ಬೆಂಗಳೂರು : ‘ಶುಚಿತ್ವದ ನಡಿಗೆ – ಹೆಣ್ಣುಮಕ್ಕಳ ಆತ್ಮವಿಶ್ವಾಸದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಬದ್ಧವಾಗಿದ್ದು, ರಾಜ್ಯದ ಹದಿಹರೆಯದ ಹೆಣ್ಣುಮಕ್ಕಳ ಋತುಚಕ್ರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ 71.83 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಮೂಲಕ ‘ಶುಚಿ’ ಯೋಜನೆಗೆ ಮರುಚಾಲನೆ ನೀಡಿದೆ.
ನಾಡಿನ ಸುಮಾರು 19 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಯೋಜನೆಯ ಫಲಾನುಭವಿಗಳು. ‘ಶುಚಿ’ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ 2,35,74,084 ಸ್ಯಾನಿಟರಿ ಪ್ಯಾಡ್ ಯುನಿಟ್‌ಗಳ ವಿತರಣೆ ಮಾಡಲಾಗುತ್ತಿದೆ. 10,38,912 ಸುಸ್ಥಿರ ‘ಮುಟ್ಟಿನ ಕಪ್’ (Menstrual Cups) ವಿತರಿಸಲಾಗುತ್ತಿದೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳ ಎಲ್ಲಾ ನೋಂದಾಯಿತ ವಿದ್ಯಾರ್ಥಿನಿಯರಿಗೆ ಇದರ ಸೌಲಭ್ಯ ತಲುಪುತ್ತದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಹಾಗೂ 9ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ಯಾಡ್‌ಗಳ ಜೊತೆಗೆ ಪರಿಸರ ಸ್ನೇಹಿ ಮುಟ್ಟಿನ ಕಪ್ ನೀಡಲಾಗುತ್ತಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯು ಸಹಯೋಗದೊಂದಿಗೆ “ಅಕ್ಕ ಪಡೆ” ಎಂಬ ಒಂದು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಅಕ್ಕ ಪಡೆ ರಚನೆ ಮತ್ತು ಕಾರ್ಯ ವಿಧಾನಗಳ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
‘ಶುಚಿತ್ವದ ನಡಿಗೆ – ಹೆಣ್ಣುಮಕ್ಕಳ ಆತ್ಮವಿಶ್ವಾಸದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಬದ್ಧವಾಗಿದ್ದು, ರಾಜ್ಯದ ಹದಿಹರೆಯದ ಹೆಣ್ಣುಮಕ್ಕಳ ಋತುಚಕ್ರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ 71.83 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಮೂಲಕ 'ಶುಚಿ' ಯೋಜನೆಗೆ ಮರುಚಾಲನೆ ನೀಡಿದೆ.
ನಾಡಿನ ಸುಮಾರು… pic.twitter.com/pzSRWxCjwC
— DIPR Karnataka (@KarnatakaVarthe) January 9, 2026
ಪ್ರಸ್ತುತ ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ (ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ & ಪೋಕ್ಸ್) ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸೆಗೊಳಪಟ್ಟಿರುತ್ತಾರೆ.. ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರಖರವಾಗಿ ನಡೆಯುವ ಅಪರಾಧಗಳ ಬಗ್ಗೆ ಕಾನೂನು ಅರಿವು & ಜಾಗೃತಿ ಮೂಡಿಸಲು ಶಿಕ್ಷಣ ನೀಡುವುದು, ಜೊತೆಗೆ ಸಂಕಷ್ಟದಲ್ಲಿ ಇರುವ ಮಹಿಳಾ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ/ ನೆರವು ನೀಡುವ ಉದ್ದೇಶದಿಂದ “ಅಕ್ಕ ಪಡೆ” ಎಂಬ ತಂಡವನ್ನು ದಿನಾಂಕ:28/11/2025 ರಿಂದ ರಾಜ್ಯದ 31 ಜಿಲ್ಲೆ & 5 ಪೊಲೀಸ್ ಕಮೀಷನರೇಟ್‌ಗಳಲ್ಲಿ ಜಾರಿಗೆ ತರಲಾಗಿದೆ.
