ಬೆಂಗಳೂರು : ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನವನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996 (ಕೇಂದ್ರ ಕಾಯ್ದೆ 1996ರ ಸಂಖ್ಯೆ 27)ರ ಕಲಂ 62ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ’ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕರ್ನಾಟಕ ನಿಯಮಗಳು 2006ರ ನಿಯಮ 45(1) ರಡಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಮೊತ್ತಗಳನ್ನು ಶೈಕ್ಷಣಿಕ ವರ್ಷ 2023-24 ರಿಂದ ಅನ್ವಯವಾಗುವಂತೆ ಅಂತ ತಿಳಿಸಿದೆ.
ಇನ್ನೂ ವಿಶೇಷ ಸೂಚನೆಗಳು ಹೀಗಿದೆ:
1. ಈ ಮೇಲಿನ ಸಹಾಯಧನದ ಮೊತ್ತವು ಶೈಕ್ಷಣಿಕ ವರ್ಷ 2023-24ನೇ ಸಾಲಿನಿಂದ ಅನ್ವಯವಾಗುತ್ತದೆ.
2. ಶೈಕ್ಷಣಿಕ ಸಹಾಯಧನ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯನ್ನು ಪಡೆದಿರಬೇಕು.
3. ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ನೋಂದಣಿ ಸದಸ್ಯತ್ವವು ಚಾಲ್ತಿಯಲ್ಲಿರುಬೇಕು.
4. ಶೈಕ್ಷಣಿಕ ವರ್ಷದ ಪೂರ್ವದ ಮೇ-31ರ ಒಳಗೆ ನೋಂದಣಿಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಾತ್ರ ನಂತರದ ಶೈಕ್ಷಣಿಕ ವರ್ಷದ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
5. ಈ ಮೇಲಿನ ಪಟ್ಟಿಯಲ್ಲಿ ನಿಗದಿಪಡಿಸದಿರುವ ತರಗತಿಗಳಿಗೆ ಅದೇ ಅವಧಿಯ ತತ್ಸಮಾನ ವ್ಯಾಸಂಗಕ್ಕೆ ಇರುವ ಶೈಕ್ಷಣಿಕ ಧನಸಹಾಯವನ್ನು ಪಡೆಯಲು ಅರ್ಹರಿರುತ್ತಾರೆ ಅಂತ ತಿಳಿಸಿದೆ.