ಬೆಂಗಳೂರು : ಬಿಎಂಟಿಸಿ ಸಿಬ್ಬಂದಿ ಕರ್ತವ್ಯದ ವೇಳೆ ಅಪಘಾತ ಹೊರತುಪಡಿಸಿ ಬೇರೆ ಕಾರಣದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಗುಂಪು ವಿಮಾ ಯೋಜನೆ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಹಿಂದೆ 3 ಲಕ್ಷ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು 2023ರ ನವೆಂಬರ್ 20ರ ನಂತರದಿಂದ 10 ಲಕ್ಷ ನೀಡಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕಾಗಿ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆಬ್ರವರಿ 29 ರವರೆಗೆ ಅವಕಾಶ
ಗುಂಪು ವಿಮಾ ಯೋಜನೆಗಾಗಿ ಬಿಎಂಟಿಸಿ ಸಿಬ್ಬಂದಿಯಿಂದ ಪಡೆಯಲಾಗುವ ಮಾಸಿಕ ವಂತಿಗೆಯನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ ಪ್ರತಿ ಸಿಬ್ಬಂದಿ ವೇತನದಲ್ಲಿ ಮಾಸಿಕ ರೂ.350 ಕಡಿತಗೊಳಿಸುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿಯೇ ದುಡಿಯುವ ‘ಮಹಿಳೆಯ’ ಕೆಲಸ ಅಮೂಲ್ಯವಾದದು, ಅದಕ್ಕೆ ಬೆಲೆ ಕಟ್ಟಲಾಗದು: ಸುಪ್ರಿಂಕೋರ್ಟ್
ಅದರ ಜತೆಗೆ ಸಿಬ್ಬಂದಿ ಅಪಘಾ ತದಿಂದ ಮೃತಪಟ್ಟರೆ ರೂ.50 ಲಕ್ಷ ಪರಿಹಾರ ಮೊತ್ತ ನೀಡಲಾಗುತ್ತಿದೆ. ಪರಿಹಾರ ಮೊತ್ತ ಹೆಚ್ಚಳವಾದ ಕಾರಣ ವಂತಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಹಿಂದೆ ಗುಂಪು ವಿಮಾ ಯೋಜನೆಗೆ ಸಿಬ್ಬಂದಿಯಿಂದ ಮಾಸಿಕ ರೂ.70 ವಂತಿಗೆ ಪಡೆಯುತ್ತಿತ್ತು. ಇದೀಗ ಮೊತ್ತವನ್ನು 350ಕ್ಕೆ ಹೆಚ್ಚಿಸಿದೆ ಎಂದು ನಿಗಮದ ವ್ಯವಸ್ಥಾಪಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಆಯುಷ್ ಚಿಕಿತ್ಸಾಲಯಗಳಲ್ಲಿ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಜಾರಿ : ದಿನೇಶ್ ಗುಂಡೂರಾವ್