ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ದಾಖಲೆಯ 8 ನೇ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ಕ್ಯಾನ್ಸರ್‌ನಿಂದ ರೋಗಿಗಳ ಜೀವ ಉಳಿಸುವ 36 ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವ ಕಾರ್ಯ ಮತ್ತಷ್ಟು ಸುಗಮವಾದಂತಾಗಿದೆ.
ಅಪರೂಪದ ಕಾಯಿಲೆಗಳು ಮತ್ತು ತೀವ್ರ, ದೀರ್ಘ ಸಮಯ ಕಾಡುವ ರೋಗಗಳ ಔಷಧಿಗಳಿಗೆ ಮೂಲ ಆಮದು ಸುಂಕ (ಬಿಸಿಡಿ) ರದ್ದುಪಡಿಸಲಾಗಿದೆ. ಈ ಮೊದಲು ಕೇಂದ್ರ ಸರ್ಕಾರ ಟ್ರಸ್ಸುಝುಮಾಬ್ ಡೆರುಕ್ಸ್ ಕ್ಯಾನ್, ಒಮೆರ್ಟಿನಿಬ್ ಮತ್ತು ಡುರ್ವಲಮಬ್ ಔಷಧಿಗಳಿಗೆ ವಿಧಿಸಲಾಗುತ್ತಿದ್ದ ಶೇ.10 ಆಮದು ಸುಂಕವನ್ನು ಸಂಪೂರ್ಣವಾಗಿ ತೆರವು ಮಾಡಿತ್ತು. ಈಗ ಮತ್ತೆ 36 ಔಷಧಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಇಷ್ಟೇ ಅಲ್ಲದೆ 6 ಜೀವ ಉಳಿಸುವ ಔಷಧಿಗಳ ಮೇಲಿನ ತೆರಿಗೆಯನ್ನು ಶೇ.5 ರಷ್ಟು ಕಡಿತ ಮಾಡಲಾಗಿದೆ. ಇಷ್ಟೇ ಅಲ್ಲದೆ ಈ ಔಷಧಿಗಳನ್ನು ತಯಾರಿಸುವ ಸಗಟು ಉತ್ಪಾದಕರಿಗೆ ತೆರಿಗೆ ವಿನಾಯಿತಿ ಅನ್ವಯ ಆಗಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.