ಬೆಂಗಳೂರು : ರೈತರಿಗೆ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2024-25ನೇ ಸಾಲಿನ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಆಸಕ್ತಿ ಹೊಂದಿರುವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮದಡಿ ಸಾಲ ಸೌಲಭ್ಯವು 2024 ಸೆಪ್ಟಂಬರ್ 15 ರಿಂದ 2025 ಮಾರ್ಚ್ 31 ರವರಗೆ ಮುಂದುವರೆಸಲಾಗುವುದು. ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿAದ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಸಲ್ಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ-9482943111, ಚಳ್ಳಕೆರೆ-9448816499, ಹೊಳಲ್ಕೆರೆ- 9972965479, ಹೊಸದುರ್ಗ- 9945298407, ಹಿರಿಯೂರು-9483451044, ಮೊಳಕಾಲ್ಮೂರು- 9900964820 ಗೆ ಸಂಪರ್ಕಿಸಬಹುದು ಎಂದು ಪಶು ಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.