ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಚಿಂತಾಮಣಿ ಗೌರಿಬಿದನೂರು ಮುಳಬಾಗಲು ಭಾಗದ ಜನರ ದಶಕಗಳ ಕನಸು ಇಂದು ನನಸಾಗಲಿದೆ. ಈ ಭಾಗದ ಒಟ್ಟು 28 ಜೋಡಿ ಗ್ರಾಮಗಳಿಗೆ ಇಂದು ಪಹಣಿ ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಗ್ಗೆ 10.30ಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಆಡಿಟೋರಿಯಂ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಚಿವ ಕೃಷ್ಣ ಬೈರೇಗೌಡರು ಪಹಣಿ ವಿತರಿಸಲಿದ್ದಾರೆ.