ಬೆಂಗಳೂರು : ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸಿಗಬೇಕಾಗಬೇಕಾಗಿರುವ ಸಹಾಯಧನವನ್ನು ಏಕೀಕೃತ ದರ ನಗದು ವರ್ಗಾವಣೆ ಮೂಲಕ ನಿರ್ವಹಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲಾ ಫಲಾನುಭವಿ ಯೋಜನೆಗಳು ಮತ್ತು ಸಹಾಯಧನವನ್ನು ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ(DBT) ಮೂಲಕ ನಿರ್ವಹಿಸಲು ಸೂಚಿಸಲಾಗಿರುತ್ತದೆ. ಅದರಂತೆ ಇಲ್ಲಿಯವರೆಗೂ 379 ಯೋಜನೆಗಳನ್ನು ಈ ವೇದಿಕೆಯಲ್ಲಿ ಒಳತರಲಾಗಿದೆ. ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು 2018-2020ನೇ ಸಾಲಿನಲ್ಲಿ ನಡೆಸಿದ ನೇರ ನಗದು ವರ್ಗಾವಣೆ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ವರದಿಯಲ್ಲಿ ಈ ಕೆಳಕಂಡ ನೇರ ನಗದು ವರ್ಗಾವಣೆ ತಂತ್ರಾಂಶದ ಚಟುವಟಿಕೆಗಳಿಗೆ ಕಾಲ ಮಿತಿಯನ್ನು ನಿಗಧಿ ಪಡಿಸಲು ಸೂಚಿಸಿರುತ್ತಾರೆ:
ಸೇವೆಗಳ ಸಕಾಲಿಕ ವಿತರಣೆಯಲ್ಲಿ ವಿಳಂಬವನ್ನು ತಡೆಗಟ್ಟಲು ವಿವಿಧ ಹಂತದಲ್ಲಿ ವಿಲೇವಾರಿ ಮಾಡಲು ವಿಫಲವಾದ/ತಿರಸ್ಕೃತವಾದ ವಹಿವಾಟುಗಳನ್ನು ಪುನಃ ಪಾವತಿಸಲು ಕ್ರಮವಹಿಸಲು; ತಪ್ಪಾದ ಖಾತೆಗಳಿಗೆ ಜಮೆಯಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು; ಅದರಂತೆ, ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ(DBT) ಮೂಲಕ ಫಲಾನುಭವಿ ಯೋಜನೆಗಳು ಮತ್ತು ಸಹಾಯಧನವನ್ನು ಸರ್ಕಾರದ ವಿವಿಧ ಇಲಾಖೆಗಳು ಈ ಕೆಳಕಂಡ ಕಾಲಮಿತಿಯಲ್ಲಿ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಸೂಚಿಸಿದೆ.
ಮುಂದುವರೆದು, ಸದರಿ ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯಲ್ಲಿ ಡಿಬಿಟಿ ವೇದಿಕೆಯಲ್ಲಿ ಬಹಳಷ್ಟು ಪರೀಕ್ಷಾ ತನಿಖೆ ನಡೆಸಿದ ಯೋಜನೆಗಳಲ್ಲಿ ತಿರಸ್ಕೃತ ವಹಿವಾಟುಗಳು ಶೇಕಡಾ 2ರಿಂದ 42 ರ ವ್ಯಾಪ್ತಿಯಲ್ಲಿ ಇರುವುದ್ದಾಗಿ ಸೂಚಿಸಿರುತ್ತಾರೆ. ಡಿಬಿಟಿ ವೇದಿಕೆಯಲ್ಲಿ Authoriser loginನಲ್ಲಿ ವಹಿವಾಟುಗಳನ್ನು ತಿರಸ್ಕರಿಸಲು ಅವಕಾಶ ಕಲ್ಪಿಸಲಾಗಿದೆ. Authoriser login ನಿರ್ವಹಿಸುವ ಅಧಿಕಾರಿಗಳು ವಹಿವಾಟುಗಳನ್ನು ತಿರಸ್ಕರಿಸುವಾಗ ಹೆಚ್ಚಿನ ನಿಗಾವಹಿಸಿ ಪರಿಶೀಲಿಸಿ * ತಿರಸ್ಕರಿಸಲು ಸೂಚಿಸಲಾಗಿದೆ.
ಡಿಬಿಟಿ ವೇದಿಕೆಯಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆಯನ್ನು ಬಳಸಿ ಹಣವನ್ನು ಪಾವತಿಸಲಾಗುವುದು. ಪಾವತಿಯ ನಂತರ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು NPCI ಮೂಲಕ ಒದಗಿಸಲಾಗುವುದು. ಈ ವಿವರಗಳನ್ನು ಡಿಬಿಟಿ ವೇದಿಕೆಯಲ್ಲಿ “After Payment Name Match Report” ಎಂಬ ವರದಿಯಲ್ಲಿ ಒದಗಿಸಲಾಗಿದೆ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ಇಲಾಖೆಯ IT ತಂತ್ರಾಂಶಕ್ಕೆ ಸಹ ಒದಗಿಸಲಾಗಿದೆ. ಈ ವರದಿಯನ್ನು ಬಳಸಿ ಇಲಾಖಾಧಿಕಾರಿಗಳು ಪಾವತಿಯು ಫಲಾನುಭವಿಯ ಖಾತೆಗೆ ಜಮೆಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಆದರೆ, ಕೆಲವು ಇಲಾಖೆಗಳು ಈ ವರದಿಯನ್ನು/ ಮಾಹಿತಿಯನ್ನು ಪರಿಶೀಲಿಸದೇ ಇರುವುದು ಕಂಡುಬಂದಿದೆ. ಆದ್ದುದರಿಂದ, ಈ ಕೆಳಕಂಡಂತೆ ಇಲಾಖಾಧಿಕಾರಿಗಳು ಪಾವತಿಗಳನ್ನು ಪರಿಶೀಲಿಸುವಂತೆ ಸೂಚಿಸಿದೆ.