ಧಾರವಾಡ : 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತಿವೃಷ್ಠಿಯಿಂದ ಧಾರವಾಡ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತು ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ (FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಏಳು ತಾಲ್ಲೂಕಿನ 69,573 ರೈತ ಫಲಾನುಭವಿಗಳಿಗೆ ರೂ.48.45 ಕೋಟಿಗಳನ್ನು ಒಟ್ಟು ಕ್ಷೇತ್ರ 55,809.19 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ ಒಂದನೇ ಹಂತವಾಗಿ ಸೆಪ್ಟಂಬರ್ ತಿಂಗಳಲ್ಲಿ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿ ಒಟ್ಟು 19,058 ಜನ ರೈತರಿಗೆ ರೂ.6.34 ಕೋಟಿ ಒಟ್ಟು ಕ್ಷೇತ್ರ 7,706.51 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಧಾರವಾಡ ಜಿಲ್ಲೆಯ 7 ತಾಲ್ಲೂಕುಗಳಿಗೆ ಎರಡನೇ ಹಂತದಲ್ಲಿ ಈಗಾಗಲೇ ಒಟ್ಟು 50,515 ಜನ ರೈತರಿಗೆ ರೂ. 42.11 ಕೋಟಿ ಒಟ್ಟು ಕ್ಷೇತ್ರ 48,102.68 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಎರಡನೇ ಹಂತದಲ್ಲಿ ಧಾರವಾಡ ತಾಲ್ಲೂಕಿನ 9,132 ಫಲಾನುಭವಿಗಳಿಗೆ ರೂ.758.30 ಲಕ್ಷಗಳನ್ನು ಒಟ್ಟು ಕ್ಷೇತ್ರ 9198.70 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಅಳ್ನಾವರ ತಾಲ್ಲೂಕಿನ 69 ಫಲಾನುಭವಿಗಳಿಗೆ ರೂ.3.99 ಲಕ್ಷಗಳನ್ನು ಒಟ್ಟು ಕ್ಷೇತ್ರ 49.48 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಹುಬ್ಬಳ್ಳಿ ತಾಲ್ಲೂಕಿನ 8,616 ಫಲಾನುಭವಿಗಳಿಗೆ ರೂ.791.98 ಲಕ್ಷಗಳನ್ನು ಒಟ್ಟು ಕ್ಷೇತ್ರ 9,551.28 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಹುಬ್ಬಳ್ಳಿ ನಗರ ತಾಲ್ಲೂಕಿನ 741 ಫಲಾನುಭವಿಗಳಿಗೆ ರೂ.63.81 ಲಕ್ಷಗಳನ್ನು ಒಟ್ಟು ಕ್ಷೇತ್ರ 765.37 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಕುಂದಗೋಳ ತಾಲ್ಲೂಕಿನ 19,778 ಫಲಾನುಭವಿಗಳಿಗೆ ರೂ.1,223.27 ಲಕ್ಷಗಳನ್ನು ಒಟ್ಟು ಕ್ಷೇತ್ರ 14,819.30 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ನವಲಗುಂದ ತಾಲ್ಲೂಕಿನ 8,998 ಫಲಾನುಭವಿಗಳಿಗೆ ರೂ.1,121.47 ಲಕ್ಷಗಳನ್ನು ಒಟ್ಟು ಕ್ಷೇತ್ರ 10,714.04 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಅಣ್ಣಿಗೇರಿ ತಾಲ್ಲೂಕಿನ 3,181 ಫಲಾನುಭವಿಗಳಿಗೆ ರೂ.248.35 ಲಕ್ಷಗಳನ್ನು ಒಟ್ಟು ಕ್ಷೇತ್ರ 3,004.51 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಒಟ್ಟಾರೆಯಾಗಿ ಎರಡನೇ ಹಂತದಲ್ಲಿ ಧಾರವಾಡ ಜಿಲ್ಲೆಯ ಏಳು ತಾಲ್ಲೂಕಿನ 50,515 ಫಲಾನುಭವಿಗಳಿಗೆ ರೂ. 4,211.17 ಲಕ್ಷಗಳನ್ನು ಒಟ್ಟು ಕ್ಷೇತ್ರ 48,102.68 ಹೆಕ್ಟರಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.