ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆಗೆ ( Teacher Transfer ) ಇದೀಗ, ಸರ್ಕಾರದಿಂದ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನಾಳೆಯಿಂದ ಫೆ.28ರವರೆಗೆ ಎರಡು ತಿಂಗಳು ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ.
ಈ ಸಂಬಂಧ ವರ್ಗಾವಣೆ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ. ಶಾಲಾ ಶೈಕ್ಷಣಿಕ ಚಟುವಟಿಕೆ ಆರಂಭಕ್ಕೂ ಮುನ್ನವೇ, ಇದೀಗ ವರ್ಗಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿರುವಂತ ಶಿಕ್ಷಣ ಇಲಾಖೆಯ, ಮುಂದಿನ ಶೈಕ್ಷಣಿಕ ವರ್ಷಕ್ಕೂ ಮುನ್ನವೇ ವರ್ಗಾವಣೆ ಮುಕ್ತಾಯಗೊಳಿಸುವಂತ ಉದ್ದೇಶವನ್ನು ಹೊಂದಲಾಗಿದೆ.
ಅಂದಹಾಗೇ ನಾಳೆಯಿಂದ ವರ್ಗಾವರ್ಗೀ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವೃಂದಕ್ಕೆ ಡಿ.20ರಂದು ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳನ್ನು ಡಿ.30ರೊಳಗೆ ಸಲ್ಲಿಸಲು ತಿಳಿಸಿದೆ. ಡಿ.31ರೊಳಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಕ್ಷೇಪಣೆ ಅಂಗೀಕಾರ, ತಿರಸ್ಕಾರದ ನಿರ್ಣಯ ಪ್ರಕಟಿಸಲು ತಿಳಿಸಲಾಗಿದೆ.
ಇನ್ನೂ ಜನವರಿ 2ರೊಳಗಾಗಿ ಹೆಚ್ಚುವರಿ ಶಿಕ್ಷಕರ ಪಟ್ಟಿ ಅಂಗೀಕಾರ ಅಥವಾ ತಿರಸ್ಕಾರವನ್ನು ಪ್ರಕಟಿಸುವುದು, ಶಿಕ್ಷಕರ ಸಮಸ್ಯೆಗಳಿದ್ದರೇ ಜ 2ರೊಳಗೆ ಕುಂದು ಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಿ, ಇತ್ಯರ್ಥಪಡಿಸಿಕೊಳ್ಳಬೇಕು. ಈ ಅಹವಾಲುಗಳನ್ನು ಜ.5ರೊಳಗೆ ಪರಿಶೀಲಿಸಿ ಅಂತಿಮಗೊಳಿಸಬೇಕು. ಜನವರಿ 6 ಮತ್ತು 7ರಂದು ವರ್ಗಾವಣೆ ತಂತ್ರಾಂಶದ ಮೂಲಕ ಆದ್ಯತೆ ಕೋರಿ ಸಲ್ಲಿಕೆಯಾಗಿರುವಂತ ಅರ್ಜಿ, ದಾಖಲೆಗಳನ್ನು ಅಪ್ ಲೋಡ್ ಮಾಡುವಂತೆ ತಿಳಿಸಲಾಗಿದೆ.
‘SSLC ಪಾಸ್ ವಿದ್ಯಾರ್ಥಿ’ಗಳಿಗೆ ಗುಡ್ ನ್ಯೂಸ್: ಡಿ.28ರಂದು ಶಿವಮೊಗ್ಗದಲ್ಲಿ ‘ಉದ್ಯೋಗ ಮೇಳ’
Health Tips: ಊಟದ ನಂತರ ಹೊಟ್ಟೆ ಉಬ್ಬುತ್ತಿದೆಯೇ? ನಿರ್ಲಕ್ಷಿಸಬೇಡಿ, ಈ ರೋಗದ ಲಕ್ಷಣವಿರಬಹುದು ಪರೀಕ್ಷಿಸಿಕೊಳ್ಳಿ