ಬೆಂಗಳೂರು: ಕರ್ನಾಟಕದ ಕೇಂದ್ರ ಸರ್ಕಾರಿ ನೌಕರರು ಮುಂಬಡ್ತಿ ಸೇರಿದಂತೆ ವಿವಿಧ ಬಡ್ತಿಗೆ ಇಲಾಖಾ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯನ್ನು ಈ ಮೊದಲು ಹಿಂದಿ, ಇಂಗ್ಲೀಷ್ ನಲ್ಲಿ ಬರೆಯಬೇಕಿತ್ತು. ಈ ಬಳಿಕ ಪಾಸ್ ಆದ್ರೇ ಮುಂಬಡ್ತಿ ಸಿಗುತ್ತಿತ್ತು. ಈಗ ಕರ್ನಾಟಕದ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಎನ್ನುವಂತೆ ಇನ್ಮುಂದೆ ಕನ್ನಡದಲ್ಲೂ ಮುಂಬಡ್ತಿಗೆ ಇಲಾಖಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಕೇಂದ್ರ ರೈಲ್ವೆ ಹಾಗು ಜಲ ಶಕ್ತಿ ಖಾತೆ ರಾಜ್ಯ ಸಚಿವ ಸೋಮಣ್ಣ ರವರ ಸೂಚನೆಯ ಮೇರೆಗೆ, ನೈಋತ್ಯ ರೈಲ್ವೆ ಇಲಾಖೆಯು LDCE ಹಾಗೂ GDCE (Limited Departmental Competitive Exam & General Departmental Competitive Exam) / ಮುಂಬಡ್ತಿ ಗೆ ಸಂಬಂಧಿಸಿದ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ಸಹ ನಡೆಸಲು ಅಧಿಸೂಚನೆ ಹೊರಡಿಸಿದೆ ಎಂದಿದ್ದಾರೆ.
ಈ ಮೊದಲು ಇಂಗ್ಲಿಷ್ & ಹಿಂದಿ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು. ಇದೀಗ ಇವುಗಳ ಜೊತೆಗೆ, ಕನ್ನಡದಲ್ಲಿ ಸಹ ಪರೀಕ್ಷೆ ನಡೆಸಲಾಗುವುದು. ಇದರಿಂದ ಕನ್ನಡಿಗ ಸಿಬ್ಬಂದಿಗಳಿಗೆ ಸ್ವಭಾಷೆಯಲ್ಲಿ ಪರೀಕ್ಷೆಯನ್ನು ಎದುರಿಸಿ ವೃತ್ತಿ ಜೀವನದಲ್ಲಿ ಅನುಕೂಲವಾಗುವುದು ಎಂದು ಹೇಳಿದ್ದಾರೆ.