ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ನೊಂದಣಿಯಾಗಿ 18 ವರ್ಷ ಪೂರ್ಣಗೊಂಡ ಫಲಾನುಭವಿಗಳು 2024-25ನೇ ಸಾಲಿನ ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿರುತ್ತಾರೆ.
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅರ್ಹ ಫಲಾನುಭವಿಗಳು ಎಲ್.ಐ.ಸಿ ಭಾಗ್ಯಲಕ್ಷ್ಮೀ ಫಾರಂ ಭರ್ತಿ ಮಾಡಿ, ಫಾರಂನೊಂದಿಗೆ, ಮೂಲ ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮಾಕ್ರ್ಸ್ ಕಾರ್ಡ, ಶಾಲಾ ಧೃಡೀಕರಣ, ಮಗುವಿನ ಬ್ಯಾಂಕ್ ಖಾತೆ, ಮಗು,ತಂದೆ ಮತ್ತು ತಾಯಿ ಆಧಾರ್, ಅಪರೇಷನ್ ಕಾರ್ಡ್, ಚುಚ್ಚುಮದ್ದು ಕಾರ್ಡ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಪೊಷಕರ ದೃಢೀಕರಣ ಲಗತ್ತಿಸಿ ಚಿತ್ರದುರ್ಗ ನಗರದ ಒನಕೇ ಓಬವ್ವ ಕ್ರೀಡಾಂಗಣದ ಹತ್ತಿರದ ಬಾಲ ಭವನ ಆವರಣದ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.