Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಬಹುಮುಖ್ಯ: ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಚ್‌.ಎಸ್‌.ರಾಘವೇಂದ್ರ ಸಲಹೆ

03/05/2026 2:32 PM
reduce-refrigerator-electricity-bill-kannada-tips

ಫ್ರಿಡ್ಜ್ ನಲ್ಲಿ ಈ ಬಟನ್ ಒತ್ತಿದರೆ ಸಾಕು ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

03/05/2026 1:50 PM

SHOCKING : ರಾಜ್ಯದಲ್ಲಿ ಘೋರ ಕೃತ್ಯ : ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ, ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ!

03/05/2026 1:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ/ಅನುದಾನಿತ ಶಾಲೆಗಳಿಗೆ ಗುಡ್‌ ನ್ಯೂಸ್‌ : ಹೊಸ ಅಡುಗೆ ಪಾತ್ರೆ-ಪರಿಕರಗಳ ಖರೀದಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
KARNATAKA

ರಾಜ್ಯದ ಸರ್ಕಾರಿ/ಅನುದಾನಿತ ಶಾಲೆಗಳಿಗೆ ಗುಡ್‌ ನ್ಯೂಸ್‌ : ಹೊಸ ಅಡುಗೆ ಪಾತ್ರೆ-ಪರಿಕರಗಳ ಖರೀದಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ

By kannadanewsnow5716/06/2024 6:32 AM
vidhana soudha
vidhana soudha

ಬೆಂಗಳೂರು : 2023-24ನೇ ಸಾಲಿನ ಪಿ.ಎಂ. ಪೋಷಣ್ ಕಾರ್ಯಕ್ರಮದಡಿ ಪಿ.ಎ.ಬಿ. ಅನುಮೋದನೆಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 2012-13ನೇ ಸಾಲು ಹಾಗೂ 2014-15 ನೇ ಸಾಲಿನಲ್ಲಿ ಖರೀದಿಸಲಾಗಿದ್ದ ಅಡುಗೆ ಪಾತ್ರ-ಪರಿಕರಗಳ ಬದಲಾವಣೆಗಾಗಿ ಅನುಮೋದನ ನೀಡಿದ್ದು, ಅವುಗಳ ಬದಲಾವಣೆ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪಿ.ಎಂ. ಪೋಷಣ್ ಯೋಜನೆಯಡಿ 2023-24ನೇ ಸಾಲಿನ ಪಿ.ಎ.ಬಿ ಸಭಾ ನಡವಳಿಯಲ್ಲಿ ರಾಜ್ಯ ಸರ್ಕಾರವು ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅನುದಾನ (AWP & B) ಮೂಲಕ ಸಲ್ಲಿಸಿದ ಪ್ರಸ್ತಾವನೆಯಂತೆ ರಾಜ್ಯದ ಒಟ್ಟು 14030 (ಸರ್ಕಾರಿ/ಅನುದಾನಿತ ಶಾಲೆ) ಗಳಿಗೆ ಹಳೆಯದಾದ ಅಡುಗೆ ಪಾತ್ರ-ಪರಿಕರಗಳ ಬದಲಾವಣೆಗೆ ಅನುಮೋದನೆ ನೀಡಿರುತ್ತಾರೆ.

ಉಲ್ಲೇಖ (2) (ಪ್ರತಿ ಲಗತ್ತಿಸಿದೆ) ರ ಕೇಂದ್ರ ಸರ್ಕಾರದ ಆದೇಶದನ್ವಯ 14030 ಸರ್ಕಾರಿ / ಅನುದಾನಿತ ಶಾಲೆಗಳಲ್ಲಿ ಪಾತ್ರ-ಪರಿಕರಗಳ ಬದಲಾವಣೆಗೆ ಅನುದಾನ ಹಂಚಿಕೆ ಮಾಡಿ ಈ ಕೆಳಕಂಡಂತೆ ಶಾಲೆಗಲ್ಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿರುತ್ತದೆ.

