ಚೀನಿವಾರಪೇಟೆ: ಭಾರತದಲ್ಲಿ ಚಿನ್ನದ ದರಗಳು ಗುರುವಾರ ಸ್ವಲ್ಪ ಕುಸಿತವನ್ನು ಕಂಡಿವೆ. ದೆಹಲಿಯಲ್ಲಿ, ಖರೀದಿದಾರರು 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ 10 ಗ್ರಾಂಗೆ 46,400 ರೂ., 24 ಕ್ಯಾರೆಟ್ನ 10 ಗ್ರಾಂಗೆ 51,780 ರೂ ಇದೆ. ಕಳೆದ 24 ಗಂಟೆಗಳಲ್ಲಿ ಭಾರತದ ವಿವಿಧ ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಚೆನ್ನೈನಲ್ಲಿ ಇಂದು 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 52,285 ರೂ., 22 ಕ್ಯಾರೆಟ್ (10 ಗ್ರಾಂ) 47,927 ರೂ ಆಗಿದೆ. ಭಾರತದಲ್ಲಿ ಸೆಪ್ಟೆಂಬರ್ 15, 2022 ರಂದು 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗುರುವಾರದ ವೇಳೆಗೆ, ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ) 50,300 ರೂ., 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 46,080 ರೂ. ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 50,780 ರೂ ಮತ್ತು 22 ಕ್ಯಾರೆಟ್ (10 ಗ್ರಾಂ) 46,550 ರೂ. ಕೋಲ್ಕತಾದಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 50,620 ರೂ., 22 ಕ್ಯಾರೆಟ್ (10 ಗ್ರಾಂ) 46,400 ರೂ. ಮತ್ತೊಂದೆಡೆ, ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ) 50,620 ರೂ., 22 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 46,400 ರೂ ಆಗಿದೆ.