ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೇತೃತ್ವದ ಸರ್ಕಾರ 1 ವರ್ಷದ ಅಧಿಕಾರವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರೈತರ ಮಕ್ಕಳಿಗೆ ಆರ್ಥಿಕ ನೆರವು ಒದಗಿಸುತ್ತಿರುವ ವಿದ್ಯಾನಿಧಿ ಯೋಜನೆ, ನೇಕಾರ, ಟ್ಯಾಕ್ಸಿ ಚಾಲಕರ ಮತ್ತು ಮೀನುಗಾರರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ.ಎಸ್ ಸಿ/ಎಸ್ ಟಿ ಯುವಕರಿಗೆ ಬಾಬು ಜಗಜೀವನ್ ರಾಂ ಹೆಸರಿನಲ್ಲಿ ಉದ್ಯೋಗ ಕೈಗೊಳ್ಳಲು ಸ್ತ್ರೀ ಸಾಮರ್ಥ್ಯ ಯೋಜನೆ, ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣ, ಯುವಕರಿಗೆ ಆರ್ಥಿಕ ನೆರವು ನೀಡಲು ಸ್ವಾಮಿ ವಿವೇಕಾನಂದ ಯೋಜನೆಗಳನ್ನು ಜಾರಿಗೆ ತರಲಾಗಿದೆ.
8.5 ಲಕ್ಷ ಕಳೆದ ವರ್ಷ ರೈತ ವಿದ್ಯಾರ್ಥಿಗಳು ವಿದ್ಯಾನಿಧಿ ಪಡೆದುಕೊಂಡಿದ್ದರು. 9.98 ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ತಲುಪಿದೆ. ರೈತ ಮಕ್ಕಳಿಗೆ ಇದರಿಂದ ಭರವಸೆ ಮೂಡಿದೆ. ಸಂಧ್ಯಾ ಸುರಕ್ಷಾ ಮಾಸಾಶನ ಎಲ್ಲ ಹೆಚ್ಚು ಮಾಡಿ ಆರ್ಥಿಕ ಆಸರೆ ನೀಡಲಾಗಿದೆ. ಬಡವರಿಗೆ ವಯಸ್ಸಾದವರಿಗೆ ಅಂಗವಿಕಲರಿಗೆ ಕೊಟ್ಟಿದ್ದೇವೆ. ಇತ್ತೀಚೆಗೆ ಎಸ್ಸಿ.ಎಸ್ಟಿ ಸಮುದಾಯಕ್ಕೆ ಯೋಜನಗೆಳನ್ನು ಹೆಚ್ಚಳ ಮಾಡಿದ್ದೇವೆ. 25 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳಿಗೆ ಪುಕ್ಕಟೆ ವಿದ್ಯುತ್ ನೀಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಹೊಸ ಯೋಜನೆಗಳು