ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಯಾಗಿ ಬಡವರಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸೋದಕ್ಕಾಗಿ ಜಾರಿಗೆ ತಂದಿರೋ ಯೋಜನೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಹಾಗಾದ್ರೇ ಆಯುಷ್ಮಾನ್ ಯೋಜನೆಗೆ ನೋಂದಾಯಿಸಿಕೊಳ್ಳೋದು ಹೇಗೆ ಅಂತ ಮುಂದೆ ಓದಿ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿದ್ರೇ, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಆರೋಗ್ಯ ಸೌಲಭ್ಯ ಸಿಗಲಿದೆ.
ಹೀಗಿದೆ ಆಯುಷ್ಮಾನ್ ಯೋಜನೆ ಸೌಲಭ್ಯಗಳು
ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೂ ಉಚಿತ ಮತ್ತು ಎಪಿಎಲ್ ಕಾರ್ಡ್ ಕುಟುಂಬಕ್ಕೆ 1.5 ಲಕ್ಷದವರೆಗೆ ಸಹಪಾವತಿ ಆಧಾರದ ಮೇಲೆ ಒಟ್ಟು 1650 ವಿವಿಧ ಬಗೆಯ ಚಿಕಿತ್ಸೆಗಳಿಗೆ ಎಲ್ಲಾ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ.
ತುರ್ತು ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ.
ಆಯುಷ್ಮಾನ್ ಕಾರ್ಡ್ ಸೌಲಭ್ಯಗಳು
ಈ ಯೋಜನೆಯಡಿ ಫಾಲನುಭವಿಗಳಿಗೆ ಉಚಿತವಾಗಿ ಪಿವಿಸಿ ಮಾದರಿಯ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ದೇಶಾದ್ಯಂತ ಶೀಘ್ರ ಚಿಕಿತ್ಸಾ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗೆ ಆನ್ ಲೈನ್ ಮೂಲಕ ರೆಫರಲ್ ಮಾಡಲು ಅನುಕೂಲವಾಗಲಿದೆ.
ಚಿಕಿತ್ಸಾ ಆರೋಗ್ಯ ದತ್ತಾಂಶ ಸಂಗ್ರಹಿಸಿ, ನಂತ್ರದ ಚಿಕಿತ್ಸೆ ಸಂದರ್ಭದಲ್ಲಿ ಹಿಂದಿನ ಚಿಕಿತ್ಸಾ ದತ್ತಾಂಶದ ಮೇಲೆ ಶೀಘ್ರ ಚಿಕಿತ್ಸೆಗೆ ಅನುಕೂಲವಾಗಲಿದೆ.
ಆಯುಷ್ಮಾನ್ ಕಾರ್ಡ್ ಗೆ ಹೀಗೆ ನೋಂದಾಯಿಸಿ
ನೀವು ಆಯುಷ್ಮಾನ್ ಯೋಜನೆಗೆ ನೋಂದಾಯಿಸಿಕೊಳ್ಳೋದಕ್ಕೆ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ, ಸೂಕ್ತ ದಾಖಲೆ ನೀಡಿ, ಕಾರ್ಡ್ ಮಾಡಿಸಿ ಅಥವಾ www.benefciary.nha.gov.in ಜಾಲತಾಣಕ್ಕೆ ಭೇಟಿ ನೀಡಬಹುದು. ಇದಲ್ಲದೇ PMJAY ಮೊಬೈಲ್ ಆಪ್ ಮೂಲಕವೂ ಸ್ವಯಂ ನೀವು ನೋಂದಾಯಿಸಿಕೊಂಡು, ಪಿಡಿಎಫ್ ಕಾರ್ಡ್ ಪಡೆಯಬಹುದಾಗಿದೆ.
ಈ ಸಂಬಂಧದ ಹೆಚ್ಚಿನ ಮಾಹಿತಿಗಾಗಿ 14555 ಅಥವಾ 18004258330ಗೆ ಕರೆ ಮಾಡಿ ಪಡೆಯಬಹುದಾಗಿದೆ.
BREAKING: ‘ಜಾರ್ಖಂಡ್ ವಿಧಾನಸಭೆ’ಯಲ್ಲಿ ವಿಶ್ವಾಸಮತ ಗೆದ್ದ ‘ಸಿಎಂ ಚಂಪೈ ಸೊರೆನ್’ | Jharkhand Floor Test
BIG NEWS: ಬಿಜೆಪಿ ಸಂಸದರೆಲ್ಲ ‘ಶೋ ಪೀಸ್’ಗಳು, ಈಗಿರುವ ‘MP’ಗಳು ಯಾರು ಗಂಡಸರಲ್ಲ – ಶಾಸಕ ಹೆಚ್.ಸಿ ಬಾಲಕೃಷ್ಣ