ಬೆಂಗಳೂರು: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್ ಎನ್ನುವಂತೆ, ಬೆಂಗಳೂರಿನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯ ಬಳಿ ಇರುವಂತ ಜಯದೇವ ಹೃದ್ರೋಗ ಆಸ್ಪತ್ರೆ ಇನ್ಮುಂದೆ 24 ಗಂಟೆ ಓಪನ್ ಇರಲಿದೆ.
ಈ ಕುರಿತಂತೆ ಜಯದೇವ ಆಸ್ಪತ್ರೆಯ ನಿರ್ದೇಶಕರಾದಂತ ಡಾ.ಕೆಎಸ್ ರವೀಂದ್ರನಾಥ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿಯಲ್ಲಿನ ಜಯದೇವ ಆಸ್ಪತ್ರೆ 24 ಗಂಟೆಗಳ ಕಾಲ ಓಪನ್ ಇರಲಿದೆ. ಸಂಜೆ 4 ಗಂಟೆಗೆ ಕ್ಲೋಸ್ ಆಗುತ್ತಿದ್ದಂತ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
ದಿನಾಂಕ 01-09-2024ರಿಂದ ಜಾರಿಗೆ ಬರುವಂತೆ ಜಯದೇವ ಸ್ಯಾಟಲೈಟ್ ಸೆಂಟರ್, ಕೆಸಿ ಜನರಲ್ ಆಸ್ಪತ್ರೆ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು ಇದು 24 ಗಂಟೆ ಹೃದ್ರೋಗಿಗಳ ಸೇವೆಗೆ ತೆರೆದಿರಲಿದೆ. ರೋಗಿಗಳು ಈ ಅವಕಾಶವನ್ನು ಉಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಅಂದಹಾಗೇ ಈಗಾಗಲೇ ಬನ್ನೇರುಘಟ್ಟ ರಸ್ತೆಯಲ್ಲಿರುವಂತ ಜಯದೇವ ಹೃದ್ರೋಗ ಆಸ್ಪತ್ರೆ 24 ಗಂಟೆ ತೆರದು ರೋಗಿಗಳಿಗೆ ಸೇವೆ ಒದಗಿಸಲಾಗುತ್ತಿದೆ. ಈಗ ಮಲ್ಲೇಶ್ವರಂನಲ್ಲಿರುವಂತ ಜಯದೇವ ಆಸ್ಪತ್ರೆಯಲ್ಲೂ 24 ಗಂಟೆ ಹೃದ್ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಸಿಗುವಂತಾಗಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಂತೇ ಆಗಿದೆ.
ಸೆ.6 ಗೌರಿ ಹಬ್ಬದಂದೇ ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಅ. 1ರಂದು ಮೋದಿ ಅಂಡ್ ಕಂಪನಿಗೆ ಜಮ್ಮು-ಕಾಶ್ಮೀರದ ಯುವಕರು ನಿರ್ಗಮನ ದ್ವಾರ ತೋರಿಸಲಿದ್ದಾರೆ: ಖರ್ಗೆ