ಬೆಂಗಳೂರು: ರಾಜ್ಯ ಸರ್ಕಾರದಿಂದ ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖಎಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಸ್ರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳಿಗೆ ಗೌರವಧನ ಮತ್ತಿತರ ಸೌಲಭ್ಯವನ್ನು ಮಂಜೂರು ಮಾಡಿ ಆದೇಶಿಸಿದೆ. ಅದರಲ್ಲೂ ಗೌರವಧನವನ್ನು ಸೇವಾ ಹಿರಿತನದ ಆಧಾರದ ಮೇಲೆ ಪರಿಷ್ಕರಿಸಿ ಆದೇಶಿಸಿದೆ.
ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಧನಂಜಯ ನಡವಳಿಯನ್ನು ಹೊರಡಿಸಿದ್ದು, ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಗುಳ ಆರೋಗ್ಯದ ದೃಷ್ಠಿಯಿಂದ ವಾರ್ಷಿಕ 5 ಲಕ್ಷಗಳ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಲು ಮಾಸಿಕ 400 ರೂ ವಂತಿಕೆಯನ್ನು ಅವರಿಂದ ಕಟಾಯಿಸಿ, ಇನ್ನುಳಿದ 400 ರೂ ಸರ್ಕಾರದ ವತಿಯಿಂದ ಭರಿಸಲು ಉದ್ದೇಶಿಸಿದ್ದು, ಹೀಗೆ ಒಟ್ಟು 800 ಗಳನ್ನು ಆರೋಗ್ಯ ವಿಮೆಗೆ ಪಾವತಿಸಲು ಉದ್ದೇಶಿಸಿದೆ ಎಂದಿದ್ದಾರೆ.
ಅತಿಥಿ ಉಪನ್ಯಾಸಕರ ಆರೋಗ್ಯದ ಸಲುವಾಗಿ ವಿಮಾ ಸೌಲಭ್ಯವನ್ನು ಮಂಜೂರು ಮಾಡುವಂತೆ ಹಾಗೂ ಅತಿಥಿ ಉಪನ್ಯಾಸಕರುಗಳಾಗಿ ಸೇವೆ ಸಲ್ಲಿಸಿದ 60 ವರ್ಷ ಮೀರಿದ ನಂತ್ರ ಇವರಿಗೆ ಭದ್ರತಾ ರೂಪದಲ್ಲಿ ವಾರ್ಷಿಕ 50,000 ದಂತೆ ಗರಿಷ್ಠ 5 ಲಕ್ಷಗಳ ಮೊತ್ತವನ್ನು ಇಡಿಗಂಟು ಮೊತ್ತವಾಗಿ ಮಂಜೂರು ಮಾಡುವಂತೆ ಹಾಗೂ ಸದರಿ ಅತಿಥಿ ಉಪನ್ಯಾಸಕರುಗಳಿಗೆ ಅವರುಗಳು ಸಲ್ಲಿಸಿರುವ ಸೇವಾವಧಿಯ ಮೇಲೆ ಗೌರವಧನವನ್ನು ಪ್ರಸ್ತುತ ಇರುವ ಕಾರ್ಯಭಾರಕ್ಕೆ ಅನುಗುಣವಾಗಿ ಈ ಕೆಳಕಂಡಂತೆ ಹೆಚ್ಚಿಸಿ ಮಂಜೂರು ಮಾಡಿರುತ್ತದೆ ಎಂದಿದ್ದಾರೆ.
5 ವರ್ಷಕಿಂತ ಕಡಿಮೆ ಸೇವಾವಧಿ ಸಲ್ಲಿಸಿರುವ ಮತ್ತು ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 5,000 ಗೌರವಧನವನ್ನು ಹೆಚ್ಚಿಸಿ ಒಟ್ಟು 35,000 ಗೌರವಧನವನ್ನು ನೀಡಲು ಆದೇಶಿಸಿದೆ.
5 ವರ್ಷಕಿಂತ ಕಡಿಮೆ ಸೇವಾವಧಿ ಸಲ್ಲಿಸಿರುವ ಮತ್ತು ಯುಜಿಸಿ ನಿಗದಿಪಡಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ ಅತಿಥಿ ಉಪನ್ಯಾಸಕರ ಗೌರವ ಧನವನ್ನು 5,000 ಹೆಚ್ಚಿಸಿದೆ. ರೂ.31,000 ನೀಡಲಾಗುತ್ತದೆ ಎಂದು ತಿಳಿಸಿದೆ.
5 ವರ್ಷದಿಂದ 10 ವರ್ಷಗಳ ಸೇವಾವಧಿ ಸಲ್ಲಿಸಿರುವವರಿಗೆ ಮತ್ತು ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ 6,000 ಗೌರವಧನ ಪರಿಷ್ಕರಿಸಿದ್ದು, 38,000ಕ್ಕೆ ಗೌರವಧನ ಏರಿಕೆಯಾದಂತೆ ಆಗಿದೆ.
5 ವರ್ಷದಿಂದ 10 ವರ್ಷ ಸೇವಾವಧಿಯ ಅತಿಥಿ ಉಪನ್ಯಾಸಕರಿಗೆ ರೂ.7,000, 10 ರಿಂದ 15 ವರ್ಷ ಸೇವಾವಧಿ ಸಲ್ಲಿಸಿದವರಿಗೆ 7,000 ಹಾಗೂ 15 ವರ್ಷ ಮೇಲ್ಪಟ್ಟ ಸೇವಾವಧಿಯ ಅತಿಥಿ ಉಪನ್ಯಾಸಕರಿಗೆ ರೂ.8,000 ಗೌರವಧವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಆದರೇ ಅತಿಥಿ ಉಪನ್ಯಾಸಕರಿಗೆ ಈ ಹಿಂದೆ ನೀಡಲಾಗುತ್ತಿದ್ದ ಗರಿಷ್ಠ 8/10 ಗಂಟೆಗಳ ಬದಲಾಗಿ ಗರಿಷ್ಠ 15/19 ಗಂಟೆಗಳ ಕಾರ್ಯಭಾರವನ್ನು ನೀಡಿ, ಗೌರವಧವನ್ನು ಪರಿಷ್ಕರಿಸಿರುವುದಾಗಿ ತಿಳಿಸಿ, ಸಿಹಿಸುದ್ದಿಯ ಜೊತೆಗೆ ಶಾಕಿಂಗ್ ನ್ಯೂಸ್ ಕೂಡ ಕಾಲೇಜು ಶಿಕ್ಷಣ ಇಲಾಖೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ
ಇನ್ಮುಂದೆ ರಾಜ್ಯದಲ್ಲಿ ‘ಆರ್ಥಿಕವಾಗಿ ದುರ್ಬಲ’ರಾದವರ ವ್ಯಾಜ್ಯಗಳು ‘6 ತಿಂಗಳ ಕಾಲಮಿತಿ’ಯಲ್ಲಿ ಇತ್ಯರ್ಥ
Good News: ‘ಸಕಾಲ’ದಡಿ ಅರ್ಜಿ ಸ್ವೀಕೃತಿಯಿಂದ ‘ಸೇವೆ’ಯವರೆಗೆ ಎಲ್ಲವೂ ‘ಡಿಜಿಟಲೀಕರಣ’ಗೊಳಿಸಿ- ಸಚಿವ ಕೃಷ್ಣ ಬೈರೇಗೌಡ