ಬೆಂಗಳೂರು : ಇಂದಿನಿಂದ 17ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದ್ದು ಇಂದು ಚೆನ್ನೈ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ ಕೆಲವು ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ.
BREAKING: ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸಗೌಡಗೆ 4 ದಿನ ಪೊಲೀಸ್ ಕಷ್ಟಡಿಗೆ
ಇದೀಗ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಕರಿಗೆ ಅನುಕೂಲವಾಗಲೆಂದು ಮೆಟ್ರೋ ಸೇವೆ ಅವಧಿಯನ್ನು ಬಿಎಮ್ಆರ್ಸಿಎಲ್ ವಿಸ್ತರಿಸಿದೆ ಎಂದು ತಿಳಿದುಬಂದಿದೆ.ಐಪಿಎಲ್ ಪಂದ್ಯಾವಳಿ ವೀಕ್ಷಕರಿಗಾಗಿ ನಮ್ಮ ಮೆಟ್ರೋ ಅವಧಿ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 24, 29 ಏಪ್ರಿಲ್ 02 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು ನಮ್ಮ ಮೆಟ್ರೋ ಸೇವೆ ರಾತ್ರಿ 11:30ವರೆಗೆ ಬಿಎಮ್ಆರ್‌ಸಿಎಲ್ ಸೇವೆಯನ್ನು ವಿಸ್ತರಿಸಿದೆ.
ಐಪಿಎಲ್ ಪಂದ್ಯ ನಡೆಯುವ ದಿನ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11:30 ಗಂಟೆಯವರೆಗೂ ಮೆಟ್ರೋ ಸೇವೆ ಇರಲಿದೆ ಐಪಿಎಲ್ ಪಂದ್ಯ ವೀಕ್ಷಣೆ ಮಾಡಲು ವಿವಿಧ ಭಾಗಗಳಿಂದ ಬರುವ ಕ್ರಿಕೆಟ್ ಪ್ರಿಯರಿಗೆ ಇದೀಗ ಬಿಎಂಆರ್‌ಸಿಎಲ್ ಅನುಕೂಲ ಮಾಡಿಕೊಟ್ಟಿದೆ.
ಅಲ್ಲದೆ ಬಿಡದಿ ಮ್ಯಾರಥಾನ್ಗಾಗಿ ನಮ್ಮ ಮೆಟ್ರೋ ಮುಂಜಾನೆ 4:00ಗೆ ಆರಂಭವಾಗಲಿದೆ. ಭಾನುವಾರ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಮ್ಯಾರಥಾನ್ ಯೋಜನೆ ಮಾಡಲಾಗಿದೆ. ಬಿಡದಿ ಹಾಫ್ ಮ್ಯಾರಥನಲ್ಲಿ ಭಾಗವಹಿಸುವವರಿಗೆ ಅನುಕೂಲಕ್ಕಾಗಿ 4:00ಗೆ ಮೆಟ್ರೋ ಆರಂಭಗೊಳ್ಳಲಿದೆ ಭಾನುವಾರ ಬೆಳಿಗ್ಗೆ 7ರ ಬದಲು ಮುಂಜಾನೆ 4 ರಿಂದ ಮೆಟ್ರೋ ಸೇವೆ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.