“ಅಕ್ಕ ಪಡೆಯ ರಚನೆ”
ಅಕ್ಕ ಪಡೆಯ ತಂಡಕ್ಕೆ ಪ್ರತಿ ಜಿಲ್ಲೆ/ ಕಮೀಷನರೇಟ್‌ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು 04 ಸಂಖ್ಯೆಯ ಮಹಿಳಾ ಹೋಂಗಾರ್ಡ್‌ಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸತಕ್ಕದ್ದು, ಅಲ್ಲದೇ ವೈಯಕ್ತಿಕವಾಗಿ ಗಮನ ಹರಿಸಿ ಸದೃಢ ದೇಹದಾರ್ಡ್ಯತೆ ಮತ್ತು ಆರೋಗ್ಯ ಹೊಂದಿರುವ 35 ವರ್ಷದೊಳಗಿನ ರವರನ್ನು ನೇಮಿಸುವುದು.
ಆಯ್ಕೆ ಮಾಡಿದ ಮಹಿಳಾ ಹೋಂಗಾರ್ಡ್ ರವರಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನಗಳ ಕುರಿತು ಸಂಪೂರ್ಣ ತರಬೇತಿಯನ್ನು ನೀಡಿ ಅವರಿಗೆ ಈ ಬಗ್ಗೆ ಕೈಪಿಡಿಯನ್ನು ನೀಡಿ ಕರ್ತವ್ಯವನ್ನು ನಿರ್ವಹಿಸಲು ತಿಳಿಸುವುದು. ಒಂದು ವಾರದ ತರಬೇತಿ ನೀಡಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುವುದು.
ಅಕ್ಕ ಪಡೆ ತಂಡದಲ್ಲಿ ಕರ್ತವ್ಯ ನಿರ್ವಹಿಸುವ 04 ಮಹಿಳಾ ಹೋಂ ಗಾರ್ಡ್ ರವರಿಗೆ ಸರ್ಕಾರವು ನಿಗಧಿಪಡಿಸಿದ ವೇತನದ ವೆಚ್ಚವನ್ನು ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆಯಿಂದ ಗೌರವ ಧನ ಮಂಜೂರಿಸುವುದು ಅಲ್ಲದೇ ಅಕ್ಕ ಪಡೆ ತಂಡಗಳು ಜಿಲ್ಲಾ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಸ್ತು ಸಂಚರಿಸಲು ಅಗತ್ಯವಾದ ವಾಹನಗಳನ್ನು (ಮಹೇಂದ್ರ ಬೊಲೆರೊ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಂಚಿಕೆಮಾಡಲಾಗುವುದು. ಇಲಾಖೆಯಿಂದ ಘಟಕಗಳಿಗೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡಲಾದ ವಾಹನಗಳ ಚಾಲನೆ, ನಿರ್ವಹಣೆ, ಮತ್ತು ಇಂಧನದ ವೆಚ್ಚವನ್ನು ಆಯಾ ಪೊಲೀಸ್ ಇಲಾಖೆಯ ಘಟಕಾಧಿಕಾರಿಗಳು ಸಾರಿಗೆ ವೆಚ್ಚದಡಿ ಭರಿಸಲು ಕ್ರಮವಹಿಸಬೇಕಾಗಿರುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆಮಾಡಲಾಗಿರುವ ವಾಹನವನ್ನು ಅಕ್ಕ ಪಡೆಯ ಕರ್ತವ್ಯಕ್ಕೆ ಮಾತ್ರ ಉಪಯೋಗಿಸುವುದು ಮತ್ತು ಸದರಿ ವಾಹನಕ್ಕೆ ಪ್ರತ್ಯಕ ಲಾಗ್ ಬುಕ್ ನಿರ್ವಹಣೆಯನ್ನು ಮಾಡಲು ಸೂಚಿಸಿದೆ.
