ಈ ಐಟಿ ಮಂದಿಯೂ ಮೆಟ್ರೋ ದತ್ತ ಮುಖಮಾಡೋದು ಖಚಿತವಾಗ್ತಿದ್ದಂತೆ, ಬಿಎಂಟಿಸಿಗೆ ಹೊಸ ಟೆಂಕ್ಷನ್ ಶುರುವಾಗಿದೆ.
ಸದ್ಯ ಬಿಎಂಟಿಸಿ ಬಳಿ 750 ಐಷಾರಾಮಿ ವೋಲ್ವೋ ಬಸ್ಗಳಿವೆ. ಇವುಗಳ ಪೈಕಿ ರಸ್ತೆಗಿಳಿಯುತ್ತಿರೋದು ಕೇವಲ 250 ಮಾತ್ರ. ಈ 250 ಬಸ್ಗಳು ಓಡ್ತಿರೋದು ಐಟಿ ಬಿಟಿ ಕಾರಿಡಾರ್ನಲ್ಲಿ. ಆದರೆ ಇದೀಗ ಈ ಐಟಿ, ಬಿಟಿ ಕಾರಿಡಾರ್ನತ್ತ ಮೆಟ್ರೋ ಮುಖಮಾಡುತ್ತಿದೆ. ಈಗಾಗಲೇ ವೈಟ್ಫೀಲ್ಡ್ ಮಾರ್ಗದಲ್ಲಿ ಟ್ರಯಲ್ ರನ್ ಆರಂಭಿಸಿರುವ ಮೆಟ್ರೋ ಮುಂದಿನ ವರ್ಷಾರಂಭದಲ್ಲೇ ವಾಣಿಜ್ಯ ಸಂಚಾರವನ್ನೂ ಆರಂಭಿಸುವ ಉತ್ಸಾಹದಲ್ಲಿದೆ. ಹೀಗಾಗಿ ಬಿಎಂಟಿಸಿಗೆ ಹೊಸ ಬಗೆಯ ಟೆಂಕ್ಷನ್ ಶುರುವಾಗಿದೆ.
ಈ ಹಿಂದೆ ಬಿಎಂಟಿಸಿ ಪ್ರತಿನಿತ್ಯ ಸರಿ ಸುಮಾರು 50 ಲಕ್ಷದವರೆಗೂ ಪ್ರಯಾಣಿಕರನ್ನ ಹೊಂದಿತ್ತು. ಆದರೆ ಕೋವಿಡ್ ಬಳಿಕ ಈ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ಕೇವಲ 30 ರಿಂದ 35 ಲಕ್ಷಕ್ಕೆ ಬಂದು ನಿಂತಿದೆ. ಇನ್ನೊಂದ್ಕಡೆಯಲ್ಲಿ ಮೆಟ್ರೋ ವಿಸ್ತರಣೆ ಆಗ್ತಿರೋದು ಸಹ ಬಿಎಂಟಿಸಿಗೆ ದೊಡ್ಡ ಹೊಡೆತ ಕೊಡುತ್ತಲೇ ಬಂದಿದೆ.