ಬೆಂಗಳೂರು: ರಾಜ್ಯದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಯಾವಾಗ ನೀಡುತ್ತಾರೆ ಅಂತ ಕಾಯುತ್ತಿದ್ದಾರೆ. ಇಂತವರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ 1.73 ಲಕ್ಷ BPL ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರೊಬ್ಬರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಹಿಂದಿನ ಸರ್ಕಾರ ಚುನಾವಣೆಗೆ ಮೊದಲು 2.95 ಲಕ್ಷ ಕಾರ್ಡ್ ಗಳನ್ನು ವಿತರಿಸುವುದು ಬಾಕಿ ಇತ್ತು. ಇವುಗಳನ್ನು ಪರಿಶೀಲಿಸಿ ಸುಮಾರು 2 ಲಕ್ಷ 65 ಸಾವಿರ ಕಾರ್ಡ್ ಗಳನ್ನು ಅರ್ಹತೆಯನ್ನು ಪಡೆದಿದ್ದಾವೆ. ಬಿಪಿಎಲ್ ಒಳಗಡೆ ಬರುತ್ತಾವೆ. 56,930 ಕಾರ್ಡ್ ಬಿಪಿಎಲ್ ಕಾರ್ಡ್ ಕೆಳಗಡೆ ಬರುವುದಿಲ್ಲ. 2 ಲಕ್ಷದ 36 ಸಾವಿರ 152 ಕಾರ್ಡ್ ನಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ಪಡಿತರ ಹೆಸರಿನ ಪಟ್ಟಿಯಲ್ಲಿ ದವಸ ಧಾನ್ಯಗಳನ್ನು ಕೊಡುವ ವ್ಯವಸ್ಥೆಯಾಗಿದೆ.
ರಾಜ್ಯದಲ್ಲಿ 1.73 ಲಕ್ಷ ಕಾರ್ಡ್ ಗಳನ್ನು ವಿತರಣೆ ಮಾಡುವುದು ಬಾಕಿ ಇದೆ. ಅವುಗಳನ್ನು ವಿತರಣೆ ಮಾಡಲಾಗುತ್ತದೆ. ಇವರೆಲ್ಲರೂ ಬಿಪಿಎಲ್ ಕಾರ್ಡ್ ಒಳಗಡೆ ಬರುತ್ತಾರೆ. ಅವರಿಗೆ ಶೀಘ್ರವೇ ಬಿಪಿಎಲ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ. ಪಡಿತರ ದವಸ ಧಾನ್ಯಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಒಟ್ಟಾರೆಯಾಗಿ 1.73 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಆದಷ್ಟು ಶೀಘ್ರ ವಿತರಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ವಿಧಾನಪರಿಷತ್ ಕಲಾಪದಲ್ಲಿ ತಿಳಿಸಿದ್ದಾರೆ.
1.73 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ಆದಷ್ಟು ಶೀಘ್ರ ವಿತರಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ವಿಧಾನಪರಿಷತ್ ಕಲಾಪದಲ್ಲಿ ತಿಳಿಸಿದ್ದಾರೆ.#AssemblySession #BPLCard@CMofKarnataka@siddaramaiah pic.twitter.com/O4MRrcFecP
— DIPR Karnataka (@KarnatakaVarthe) July 16, 2024
ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರನ್ನು ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವೇ?: ಡಿಕೆಶಿ ಪ್ರಶ್ನೆ
ಇನ್ಮುಂದೆ ‘ಅಂಗಾಂಗ ದಾನಿ’ಗಳಿಗೆ ಸ್ವಾತಂತ್ರ್ಯ, ಗಣರಾಜ್ಯೋತ್ಸವ ದಿನದಂದು ‘ಪ್ರಶಂಸಾ ಪತ್ರ’ ನೀಡಿ ಗೌರವ