ಅಕ್ಕ ಪಡೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಹೋಂ ಗಾರ್ಡ್ ಗಳಿಗೆ ಕಮಾಂಡೋ (camouflage) ಸಮವಸ್ತ್ರವನ್ನು ಆಯಾ ಜಿಲ್ಲಾ ಪೊಲೀಸ್ ಮತ್ತು ಕಮೀಷನರೇಟ್ ಕಛೇರಿಯಿಂದ ಒದಗಿಸುವುದು.
ಅಕ್ಕ ಪಡೆಯ ಕಾರ್ಯನಿರ್ವಹಣೆಯನ್ನು ಜಿಲ್ಲಾ ಮತ್ತು ಕಮೀಷನರೇಟ್ ಮಟ್ಟದಲ್ಲಿ ಪರಿಶೀಲಿಸಲು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಕೆಳಕಂಡಂತೆ ಸಮಿತಿಯನ್ನು ರಚಿಸುವುದು
ಅಕ್ಕ ಪಡೆಯ ಕಾರ್ಯ ಮತ್ತು ಜವಾಬ್ದಾರಿಗಳು
ಜಾಗೃತಿ: ಅಕ್ಕ ಪಡೆಯ ತಂಡವು ಶಾಲಾ, ಕಾಲೇಜು ಮತ್ತು ವಿಧ್ಯಾರ್ಥಿ/ವಿಧ್ಯಾರ್ಥಿನಿಯರ ವಸತಿ ನಿಲಯಗಳಿಗೆ ಪ್ರತಿ ವಾರ ಕಡ್ಡಾಯವಾಗಿ ಭೇಟಿ ನೀಡುವುದು, ಅಲ್ಲದೆ ಸಾರ್ವಜನಿಕ ಜನ ಸಂದಣಿ ಸ್ಥಳಗಳಲ್ಲಿ ಮಹಿಳೆಯರ ವಿರುದ್‌ದ ಲೈಂಗಿಕ ಕಿರುಕಳು ಕುರಿತು ಮೂಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು.
ಅಕ್ಕ ಪಡೆಯ ತಂಡವು ಪ್ರತಿ ನಿತ್ಯ ಜಿಲ್ಲಾ/ ಕಮೀಷನರೇಟ್‌ನ ವ್ಯಾಪ್ತಿಯಲ್ಲಿ ಬರುವ ಶಾಲಾ ಮತ್ತು ಕಾಲೇಜುಗಳಿಗೆ ತೆರಳಿ ಮಕ್ಕಳಲ್ಲಿ ಪೋಕ್ಸ್ ಮತ್ತು ಸೈಬರ್ ಅಪರಾಧ ಹಾಗೂ ಮಾದಕ ವಸ್ತು ಸೇವನೆ ದುಷ್ಪರಿಣಾಮದ ಬಗ್ಗೆ ಜಾಗೃತಿಯ ಕುರಿತು ಅರಿವು ಮೂಡಿಸುವುದು.
ವಾರದಲ್ಲಿ ಒಂದು ದಿನ ಜಿಲ್ಲೆಯ ಇತರೇ ತಾಲ್ಲೂಕುಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳ ಶಾಲೆ & ಕಾಲೇಜುಗಳು ಹಾಗೂ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಜನನಿಬಿಡ ಪದೇಶಗಳಲ್ಲಿ ಗಸ್ತು (Patroling) ಮೂಲಕ ಮಹಿಳೆ & ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.
ಜಿಲ್ಲೆಯಲ್ಲಿ/ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜುಗಳಲ್ಲಿನ ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿಯ ಹೆಣ್ಣು ಮಕ್ಕಳೊಂದಿಗೆ ಸಂವಾದ ನಡೆಸಿ ಕುಂದು ಕೊರತೆ ಮತ್ತು ಸುರಕ್ಷತೆ ಕುರಿತಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದು.
