ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ದರ 30 ಸಾವಿರ ರೂ.ಗೆ ಮಾರಾಟವಾಗಿದೆ.
ಉಂಡೆ ಕೊಬ್ಬರಿ ಧಾರಣೆ ಏರಿದ್ದು, ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಲ್ ಕೊಬ್ಬರಿ 31,026 ರೂ.ಗೆ ಮಾರಾಟವಾಗಿದೆ.
ಗುರುವಾರದ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ಕನಿಷ್ಠ 28,500 ರೂ., ಮಾದರಿ 30,060 ರೂ.ಗೆ ಮಾರಾಟವಾಗಿದೆ. ಒಟ್ಟು 3,572 ರ ಕ್ವಿಂಟಲ್ ಆವಕವಾಗಿತ್ತು. ಹೊಸ ವರ್ಷದ ಆರಂಭದಲ್ಲೇ ಮತ್ತೊಮ್ಮೆ ಕ್ವಿಂಟಲ್ ಕೊಬ್ಬರಿ ದರ 30 ಸಾವಿರ ರೂ. ದಾಟಿರುವುದು ತೆಂಗು ಬೆಳೆಗಾರರ ಮುಖದಲ್ಲಿ ಹರ್ಷ ಮೂಡಿಸಿದೆ.








