ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಇಂದು ಮಿತ್ರ ಸಪ್ತಮಿ. ಹೀಗಾಗಿ ಒಳ್ಳೆಯ ದಿನವಾಗಿದ್ದರಿಂದ ಚಿನ್ನಾಭರಣ ಖರೀದಿ ಮಾಡುವವರಿಗೆ ಡಬಲ್ ಧಮಾಕಾವಾಗಿದೆ. ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಚಿನ್ನದ ಬೆಲೆ ನಿನ್ನೆ ಸ್ಥಿರವಾಗಿತ್ತು. ಬೆಳ್ಳಿಯ ದರ ಸ್ಥಿರವಾಗಿದೆ. ಬೆಳ್ಳಿಯ ದರ ನಿನ್ನೆ ಕಿಲೋ ಮೇಲೆ 400 ರೂಪಾಯಿ ಇಳಿದಿತ್ತು.
ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ, ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಆದಾಗ್ಯೂ, ನಗರದಿಂದ ನಗರಕ್ಕೆ ಚಿನ್ನ, ಬೆಳ್ಳಿ ದರಗಳಲ್ಲಿ ವ್ಯತ್ಯಾಸವಾಗುತ್ತವೆ ಎಂಬುದನ್ನೂ ಗಮನಿಸಬೇಕು.
ದೇಶದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 100 ರೂಪಾಯಿ ಇಳಿದು, 48,560 ರೂಪಾಯಿ ಇದ್ದುದು, 48,460 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ ಅಪರಂಜಿ ಚಿನ್ನದ ದರ 10 ಗ್ರಾಂಗೆ 100 ರೂಪಾಯಿ ಇಳಿದು 52,980 ರೂಪಾಯಿ ಇದ್ದುದು 52,880 ರೂಪಾಯಿ ಆಗಿದೆ. ಆದರೆ, ಬೆಳ್ಳಿಯ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ ದರ ಹೀಗಿದೆ.
ಬೆಂಗಳೂರು- 48,510 ರೂಪಾಯಿ.
ಮಂಗಳೂರು- 48,510 ರೂಪಾಯಿ.
ಮೈಸೂರು- 48,510 ರೂಪಾಯಿ.
ಚೆನ್ನೈ- 49,160 ರೂಪಾಯಿ.
ಮುಂಬೈ- 48,460 ರೂಪಾಯಿ.