ಗಸ್ತು ಸಂದರ್ಭದಲ್ಲಿ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ತುರ್ತಾಗಿ ERSS 112 ಜೊತೆ ಸಂವಹನೆ ಮಾಡಿ ಸೂಕ್ತ ರಕ್ಷಣೆಯನ್ನು ಒದಗಿಸುವುದು.
ಮಹಿಳೆ ಮತ್ತು ಮಕ್ಕಳ ವಿರುದ್ಧ ಸಂಭವಿಸುವ ಪ್ರಮುಖ ಪ್ರಕರಣಗಳ ಬಗ್ಗೆ ಜಿಲ್ಲಾ/ಕಮೀಷನರ್ ಪೊಲೀಸ್ ಕಛೇರಿಯ ನಿಯಂತ್ರಣ ಕೊಠಡಿಗೆ (Control Room) ಮಾಹಿತಿಯನ್ನು ಶೀಘ್ರವಾಗಿ ರವಾನಿಸುವುದು.
ಮಹಿಳಾ ಕಿರುಕುಳ ಪ್ರಕರಣಗಳ ಬಗೆ, ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡುವುದು.
ಮಹಿಳೆ ಮತ್ತು ಮಕ್ಕಳಿಗೆ ಸ್ವಯಂ ರಕ್ಷಣೆ ಕಾರ್ಯವಿಧಾನದ ತರಬೇತಿ ನೀಡುವುದು,
ಮಹಿಳೆಯರ ಕಿರುಕುಳ ಮತ್ತು ಈವ್ ಟೇಸಿಂಗ್ ತಡೆಗಟ್ಟಲು ಶಾಲೆ ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಮಾಲ್‌ಗಳು, ಸ್ಥಳೀಯ ಮಾರುಕಟ್ಟೆಗಳಿಗೆ, ದಾರ್ಮಿಕ ಸ್ಥಳಗಳಲ್ಲಿ, ಬಸ್/ ರೈಲ್ವೇ/ ಮೇಟ್ರೋ ನಿಲ್ದಾಣಗಳು ಹಾಗೂ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಿಯಮಿತವಾಗಿ ಬೇಟಿ ನೀಡಿ ಮುಂಜಾಗೃತ ಕ್ರಮ ಕೈಗೊಳ್ಳುವುದು
ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಅವರಿಚಿತರ ಬಗ್ಗೆ ಎಚ್ಚರದಿಂದಿರುವುದರ ಬಗ್ಗೆ, ಜಾಗೃತಿ ಮೂಡಿಸುವುದು.
POCSO, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ, ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು.
ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯಗಳ ದುರುವಯೋಗ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ, ಜಾಗೃತಿ ಮೂಡಿಸುವುದು.
ಸಂಚಾರ ನಿಯಮಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು.
ಸಹಾಯವಾಣಿ 1098 181, 112, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವುದು.
ಸಾಮಾಜಿಕ ಜಾಲತಾಣಗಳಿಂದ ಮಹಿಳೆ ಮತ್ತು ಮಕ್ಕಳ ವಿರುದ್ಧ ಸಂಭವಿಸುವ * ಸೈಬರ್ ಅಪರಾಧಗಳ ದುಷ್ಪರಿಣಾಮಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು/ ಜಾಗೃತಿ ಮೂಡಿಸುವುದು.
ಶಾಲೆ, ಕಾಲೇಜು, ಹುಡುಗಿಯರು ಮತ್ತು ಉದ್ಯೋಗಸ್ತ ಮಹಿಳೆಯರ ವಸತಿ ನಿಲಯಗಳ ಆವರಣದಲ್ಲಿ, ದುಷ್ಕರ್ಮಿಗಳ ಮೇಲೆ ನಿಗಾ ಇರಿಸುವುದು.
ಸಿಗ್ನಲ್ ಬಳಿ ಮಹಿಳೆ ಮತ್ತು ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವ ಜೊತೆಗೆ ವಿಶೇಷವಾಗಿ ನಿಗಾವಹಿಸುವುದು.
ಕಳ್ಳಸಾಗಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು.
ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂಧಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವುದು.