ಉಲ್ಲೇಖ-3 (ಪ್ರತಿ ಲಗತ್ತಿಸಿದೆ) ರ ಸರ್ಕಾರದ ಆದೇಶದನ್ವಯ 2023-24ನೇ ಸಾಲಿಗೆ 2012-13 ಮತ್ತು 2014-15ನೇ ಸಾಲಿನಲ್ಲಿ ಮಂಜೂರು ಮಾಡಲಾಗಿದ್ದ ಒಟ್ಟು 18971 ಶಾಲೆಗಳ ಪೈಕಿ 14030 ಶಾಲೆಗಳ ಅಡುಗೆ ಪಾತ್ರ-ಪರಿಕರಗಳ ಬದಲಾವಣೆ ಮಾಡಿ ಹೊಸದಾಗಿ ಅಡುಗೆ ಪಾತ್ರಗಳನ್ನು ಖರೀದಿಸಲು ಅಗತ್ಯವಿರುವ ಕೇಂದ್ರದ ಪಾಲು ರೂ. 1032.06 ಲಕ್ಷಗಳು + ರಾಜ್ಯದ ಪಾಲು ರೂ. 688.04 ಲಕ್ಷಗಳು ರೂ. 1720.10 ಲಕ್ಷಗಳ ಅನುದಾನವನ್ನು ಈಗಾಗಲೇ ನಿಗದಿಯಾಗಿರುವ ಅನಾವರ್ತಕ ಅನುದಾನ (Non-recurring grants)ದಡಿ ಪಿ.ಎಂ.ಪೋಷಣ್ ಯೋಜನೆ ಕಾರ್ಯಕ್ರಮದ ಪಿಎಫ್‌ಎಂಎಸ್‌ ಮಾಡ್ಯೂಲ್‌ನ ಅಡಿಯಲ್ಲಿ ರೂ.8853.05 ಲಕ್ಷಗಳ ಪರಿಷ್ಕೃತ ವಾರ್ಷಿಕ ಅನುದಾನದ ಮಿತಿಯಲ್ಲಿ ಬಿಡುಗಡೆ ಮಾಡುವ ಅನುದಾನದಿಂದ ಭರಿಸಲು ತಿಳಿಸಿದೆ. ಈ ಸಂಬಂಧ ಹೊಸದಾಗಿ ಪಾತ್ರೆ-ಪರಿಕರಗಳನ್ನು ಖರೀದಿಸಬೇಕಿರುವ ಶಾಲೆಗಳ (ತಾಲ್ಲೂಕುವಾರು ಪಟ್ಟಿ) ಪಟ್ಟಿಯೊಂದಿಗೆ ಜಿಲ್ಲಾವಾರು ನಿಗದಿಪಡಿಸಿರುವ ಅನುದಾನದ ಪಟ್ಟಿಯನ್ನು ಅನುಬಂಧಿಸಿದೆ.

14030 ಶಾಲೆಗಳಲ್ಲಿ ಅಡುಗೆ ಪಾತ್ರೆಗಳನ್ನು ಬದಲಾವಣೆ ಮಾಡಿ ಹೊಸ ಅಡುಗೆ ಪಾತ್ರೆಗಳ ಖರೀದಿ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-1999 ಮತ್ತು ತಿದ್ದುಪಡಿ ಅಧಿನಿಯಮ 2020 (KTPP Act) ಹಾಗೂ ಸದರಿ ಅಧಿನಿಯಮಗಳಡಿ ಹೊರಡಿಸಲಾಗಿರುವ ಎಲ್ಲಾ ನಿಯಮಗಳನ್ನು ಚಾಚು ತಪ್ಪದೇ ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

ಉಲ್ಲೇಖ-4 (ಪ್ರತಿ ಲಗತ್ತಿಸಿದೆ) ರಲ್ಲಿ ನಿರ್ದೇಶಕರು, ಪಿಎಂಪೋಷಣ್, ಬೆಂಗಳೂರು ರವರ ಪತ್ರದಲ್ಲಿ ತಿಳಿಸಿರುವಂತೆ ಸ್ಪೇನ್‌ಲೆಸ್ ಪಾತ್ರಗಳನ್ನು (ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುವಂತೆ ಸೂಚಿಸಲಾಗಿದೆ) ಮಾತ್ರ ಅನುಮೋದಿಸಿರುವ 14030 ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಖರೀದಿಸಲು ತಿಳಿಸಿದೆ. ನಿಯಮಾನುಸಾರ ಖರೀದಿಸಿದ ನಂತರದಲ್ಲಿ (15 ದಿನಗಳೊಳಗಾಗಿ) ಬಿಡುಗಡೆಯಾದ ಅನುದಾನದ ಬಳಕೆ/ಉಳಿಕೆಯ (ಶಾಲಾವಾರು ಪಡೆದಿರುವ ಉಪಯೋಗಿತ ಪ್ರಮಾಣ ಪತ್ರದೊಂದಿಗೆ) ಕ್ರೂಢೀಕೃತ ಉಪಯೋಗಿತ ಪ್ರಮಾಣ ಪತ್ರವನ್ನು ದೃಢೀಕರಿಸಿ ಈ ಕಛೇರಿಯ ಅಂಚೆ ವಿಳಾಸಕ್ಕೆ (Hard copy) ಹಾಗೂ ಇ-ಮೇಲ್ ಸಂ: mdmskarnataka@gmail.com ಮತ್ತು Smdmskarnataka@gmail.com ವಿಳಾಸಕ್ಕೆ Scan ಮಾಡಿದ ಪ್ರತಿಯನ್ನು ಕಡ್ಡಾಯವಾಗಿ ನಲ್ಲಿಸುವುದು.

ಈ ಪ್ರಕ್ರಿಯೆಯನ್ನು ಅತೀ ತುರ್ತಾಗಿ ಜಿಲ್ಲಾ ಹಂತದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ಪಂಚಾಯತ್‌ರವರು ನಿರ್ವಹಿಸಲು ಈ ಮೂಲಕ ಸೂಚಿಸಿದೆ.

Good news for government/aided schools in the state: State government releases funds for purchase of new cooking utensils ರಾಜ್ಯದ ಸರ್ಕಾರಿ/ಅನುದಾನಿತ ಶಾಲೆಗಳಿಗೆ ಗುಡ್‌ ನ್ಯೂಸ್‌ : ಹೊಸ ಅಡುಗೆ ಪಾತ್ರೆ-ಪರಿಕರಗಳ ಖರೀದಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
Share. Facebook Twitter LinkedIn WhatsApp Email

Related Posts

ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಬಹುಮುಖ್ಯ: ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಚ್‌.ಎಸ್‌.ರಾಘವೇಂದ್ರ ಸಲಹೆ

03/05/2026 2:32 PM3 Mins Read
reduce-refrigerator-electricity-bill-kannada-tips

ಫ್ರಿಡ್ಜ್ ನಲ್ಲಿ ಈ ಬಟನ್ ಒತ್ತಿದರೆ ಸಾಕು ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

03/05/2026 1:50 PM2 Mins Read

SHOCKING : ರಾಜ್ಯದಲ್ಲಿ ಘೋರ ಕೃತ್ಯ : ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ, ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ!

03/05/2026 1:47 PM1 Min Read
Recent News

ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಬಹುಮುಖ್ಯ: ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಚ್‌.ಎಸ್‌.ರಾಘವೇಂದ್ರ ಸಲಹೆ

03/05/2026 2:32 PM
reduce-refrigerator-electricity-bill-kannada-tips

ಫ್ರಿಡ್ಜ್ ನಲ್ಲಿ ಈ ಬಟನ್ ಒತ್ತಿದರೆ ಸಾಕು ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

03/05/2026 1:50 PM

SHOCKING : ರಾಜ್ಯದಲ್ಲಿ ಘೋರ ಕೃತ್ಯ : ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ, ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ!

03/05/2026 1:47 PM

SHOCKING : ಬೆಚ್ಚಿ ಬೀಳಿಸೋ ಕೃತ್ಯ : ಇಟ್ಟಿಗೆಯಿಂದ ಜಜ್ಜಿ ನಾಲ್ವರು ಮಕ್ಕಳ ಬರ್ಬರ ಹತ್ಯೆ, ತಾಯಿ ನಾಪತ್ತೆ.!

03/05/2026 1:39 PM
State News
KARNATAKA

ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಬಹುಮುಖ್ಯ: ಮಾದಾರ ಚನ್ನಯ್ಯ ಗುರುಪೀಠದ ಸಿಇಒ ಎಚ್‌.ಎಸ್‌.ರಾಘವೇಂದ್ರ ಸಲಹೆ

By kannadanewsnow0903/05/2026 2:32 PM KARNATAKA 3 Mins Read

ನಾಯಕನಹಟ್ಟಿ: ಬಡ್ಡಿ ಹಾಗೂ ಜೀವನದ ಭದ್ರತೆಗೆ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದಂತೆ ಎಐ ಯುಗದಲ್ಲಿ ಶಿಕ್ಷಣ ಮತ್ತು ಜ್ಞಾನವನ್ನು ಠೇವಣಿಯನ್ನಾಗಿಸಬೇಕಿದೆ ಎಂದು…

reduce-refrigerator-electricity-bill-kannada-tips

ಫ್ರಿಡ್ಜ್ ನಲ್ಲಿ ಈ ಬಟನ್ ಒತ್ತಿದರೆ ಸಾಕು ಅರ್ಧದಷ್ಟು ಕಡಿಮೆ ಬರಲಿದೆ ಕರೆಂಟ್ ಬಿಲ್.!

03/05/2026 1:50 PM

SHOCKING : ರಾಜ್ಯದಲ್ಲಿ ಘೋರ ಕೃತ್ಯ : ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ, ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಂದ ಪ್ರಿಯಕರ!

03/05/2026 1:47 PM

ಬೆಂಗಳೂರಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ!

03/05/2026 1:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.